AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವು ಗೆದ್ದ ಬಾಲಕ: ಬೋರ್​ವೆಲ್​ನಲ್ಲಿ ಸಿಲುಕಿದ್ದ 10 ವರ್ಷದ ಬಾಲಕನ ರಕ್ಷಣೆ, ಫಲ ನೀಡಿದ ಕಾರ್ಯಾಚರಣೆ

ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಛತ್ತೀಸಗಡ ಸರ್ಕಾರವು ವಿವಿಧ ಇಲಾಖೆಗಳ ಸುಮಾರು 500 ಸಿಬ್ಬಂದಿಯನ್ನು ನಿಯೋಜಿಸಿತ್ತು

ಸಾವು ಗೆದ್ದ ಬಾಲಕ: ಬೋರ್​ವೆಲ್​ನಲ್ಲಿ ಸಿಲುಕಿದ್ದ 10 ವರ್ಷದ ಬಾಲಕನ ರಕ್ಷಣೆ, ಫಲ ನೀಡಿದ ಕಾರ್ಯಾಚರಣೆ
ಛತ್ತೀಸಗಡದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆ
TV9 Web
| Edited By: |

Updated on:Jun 15, 2022 | 8:42 AM

Share

ರಾಯ್​ಪುರ: ಕೊಳವೆಬಾವಿಯಲ್ಲಿ ಸಿಲುಕಿದ್ದ 10 ವರ್ಷದ ಬಾಲಕನನ್ನು ಸತತ 100 ಗಂಟೆಗಳ ಕಾರ್ಯಾಚರಣೆಯ ನಂತರ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸಗಡದ ಚಾಂಜ್​ಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ ಮನೆಯ ಬಳಿ ಆಡುತ್ತಿದ್ದ ಬಾಲಕ ರಾಹುಲ್ ಸಾಹು, ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ. ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಛತ್ತೀಸಗಡ ಸರ್ಕಾರವು ವಿವಿಧ ಇಲಾಖೆಗಳ ಸುಮಾರು 500 ಸಿಬ್ಬಂದಿಯನ್ನು ನಿಯೋಜಿಸಿತ್ತು. ಸುದೀರ್ಘ ಕಾರ್ಯಾಚರಣೆ ನಡೆಸಿ, ಬಾಲಕನನ್ನು ಜೀವಂತವಾಗಿ ರಕ್ಷಿಸಿದ ಮೊದಲ ಪ್ರಕರಣ ಇದಾಗಿದೆ. ಪ್ರಸ್ತುತ ಬಿಲಾಸ್​​ಪುರದ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ತಜ್ಞ ವೈದ್ಯರ ತಂಡವು ಬಾಲಕನಿಗೆ ಚಿಕಿತ್ಸೆ ಕೊಡುತ್ತಿದೆ.

104 ಗಂಟೆಗಳ ಅವಧಿಯ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಪಡೆ (National Disaster Response Force – NDRF), ಸೇನೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಳೆದ ಶುಕ್ರವಾರ ಸಂಜೆಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು.

ಆಟವಾಡುತ್ತಿದ್ದ ಬಾಲಕ ರಾಹುಲ್ ಸಾಹು ಪಿಹ್ರಿದ್ ಗ್ರಾಮದಲ್ಲಿ ತನ್ನ ಮನೆಯ ಹಿತ್ತಲಿನಲ್ಲಿದ್ದ ಕೊಳವೆಬಾವಿಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಬಿದ್ದಿದ್ದ. ಸುಮಾರು 60 ಆಳದಲ್ಲಿ ಸಿಲುಕಿದ್ದ ಅವನಿಗೆ ಉಸಿರಾಟಕ್ಕೆ ಸಹಾಯವಾಗಲೆಂದು ಪೈಪ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಯಿತು. ಯಶಸ್ವಿ ಕಾರ್ಯಾಚರಣೆಯ ನಂತರ ರಕ್ಷಣಾ ತಂಡವನ್ನು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅಭಿನಂದಿಸಿದರು.

‘ಎಲ್ಲ ಪ್ರಾರ್ಥನೆ ಮತ್ತು ಅವಿರತ, ಬದ್ಧತೆಯ ಕಾರ್ಯಾಚರಣೆಯಿಂದ ರಾಹುಲ್ ಸಾಹು ರಕ್ಷಣೆ ಸಾಧ್ಯವಾಗಿದೆ. ಅವನು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ಬಾಘೇಲ್ ಹೇಳಿದ್ದಾರೆ.

ರಾಹುಲ್ ಸಾಹು ಆರೋಗ್ಯ ಸ್ಥಿರವಾಗಿದೆ. ಅವರನ್ನು ಬಿಲಾಸ್​ಪುರದ ಅಪೊಲೊ ಆಸ್ಪತ್ರೆಗೆ ಕಳಿಸಲಾಗಿದೆ. ಬಾಲಕ ಇದ್ದ ಆಂಬುಲೆನ್ಸ್​ ಕ್ಷಿಪ್ರಗತಿಯಲ್ಲಿ 100 ಕಿಮೀ ದೂರದ ಆಸ್ಪತ್ರೆ ತಲುಪುವಂತೆ ಮಾಡಲು ಗ್ರೀನ್ ಕಾರಿಡಾರ್ ರೂಪಿಸಲಾಗಿತ್ತು ಎಂದು ಬಿಲಾಸ್​ಪುರದ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 am, Wed, 15 June 22