Covid-19 Updates: ಭಾರತದಲ್ಲಿ 24 ಗಂಟೆಯಲ್ಲಿ 8,822 ಕೊವಿಡ್ ಕೇಸ್ ದಾಖಲು; ಮಹಾರಾಷ್ಟ್ರದಲ್ಲಿ ಬಿಎ.5 ರೂಪಾಂತರಿ ಪತ್ತೆ

ಭಾರತದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 4,32,36,695ಕ್ಕೆ ತಲುಪಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನ ಬಿಎ.5 ರೂಪಾಂತರದ ಎರಡು ಪ್ರಕರಣಗಳು ವರದಿಯಾಗಿವೆ.

Covid-19 Updates: ಭಾರತದಲ್ಲಿ 24 ಗಂಟೆಯಲ್ಲಿ 8,822 ಕೊವಿಡ್ ಕೇಸ್ ದಾಖಲು; ಮಹಾರಾಷ್ಟ್ರದಲ್ಲಿ ಬಿಎ.5 ರೂಪಾಂತರಿ ಪತ್ತೆ
ಕೊವಿಡ್-19
TV9kannada Web Team

| Edited By: Sushma Chakre

Jun 15, 2022 | 9:53 AM

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,822 ಹೊಸ ಕೊರೊನಾವೈರಸ್ ಪ್ರಕರಣಗಳು (Coronavirus Cases) ದಾಖಲಾಗಿದೆ. ಇಂದು ಒಂದೇ ದಿನದಲ್ಲಿ 8822 ಕೊವಿಡ್ ಕೇಸುಗಳು ಪತ್ತೆಯಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. 5718 ಚೇತರಿಕೆ ಹೊಂದುವ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,32,45,517ಕ್ಕೆ ತಲುಪಿದೆ. ಭಾರತದಾದ್ಯಂತ ನೀಡಲಾದ ಕೋವಿಡ್ ಲಸಿಕೆಯ ಪ್ರಮಾಣ 195.35 ಕೋಟಿ ಮೀರಿದೆ. ನಿನ್ನೆ ತಮಿಳುನಾಡಿನಲ್ಲಿ 332 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ತಮಿಳುನಾಡಿನಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 34,57,969ಕ್ಕೆ ತಲುಪಿದೆ. ಮಧ್ಯಪ್ರದೇಶದಲ್ಲಿ 43 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿ, ಓರ್ವ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದಲ್ಲಿ ಇಂದು 43 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 10,43,221ಕ್ಕೆ ಏರಿದೆ. ನಿನ್ನೆ 1 ಕೋವಿಡ್ ಸಂಬಂಧಿತ ಸಾವು ವರದಿಯಾದ ನಂತರ ಸಾವಿನ ಸಂಖ್ಯೆ 10,739ಕ್ಕೆ ತಲುಪಿದೆ.

ಗುಜರಾತ್​​ನಲ್ಲಿ 165 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ನಿನ್ನೆ ಗುಜರಾತ್​ನಲ್ಲಿ ಕೊರೊನಾವೈರಸ್​ನಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ. ಗುಜರಾತ್​​ನಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 12,26,528ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ಮಂಗಳವಾರ ಅತಿ ಹೆಚ್ಚು 92 ಪ್ರಕರಣಗಳು, ವಡೋದರಾ 22, ಸೂರತ್ 12 ಮತ್ತು ಗಾಂಧಿನಗರ 10 ಕೊವಿಡ್ ಕೇಸುಗಳು ವರದಿಯಾಗಿದೆ.

ಇದನ್ನೂ ಓದಿ: Covid 4th Wave: ಕೊರೊನಾವೈರಸ್ 4ನೇ ಅಲೆ ಭೀತಿ; ಭಾರತದಲ್ಲಿ ಹೊಸ ಕ್ವಾರಂಟೈನ್ ನಿಯಮ, ಚಿಕಿತ್ಸೆಯ ವಿಧಾನ ಹೇಗಿದೆ?

ಮಹಾರಾಷ್ಟ್ರದಲ್ಲಿ 2,956 ಹೊಸ ಕೋವಿಡ್ ಪ್ರಕರಣಗಳು, 4 ಸಾವುಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 2,956 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 4 ಹೊಸ ಕೋವಿಡ್ ಸಂಬಂಧಿತ ಸಾವುಗಳು ದಾಖಲಾಗಿವೆ. ಆದರೆ ಸಕ್ರಿಯ ಸಂಖ್ಯೆ 18,000 ದಾಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ ಕೋವಿಡ್ ಸಂಖ್ಯೆ 79,15,418ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 1,47,875ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,165 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಮಂಗಳವಾರ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನ ಬಿಎ.5 ರೂಪಾಂತರದ ಎರಡು ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಥಾಣೆ ನಗರದಲ್ಲಿ ಪತ್ತೆಯಾದ ಇಬ್ಬರೂ ರೋಗಿಗಳಿಗೆ ಲಸಿಕೆ ಹಾಕಲಾಗಿದೆ. ಅವರು ಮನೆಯ ಕ್ವಾರಂಟೈನ್​​ನಲ್ಲಿದ್ದು, ಇತ್ತೀಚೆಗೆ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಅವರಲ್ಲಿ ಒಬ್ಬರು 25 ವರ್ಷದ ಮಹಿಳೆ ಮತ್ತು ಇನ್ನೊಬ್ಬರು 32 ವರ್ಷದ ವ್ಯಕ್ತಿಯಾಗಿದ್ದಾರೆ. ಮೇ 28 ಮತ್ತು 30ರಂದು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರು. ಇದೀಗ ಅವರಿಗೆ ಬಿಎ.5 ರೂಪಾಂತರಿ ವೈರಸ್​ ತಗುಲಿರುವುದು ದೃಢಪಟ್ಟಿದೆ.

ದೆಹಲಿಯಲ್ಲಿ 1,118 ಹೊಸ ಕೋವಿಡ್ ಪ್ರಕರಣಗಳು, 2 ಸಾವುಗಳು ವರದಿಯಾಗಿದೆ. ದೆಹಲಿಯಲ್ಲಿ ನಿನ್ನೆ 1,118 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 2 ಕೋವಿಡ್ ಸಾವುಗಳು ವರದಿಯಾಗಿದ್ದು, ಪಾಸಿಟಿವಿಟಿ ದರವು ಶೇ. 6.50ರಷ್ಟಿದೆ. ದೆಹಲಿಯಲ್ಲಿ ವರದಿಯಾದ ಒಟ್ಟು ಸಾವಿನ ಸಂಖ್ಯೆ ಈಗ 26,223 ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada