AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake Loan App: ಸಾಲದ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ: ಮುಂಬೈ ಪೊಲೀಸರಿಂದ ಧಾರವಾಡದ ಐವರ ಬಂಧನ

ಇವರು ಬೇರೆಯವರ ಹೆಸರುಗಳಲ್ಲಿ ಮೊಬೈಲ್ ಸಿಮ್ ಪಡೆದು, ಅಕ್ರಮ ನಡೆಸುತ್ತಿದ್ದರು.

Fake Loan App: ಸಾಲದ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ: ಮುಂಬೈ ಪೊಲೀಸರಿಂದ ಧಾರವಾಡದ ಐವರ ಬಂಧನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 15, 2022 | 7:37 AM

ಮುಂಬೈ/ಧಾರವಾಡ: ಸಾಲ ನೀಡುವ ನೆಪದಲ್ಲಿ ದೇಶದ ವಿವಿಧೆಡೆ ಗ್ರಾಹಕರಿಗೆ ಕಿರುಕುಳ ಕೊಡುತ್ತಿದ್ದ ಅಕ್ರಮ ಲೋನ್ ಆ್ಯಪ್​ನ (Fake Loan Apps) ಕರಾಳ ಮುಖವನ್ನು ಮಹಾರಾಷ್ಟ್ರ ಸೈಬರ್ ಸೆಲ್ (Maharshtra Cyber Cell) ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ಕರ್ನಾಟಕದ ಐವರು ರಿಕವರಿ ಏಜೆಂಟ್​ಗಳನ್ನು (Recovery Agenst) ಬಂಧಿಸಲಾಗಿದೆ. ಬಂಧಿತರ ವಿರುದ್ಧ ಅಕ್ರಮ ಹಣ ವಸೂಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಆ್ಯಪ್​ ಮೂಲಕ 8,000 ರೂಪಾಯಿ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರು ಸಕಾಲದಲ್ಲಿ ಬಡ್ಡಿಯೊಂದಿಗೆ ಮರುಪಾವತಿಸಿದ್ದರು. ಆದರೆ ರಿಕವರಿ ಏಜೆಂಟ್​ಗಳು ಸಾಲದ ಮೊತ್ತದ ಮೂರುಪಟ್ಟು ಮೊತ್ತ ಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಪರಿಶೀಲಿಸಲೆಂದು ಲೋನ್ ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದ ಹಲವರು ಯಾವುದೇ ವಹಿವಾಟು ನಡೆಸದಿದ್ದರೂ ಸಾಲ ಪಡೆದಿದ್ದೀರಿ, ವಿಮಾ ಪಾಲಿಸಿ ಖರೀದಿಸಿದ್ದೀರಿ ಹಣ ಕಟ್ಟಿ ಎಂದು ರಿಕವರಿ ಏಜೆಂಟ್​ಗಳು ದುಂಬಾಲು ಬಿದ್ದಿದ್ದರು. ಇಂಥವರ ಮೊಬೈಲ್​ಗಳಿಗೆ ಸ್ಪ್ಯಾಮ್​ಗಳಿಂದ ಕನ್ನ ಹಾಕಿ, ಫೋಟೊಗಳನ್ನು ತಿರುಚಿ, ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದರು.

ಮಹಾರಾಷ್ಟ್ರದಲ್ಲಿ 2,084 ದೂರುಗಳು ದಾಖಲಾಗಿದ್ದವು. ಅಕ್ರಮ ವಹಿವಾಟು ಮತ್ತು ವಸೂಲಿ ದಂಧೆಯ ಬೃಹದಾಕಾರ ಕಂಡ ಮಹಾರಾಷ್ಟ್ರ ಪೊಲೀಸರು ವಿಶೇಷ ಘಟಕ ರಚಿಸಿಕೊಂಡು ಕಾರ್ಯಾಚರಣೆ ಆರಂಭಿಸಿದರು. ಒಬ್ಬನನ್ನು ಬಂಧಿಸಿದಾಗ ಇನ್ನೂ ನಾಲ್ವರು ಧಾರವಾಡದಲ್ಲಿರುವುದು ತಿಳಿದು ಬಂತು. ಇವರು ಇಂಥ ಇನ್ನೂ ನಾಲ್ಕು ಲೋನ್ ಆ್ಯಪ್​ಗಳೊಂದಿಗೆ ಕಾರ್ಯ ನಿರ್ವಹಿಸಿದ್ದರು. ಇವರು ಬೇರೆಯವರ ಹೆಸರುಗಳಲ್ಲಿ ಮೊಬೈಲ್ ಸಿಮ್ ಪಡೆದು, ಅಕ್ರಮ ನಡೆಸುತ್ತಿದ್ದರು. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎಲ್ಲರನ್ನೂ ಬಂಧಿಸಲಾಯಿತು ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿ ಮಧುಕರ್ ಪಾಂಡೆ ವಿವರಿಸಿದರು.

ಎಲ್ಲ ಬಂಧಿತರು ವಿದ್ಯಾವಂತರಾಗಿದ್ದು ಬಿಕಾಂ, ಎಂಬಿಎ ಪದವೀಧರರಾಗಿದ್ದಾರೆ. ಲೋನ್ ಆ್ಯಪ್​ಗಳ ಅಕ್ರಮ ವ್ಯವಹಾರದ ಬಗ್ಗೆ ಆರ್​ಬಿಐಗೆ ಮಾಹಿತಿ ನೀಡಲಾಗಿದೆ. ಪ್ಲೇಸ್ಟೋರ್​ನಿಂದ ಈ ಆ್ಯಪ್​ಗಳನ್ನು ತೆಗೆದು ಹಾಕುವಂತೆ ಗೂಗಲ್​ಗೂ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪೊಲೀಸರಿಗೆ ದೂರು ಕೊಡಿ: ರಿಸರ್ವ್ ಬ್ಯಾಂಕ್

ದೇಶದಲ್ಲಿ ಅಕ್ರಮವಾಗಿ ಸಾಲ ನೀಡುವ 600ಕ್ಕೂ ಅಧಿಕ ಆ್ಯಪ್​ಗಳು ಕಂಡುಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ಆ್ಯಪ್​ಗಳಿಂದ ಸಾಲ ಪಡೆದವರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಆರ್​ಬಿಐನ ನಿಯಮಗಳಿಗೆ ವ್ಯಾಪ್ತಿಗೆ ಒಳಪಡದ, ಆರ್​ಬಿಐನ ಅನುಮತಿ ಪಡೆಯದ ಈ ಆ್ಯಪ್​ಗಳು ಸುಲಭವಾಗಿ ಸಾಲ ಕೊಡುವುದಾಗಿ ಗಾಳ ಹಾಕಿ ಗ್ರಾಹಕರಿಂದ ದುಬಾರಿ ಬಡ್ಡಿ ವಸೂಲಿ ಮಾಡುತ್ತಿವೆ. ಇಂಥ ಆ್ಯಪ್​ಗಳ ಕಿರುಕುಳದಿಂದ ನೊಂದವರು ಪೊಲೀಸರಿಗೆ ದೂರು ನೀಡಬೇಕು ಎಂದು ಆರ್​ಬಿಐ ಸಲಹೆ ಮಾಡಿದೆ. ಆರ್​ಬಿಐನೊಂದಿಗೆ ನೊಂದಾಯಿಸಿಕೊಂಡಿರುವ ಯಾವುದೇ ಹಣಕಾಸು ಸಂಸ್ಥೆ ಕಿರುಳುಳ ನೀಡಿದರೆ, ಆರ್​ಬಿಐಗೆ ದೂರು ನೀಡಬಹುದಾಗಿದೆ. ಅಂಥ ಸಂದರ್ಭದಲ್ಲಿ ಆರ್​ಬಿಐ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:36 am, Wed, 15 June 22

ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?