Afghanistan Earthquake: ಅಫ್ಘಾನಿಸ್ತಾನದ ಫಯಾಜಾಬಾದ್​ನಲ್ಲಿ 4.3 ತೀವ್ರತೆಯ ಭೂಕಂಪ

ಇತ್ತೀಚೆಗಷ್ಟೇ ಭೂಕಂಪನವಾಗಿದ್ದ ಅಫ್ಘಾನಿಸ್ತಾನದ ಫಯಾಜಾಬಾದ್​ನಲ್ಲಿ ಮತ್ತೆ ಭೂಮಿ ಕಂಪಸಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ.

Afghanistan Earthquake: ಅಫ್ಘಾನಿಸ್ತಾನದ ಫಯಾಜಾಬಾದ್​ನಲ್ಲಿ 4.3 ತೀವ್ರತೆಯ ಭೂಕಂಪ
ಅಫ್ಘಾನಿಸ್ತಾನದಲ್ಲಿ ಭೂಕಂಪ
Follow us
|

Updated on:Apr 02, 2023 | 6:05 PM

ಕಾಬುಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಫಯಾಜಾಬಾದ್​ನಲ್ಲಿ ಮತ್ತೆ ಭೂಕಂಪನವಾಗಿದ್ದು (Earthquake), ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ. ಇತ್ತೀಚೆಗೆ ಸಿರಿಯಾದಲ್ಲಿ ಭಾರೀ ಭೂಕಂಪಕ್ಕೆ ಸಾವಿರಾರು ಜನರು ಸಾವನ್ನಪ್ಪಿದ್ದರು. ಇದೀಗ ಅಫ್ಘಾನಿಸ್ತಾನದಲ್ಲಿ ಭೂಕಂಪನವಾಗಲು ಆರಂಭವಾಗಿದೆ. ಮಾರ್ಚ್ 18ರಂದು ಫಯಾಜಾಬಾದ್​ನಲ್ಲಿ ಭೂಮಿ ಕಂಪಿಸಿತ್ತು. ಫೈಜಾಬಾದ್‌ನಿಂದ 213 ಕಿಮೀ ಪೂರ್ವಕ್ಕೆ ಸಂಜೆ 6:51ಕ್ಕೆ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿತ್ತು.

ಈ ಭೂಕಂಪನದ ನಂತರ ಮಾರ್ಚ್ 21ರಂದು ಹಿಂದು ಕುಶ್ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಪ್ರಬಲ ಭೂಕಂಪನವಾಗಿತ್ತು. ಇದರ ಪರಿಣಾಮ ಪಾಕಿಸ್ತಾನದ ಮೇಲಾಗಿದ್ದು, 9 ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 6.6ರಷ್ಟು ದಾಖಲಾಗಿತ್ತು. ಅಮೆರಿಕದ ಭೂಗರ್ಭ ಸಮೀಕ್ಷೆ ಕೇಂದ್ರದ ಪ್ರಕಾರ, ಅಫ್ಘಾನಿಸ್ತಾನದ ಜುರ್ಮ್‌ ಎಂಬ ಸ್ಥಳದಲ್ಲಿ 180 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಎರಡೂ ದೇಶಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು, 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: Chile Earthquake: ಚಿಲಿಯ ಮಧ್ಯ ಕರಾವಳಿ ಪ್ರದೇಶದಲ್ಲಿ 6.2 ತೀವ್ರತೆಯ ಭಾರಿ ಭೂಕಂಪ

ಇದಾದ ನಂತರ ಮಾರ್ಚ್ 29ರಂದು ಕಾಬೂಲ್​ನಲ್ಲಿ 4.3 ತೀವ್ರತೆಯ ಭೂಕಂಪನವಾಗಿತ್ತು. ಮುಂಜಾನೆ 5:49ಕ್ಕೆ ಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪವು ಇಂದು ಬೆಳಗ್ಗೆ 5:49 ಕ್ಕೆ  ಅಫ್ಘಾನಿಸ್ತಾನದ ಕಾಬೂಲ್‌ನಿಂದ 85 ಕಿಮೀ ಪೂರ್ವಕ್ಕೆ ಅಪ್ಪಳಿಸಿತು ಎಂದು NCS ಟ್ವಿಟರ್‌ನಲ್ಲಿ ಮಾಹಿತಿ ನೀಡಿತ್ತು. ಇದಕ್ಕೂ ಮುನ್ನ ಮಾರ್ಚ್ 27ರಂದು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದ ಫರ್ಖರ್ ಜಿಲ್ಲೆಯ ದಕ್ಷಿಣಕ್ಕೆ 25 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಕಾಬೂಲ್​ನ ಉತ್ತರ ಮತ್ತು ಈಶಾನ್ಯ ಪ್ರದೇಶಗಳು ಹಿಮಕುಸಿತಗಳು, ಭೂಕುಸಿತಗಳು, ಭೂಕಂಪಗಳು ಮತ್ತು ಪ್ರವಾಹಗಳಂತಹ ವಿಪತ್ತುಗಳಿಗೆ ಗುರಿಯಾಗುತ್ತಿವೆ. ಅಫ್ಘಾನಿಸ್ತಾನವನ್ನು 2021ರಲ್ಲಿ ತಾಲಿಬಾನ್ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅನೇಕ ನಷ್ಟಗಳು ಸಂಭವಿಸಿವೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sun, 2 April 23

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ