ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದ ಗುಪ್ತಚರ ದಳದ ಏಜೆಂಟ್ಗಳು ಬರೋಬ್ಬರಿ 3000 ಲೀಟರ್ ಮದ್ಯವನ್ನು ಕಾಬೂಲ್ನ ಕಾಲುವೆಗೆ ಸುರಿದಿದ್ದಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಂದಹಾಗೆ, ಅಫ್ಘಾನ್ ಗುಪ್ತಚರ ದಳ, ಮದ್ಯವನ್ನು ಕಾಲುವೆಗೆ ಸುರಿದಿದ್ದನ್ನು ಅಲ್ಲಿನ ಬೇಹುಗಾರಿಕೆ ವಿಭಾಗ ದೃಢಪಡಿಸಿದೆ. ಅಲ್ಲದೆ, ಮದ್ಯ ಮಾರಾಟ, ಪೂರೈಕೆಯಲ್ಲಿ ಸಕ್ರಿಯರಾಗಿದ್ದ ಮೂವರು ಡೀಲರ್ಗಳನ್ನು ಬಂಧಿಸಲಾಗಿದೆ ಎಂದೂ ವರದಿಯಾಗಿದೆ. ಆದರೆ ಈ ಮದ್ಯವನ್ನು ಎಲ್ಲಿಂದ ವಶಪಡಿಸಿಕೊಳ್ಳಲಾಯಿತು? ಯಾರಿಂದ ವಶಪಡಿಸಿಕೊಳ್ಳಲಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಇದ್ದ ಯುಎಸ್ ಬೆಂಬಲಿತ ಸರ್ಕಾರವೂ ಕೂಡ ಮದ್ಯ ಮಾರಾಟ, ಸೇವನೆಯನ್ನು ನಿಷೇಧಿಸಿತ್ತು. ಆದರೆ ಇದೀಗ ಬಂದಿರುವ ತಾಲಿಬಾನ್ ಕಟ್ಟಾ ಇಸ್ಲಾಂ ಸಂಪ್ರದಾಯ ಪಾಲಕವಾಗಿದ್ದು, ಅದರ ಅನ್ವಯ ಮದ್ಯ ಸೇವನೆ, ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕದ್ದುಮುಚ್ಚಿ ಮಾರಾಟ ಮಾಡುತ್ತಿರುವವರನ್ನೂ ಬೇಧಿಸುತ್ತಿದೆ. ಮದ್ಯವನ್ನು ಕಾಲುವೆಗೆ ಸುರಿಯುತ್ತಿರುವ ವಿಡಿಯೋವನ್ನು ಅಫ್ಘಾನಿಸ್ತಾನದ ಜನರಲ್ ಡೈರೆಕ್ಟರೇಟ್ ಆಫ್ ಇಂಟಲಿಜೆನ್ಸ್ (DGI) ಬಿಡುಗಡೆ ಮಾಡಿದೆ. ಮುಸ್ಲಿಮರು ಮದ್ಯ ತಯಾರಿಕೆ ಮತ್ತು ಪೂರೈಕೆ, ಸೇವನೆಯಿಂದ ಸಂಪೂರ್ಣವಾಗಿ ದೂರ ಇರಬೇಕು ಎಂದು ಇಸ್ಲಾಂ ಧಾರ್ಮಿಕ ಮುಖಂಡರು ಹೇಳಿದ್ದಾಗಿ ಡಿಜಿಐ ಹೇಳಿದೆ.
د ا.ا.ا د استخباراتو لوی ریاست ځانګړې عملیاتي قطعې د یو لړ مؤثقو کشفي معلومات پر اساس د کابل ښار کارته چهار سیمه کې درې تنه شراب پلورونکي له شاوخوا درې زره لېتره شرابو/الکولو سره یو ځای ونیول.
نیول شوي شراب له منځه یوړل شول او شراب پلورونکي عدلي او قضايي ارګانونو ته وسپارل شول. pic.twitter.com/qD7D5ZIsuL— د استخباراتو لوی ریاست-GDI (@GDI1415) January 1, 2022
ಇದನ್ನೂ ಓದಿ: ಮೋದಿ ಅಹಂಕಾರಿ ಎಂದ ಮೇಘಾಲಯ ಗವರ್ನರ್ ; ಮಲಿಕ್ ಆರೋಪ ಸತ್ಯವಾಗಿದ್ದರೆ ಮೋದಿ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು