ಅಫ್ಘಾನಿಸ್ತಾನದ ಪೂರ್ವನಗರವಾದ ಜಲಾಲಾಬಾದ್ನಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ಇದನ್ನು ಗ್ರೂಪ್ನ ಅಮಾಕ್ ನ್ಯೂಸ್ ಏಜೆನ್ಸಿ ತನ್ನ ಟೆಲಿಗ್ರಾಂ ಚಾನಲ್ನಲ್ಲಿ ಹೇಳಿಕೊಂಡಿದೆ. ಜಲಾಲಾಬಾದ್ನಲ್ಲಿ ಮೂರು ತಾಲಿಬಾನಿ ವಾಹನಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮೂರು ಬಾಂಬ್ ಸ್ಫೋಟಗಳು ನಡೆದಿವೆ. ಮತ್ತೆ ಭಾನುವಾರವೂ ಒಂದು ದಾಳಿ ನಡೆದಿದೆ. ಒಟ್ಟಾರೆ ಈ ಎಲ್ಲ ದಾಳಿಯಿಂದ 35 ತಾಲಿಬಾನ್ ಉಗ್ರರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.
ನಂಗರ್ಹಾರ್ ಪ್ರಾಂತ್ಯದ ರಾಜಧಾನಿ ಜಲಾಲಾಬಾದ್ನಲ್ಲಿ ತಾಲಿಬಾನ್ ಹೋರಾಟಗಾರರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ಟ್ರಕ್ವೊಂದರ ಮೇಲೆ ದಾಳಿ ನಡೆದಿದೆ. ಈ ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಜಲಾಲಾಬಾದ್ ಸರಣಿ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ ಬಗ್ಗೆ ಇನ್ನೂ ತಾಲಿಬಾನ್ ಉಗ್ರರು ಏನೂ ಹೇಳಿಲ್ಲ. ಅಫ್ಘಾನಿಸ್ತಾನವನ್ನು ಆಗಸ್ಟ್ 15ರಂದು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಪಾಕಿಸ್ತಾನದ ಗಡಿಭಾಗದಲ್ಲಿರುವ ನಂಗರ್ಹಾರ್ ಪ್ರಾಂತ್ಯದಲ್ಲಿ ಮಾತ್ರ ಐಎಸ್ ಉಗ್ರರಿಂದ ದಾಳಿ ನಡೆಯುತ್ತಿದೆ. ಇವರು ತಾಲಿಬಾನಿಗಳನ್ನು ಟಾರ್ಗೆಟ್ ಮಾಡಿಯೇ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ, ಈ ಹಿಂದೆ ಅಫ್ಘಾನಿಸ್ತಾನ ಸರ್ಕಾರವಿದ್ದಾಗ ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ಅನೇಕ ಜಿಲ್ಲೆಗಳು ಐಎಸ್ ಉಗ್ರರ ನೆಲೆಗಳಾಗಿದ್ದವು. ಸುಮಾರು ಐದುವರ್ಷಗಳ ಕಾಲ ಆ ಜಿಲ್ಲೆಗಳನ್ನೆಲ್ಲ ಸಂಪೂರ್ಣವಾಗಿ ಅವರೇ ಆಳಿದ್ದರು. ಆದರೆ ನಂತರ ಬಂದ ತಾಲಿಬಾನಿಗಳು ಐಎಸ್ ಹೋರಾಟಗಾರರನ್ನು ಹೊರಗೆ ಹಾಕಿದ್ದರು. ಇದೇ ಕಾರಣಕ್ಕೆ ಈಗ ಅವರು ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್ ಸಿಂಗ್ ಅವಧಿಯಲ್ಲಿ; ಸಿಎಂಗೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು
ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ