ಸರ್ಕಾರ ರಚನೆಗೆ ತಾಲಿಬಾನಿಗಳ ಮಧ್ಯೆಯೇ ಭಿನ್ನಮತ !- ಕಾಬೂಲ್​ ತಲುಪಿದ ಪಾಕಿಸ್ತಾನ ಐಎಸ್​ಐ ಮುಖ್ಯಸ್ಥ

| Updated By: Digi Tech Desk

Updated on: Sep 13, 2021 | 9:56 AM

ಅಫ್ಘಾನಿಸ್ತಾನವೇನೋ ತಾಲಿಬಾನಿಗಳ ವಶವಾಗಿದೆ. ಆದರೆ ಸರ್ಕಾರ ರಚನೆ ಸಂಬಂಧ ಇದರ ಎರಡು ಬಣಗಳ ನಡುವೆ ಅಪಶ್ರುತಿ ಎದ್ದಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಸರ್ಕಾರ ರಚನೆಗೆ ತಾಲಿಬಾನಿಗಳ ಮಧ್ಯೆಯೇ ಭಿನ್ನಮತ !- ಕಾಬೂಲ್​ ತಲುಪಿದ ಪಾಕಿಸ್ತಾನ ಐಎಸ್​ಐ ಮುಖ್ಯಸ್ಥ
ಪಾಕಿಸ್ತಾನ ಐಎಸ್​ಐ ಮುಖ್ಯಸ್ಥ
Follow us on

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್​ ಹೋಗಿ ಐದು ದಿನಗಳಾದರೂ ಅಲ್ಲಿನ್ನೂ ಹೊಸ ಸರ್ಕಾರ ರಚನೆಯಾಗಿಲ್ಲ. ಹಾಗೇ, ಪಂಜಶಿರ್ ಕಣಿವೆ ಹೋರಾಟವೂ ಮುಂದುವರಿದಿದೆ ಎನ್ನಲಾಗಿದೆ. ನಾವು ಪಂಜಶಿರ್ ಕಣಿವೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದರೂ, ಅಲ್ಲಿನ ಸ್ಥಳೀಯ ಗುಂಪಿನ ಮುಖಂಡ ಅದನ್ನ ಅಲ್ಲಗಳೆದಿದ್ದಾರೆ. ಈ ಮಧ್ಯೆ ಪಾಕಿಸ್ತಾನ ಗುಪ್ತಚರ ದಳ (ISI)ದ ಮುಖ್ಯಸ್ಥ ಲೆಫ್ಟೆನೆಂಟ್​ ಜನರಲ್​ ಫೈಜ್​ ಹಮೀದ್ ಕಾಬೂಲ್​ಗೆ ತೆರಳಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ. ಈ ಫೈಜ್​ ಹಮೀದ್​ ನೇತೃತ್ವದಲ್ಲಿ ಪಾಕ್ ಅಧಿಕಾರಿಗಳ ನಿಯೋಗವೇ ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿದೆ.

ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ರಾಯಭಾರಿಗಳನ್ನು ಭೇಟಿಯಾಗಲಿರುವ ಫೈಜ್​ ಹಮೀದ್​ ನಂತರ ತಾಲಿಬಾನ್​ ಮುಖಂಡರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಫೈಜ್​ ಹಮೀದ್​ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಭವಿಷ್ಯದಲ್ಲಿ ಅಫ್ಘಾನ್​ ಮತ್ತು ಪಾಕ್​ ಸಂಬಂಧ, ಸ್ನೇಹ ವೃದ್ಧಿ, ತಾಲಿಬಾನಿಗಳ ಆಡಳಿತ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಎಂದು ಪಾಕಿಸ್ತಾನಿ ಪತ್ರಕರ್ತ ಹಮ್ಜಾ ಅಜರ್​ ಸಲಾಂ ತಿಳಿಸಿದ್ದಾರೆ.

ವಿವಾದ ಬಗೆ ಹರಿಸಲು ಹೋದ್ರಾ ಫೈಜ್​?
ಅಫ್ಘಾನಿಸ್ತಾನವೇನೋ ತಾಲಿಬಾನಿಗಳ ವಶವಾಗಿದೆ. ಆದರೆ ಸರ್ಕಾರ ರಚನೆ ಸಂಬಂಧ ಇದರ ಎರಡು ಬಣಗಳ ನಡುವೆ ಅಪಶ್ರುತಿ ಎದ್ದಿದೆ ಎಂದು ಮೂಲಗಳಿಂದ ವರದಿಯಾಗಿದೆ. ತಾಲಿಬಾನಿಗಳಲ್ಲಿ ಹಕ್ಕಾನಿ ನೆಟ್​ವರ್ಕ್​ ಮತ್ತು ಮುಲ್ಲಾ ಬರದಾರ್​ ಬಣಗಳಿವೆ. ಇದೀಗ ಅಫ್ಘಾನ್​ ಅಧ್ಯಕ್ಷನ ಸ್ಥಾನಕ್ಕೆ ಏರುವ ಸಂಬಂಧ ಮತ್ತು ಪ್ರಮುಖ ಹುದ್ದೆಗಳ ನಿಭಾಯಿಸುವ ಬಗ್ಗೆ ಎರಡೂ ಬಣಗಳ ನಡುವೆ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ. ಇದೇ ಕಾರಣಕ್ಕೆ ಸರ್ಕಾರ ರಚನೆ ವಿಳಂಬವಾಗುತ್ತಿದ್ದು, ಅದನ್ನು ಪರಿಹಾರ ಮಾಡಲು ಪಾಕಿಸ್ತಾನ ಐಎಸ್​ಐ ಮುಖ್ಯಸ್ಥ ಅಲ್ಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಲಿಬಾನಿಗಳಿಗೆ ಪಾಕಿಸ್ತಾನ ಸಹಕಾರ ನೀಡುತ್ತಿದೆ ಎಂಬುದು ಬಹುದೊಡ್ಡ ಆರೋಪ ಮತ್ತು ಅಲ್ಲಿನ ಕೆಲವು ಸಚಿವರು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾವು ದೀರ್ಘ ಸಮಯದಿಂದಲೂ ತಾಲಿಬಾನಿಗಳ ಕಾಳಜಿ ಮಾಡಿದ್ದೇವೆ. ಅವರಿಗೆ ಆಶ್ರಯ ನೀಡಿದ್ದೇವೆ ಎಂದು ಇತ್ತೀಚೆಗಷ್ಟೇ ಪಾಕ್​ ಆಂತರಿಕ ವ್ಯವಹಾರಗಳ ಸಚಿವರು ಹೇಳಿದ್ದರು. ಹಾಗೇ, ಇದೀಗ ತಾಲಿಬಾನಿಗಳ ಮಧ್ಯೆಯೇ ಎದ್ದಿರುವ ಮುಸುಕಿನ ವಿವಾದ ಪರಿಹರಿಸಲು ಪಾಕ್​ ಮುಂದಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ

ಸುದೀಪ್​ ಇಲ್ಲದ ಬಿಗ್​ ಬಾಸ್ ಊಹಿಸಿಕೊಳ್ಳಲು ಸಾಧ್ಯವೇ? ಹೇಗಿರತ್ತೆ ನೋಡಿ ಸ್ಪರ್ಧಿಗಳ ಪರಿಸ್ಥಿತಿ

Published On - 2:59 pm, Sat, 4 September 21