AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕುತ್ತಿರುವ ತಾಲಿಬಾನ್​ ಉಗ್ರರು; ಜೀವ ತೆಗೆಯಲು ಸಿದ್ಧತೆ

ಅಫ್ಘಾನಿಸ್ತಾನದಲ್ಲಿ 1996ರಿಂದ 2001ರವರೆಗೆ ಆಡಳಿತ ನಡೆಸಿದ್ದ ತಾಲಿಬಾನ್​, ಆಗ ಕೂಡ ಹೀಗೇ ಮಾಡಿತ್ತು. ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕಿ ಕೊಂದಿತ್ತು. ಇಲ್ಲವೇ, ತಮ್ಮ ಕಾಮತೃಷೆ ನೀಗಿಸಿಕೊಳ್ಳಲು ಉಗ್ರರು ಬಳಸಿಕೊಳ್ಳುತ್ತಿದ್ದರು.

ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕುತ್ತಿರುವ ತಾಲಿಬಾನ್​ ಉಗ್ರರು; ಜೀವ ತೆಗೆಯಲು ಸಿದ್ಧತೆ
ತಾಲಿಬಾನ್​ ಉಗ್ರರು
TV9 Web
| Edited By: |

Updated on:Sep 04, 2021 | 11:20 AM

Share

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ (US Army)ಯನ್ನು ಹಿಂಪಡೆದ ಬಳಿಕ ಸಂಪೂರ್ಣವಾಗಿ ಆ ದೇಶ ತಾಲಿಬಾನಿ (Taliban)ಗಳ ಕೈ ಸೇರಿದೆ. ಇದೀಗ ತಾಲಿಬಾನಿಗಳು ತಮ್ಮ ಕ್ರೂರ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ. ಈ ಮಧ್ಯೆ ಇನ್ನೊಂದು ಆತಂಕಕಾರಿ ಸುದ್ದಿ ವರದಿಯಾಗಿದೆ. ತಾಲಿಬಾನ್​ ಉಗ್ರರು (Taliban Terrorists), ಲೈಂಗಿಕ ಕಾರ್ಯಕರ್ತೆ (Sex Workers)ಯರು, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರ ಪಟ್ಟಿ ಮಾಡುತ್ತಿದ್ದು, ಅವರನ್ನೆಲ್ಲ ಕೊಲ್ಲಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನಿಗಳು ಮಹಿಳೆಯರ ವಿಷಯದಲ್ಲಿ ತುಂಬ ಕಟ್ಟುನಿಟ್ಟು. ಮಹಿಳೆಯರು ಮುಖ ಮುಚ್ಚಿಕೊಳ್ಳದೆ, ರಕ್ತಸಂಬಂಧಿ ಪುರುಷ ಅಥವಾ ಪತಿ ಇಲ್ಲದೆ ಮನೆ ಬಿಟ್ಟು ಹೊರಗೆ ಬರುವಂತೆಯೂ ಇಲ್ಲ ಎಂಬ ಕಾನೂನು ಅವರದ್ದು. ಇದೀಗ ಲೈಂಗಿಕ ಕೆಲಸ, ವೇಶ್ಯಾವಾಟಿಕೆ ನಡೆಸುತ್ತಿರುವ ಮಹಿಳೆಯ ಪಟ್ಟಿ ಮಾಡಿ, ಅವರಿಗೆ ಮರಣ ದಂಡನೆ ನೀಡುವ ಸಿದ್ಧತೆಯಲ್ಲಿ ಉಗ್ರರು ತೊಡಗಿದ್ದಾರೆ ಎನ್ನಲಾಗಿದೆ.  

ತಾಲಿಬಾನ್​ನಲ್ಲಿ ಒಂದು ಡೆತ್​ ಸ್ಕ್ವಾಡ್​​ ಇದೆ. ಅದೀಗ ಲೈಂಗಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಹುಡುಕಲು ಪ್ರಾರಂಭಿಸಿದೆ. ಅಷ್ಟೇ ಅಲ್ಲ, ಅಶ್ಲೀಲ ವೆಬ್​ಸೈಟ್​​ಗಳನ್ನೂ ಜಾಲಾಡುತ್ತಿದೆ ಎಂದು ದಿ ಸನ್​ ವರದಿ ಮಾಡಿದೆ. ಈ ಕೆಲಸಕ್ಕೆಂದೇ ಡೆತ್ ಸ್ಕ್ವಾಡ್​ ಒಂದು ಅಭಿಯಾನವನ್ನೂ ಶುರು ಮಾಡಿದೆ ಎಂದೂ ಹೇಳಿದೆ.

ಈ ಹಿಂದೆಯೂ ಮಾಡಿತ್ತು ಅಫ್ಘಾನಿಸ್ತಾನದಲ್ಲಿ 1996ರಿಂದ 2001ರವರೆಗೆ ಆಡಳಿತ ನಡೆಸಿದ್ದ ತಾಲಿಬಾನ್​, ಆಗ ಕೂಡ ಹೀಗೇ ಮಾಡಿತ್ತು. ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕಿ ಕೊಂದಿತ್ತು. ಇಲ್ಲವೇ, ತಮ್ಮ ಕಾಮತೃಷೆ ನೀಗಿಸಿಕೊಳ್ಳಲು ಉಗ್ರರು ಬಳಸಿಕೊಳ್ಳುತ್ತಿದ್ದರು.  ಅದಾದ ಬಳಿಕ ಅಫ್ಘಾನ್​ನಲ್ಲಿ ಅದರ ಆಡಳಿತ ಕೊನೆಗೊಂಡರೂ, ಈ 20ವರ್ಷದಲ್ಲೂ ಆ ಕೃತ್ಯವನ್ನು ಉಗ್ರರು ಮುಂದುವರಿಸಿದ್ದರು. ಅದೆಷ್ಟೋ  ಮಹಿಳೆಯರನ್ನು ಕೊಂದಿದ್ದಾರೆ. ಯುವತಿಯರನ್ನು ಅಪಹರಿಸಿ ತಮ್ಮ ಕಾಮಚಟಕ್ಕೆ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ

ಸದ್ಯ 1 ರಿಂದ 5ರವರೆಗೆ ಪ್ರಾಥಮಿಕ ಶಾಲೆಗಳ ಆರಂಭ ಇಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Published On - 11:18 am, Sat, 4 September 21

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು