Afghanistan Government: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ತಾಲಿಬಾನ್ ಸಹ- ಸಂಸ್ಥಾಪಕ ಮುಲ್ಲಾ ಬರಾದಾರ್

Mullah Baradar | ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದಾರ್ ಹೊಸ ಸರ್ಕಾರದ ನಾಯಕನಾಗಲಿದ್ದಾರೆ. ತಾಲಿಬಾನ್ ರಾಜಕೀಯ ಕಚೇರಿಯ ನೇತೃತ್ವ ವಹಿಸಿಕೊಳ್ಳಲಿರುವ ಮುಲ್ಲಾ ಬರಾದಾರ್ ನೇತೃತ್ವದಲ್ಲಿ ಇರಾನ್ ಮಾದರಿಯ ಸರ್ಕಾರ ರಚನೆಯಾಗಲಿದೆ.

Afghanistan Government: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ತಾಲಿಬಾನ್ ಸಹ- ಸಂಸ್ಥಾಪಕ ಮುಲ್ಲಾ ಬರಾದಾರ್
ಮುಲ್ಲಾ ಬರಾದಾರ್
Edited By:

Updated on: Sep 03, 2021 | 2:14 PM

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ (Kabul) ಅನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಇಂದು ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರಾದಾರ್ ಹೊಸ ಸರ್ಕಾರದ ನೇತೃತ್ವವನ್ನು ವಹಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಶೇಖ್ ಹೈಬತುಲ್ಲಾ ಅಖುಂಡಜಾದ ಅವರನ್ನು ಅಫ್ಘಾನಿಸ್ತಾನದ ಸರ್ವೋಚ್ಛ ನಾಯಕನನ್ನಾಗಿ ನೇಮಕ ಮಾಡಲಾಗುವುದು ಎನ್ನಲಾಗಿತ್ತು. ಆದರೆ, ಇದೀಗ ಮುಲ್ಲಾ ಬರಾದಾರ್ ಅಫ್ಘಾನ್ ಸರ್ಕಾರದ ನೇತೃತ್ವ ವಹಿಸುವುದು ಖಚಿತವಾಗಿದೆ. ಇಂದು ಸಂಜೆಯೊಳಗೆ ಅಫ್ಘಾನಿಸ್ತಾನದ ನೂತನ ಸರ್ಕಾರ ಹಾಗೂ ಸಚಿವ ಸಂಪುಟದ ಘೋಷಣೆಯಾಗಲಿದೆ. 

ಅಫ್ಘಾನಿಸ್ತಾನದ ಇಸ್ಲಾಮಿಸ್ಟ್​ ಗ್ರೂಪ್​ ನೀಡಿರುವ ಮಾಹಿತಿ ಪ್ರಕಾರ, ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರಾದಾರ್ ಹೊಸ ಸರ್ಕಾರದ ನಾಯಕನಾಗಲಿದ್ದಾರೆ. ತಾಲಿಬಾನ್ ರಾಜಕೀಯ ಕಚೇರಿಯ ನೇತೃತ್ವ ವಹಿಸಿಕೊಳ್ಳಲಿರುವ ಮುಲ್ಲಾ ಬರಾದಾರ್ ನೇತೃತ್ವದಲ್ಲಿ ಇರಾನ್ ಮಾದರಿಯ ಸರ್ಕಾರ ರಚನೆಯಾಗಲಿದೆ. ಉಳಿದಂತೆ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಅವರ ಮಗ ಮುಲ್ಲಾ ಮೊಹಮ್ಮದ್ ಯಾಕೂಬ್, ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್​ಜೈ ಅಫ್ಘಾನಿಸ್ತಾನದ ನೂತನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ತಾಲಿಬಾನ್​ನ ಎಲ್ಲ ನಾಯಕರೂ ಕಾಬೂಲ್​ಗೆ ಬಂದಿದ್ದಾರೆ. ಇಲ್ಲಿ ಹೊಸ ಸರ್ಕಾರದ ಘೋಷಣೆಗೆ ಸಕಲ ಸಿದ್ಧತೆಗಳೂ ನಡೆದಿವೆ. ಕೆಲವೇ ಕ್ಷಣಗಳಲ್ಲಿ ನೂತನ ಸಚಿವ ಸಂಪುಟ ಘೋಷಣೆಯಾಗಲಿದೆ. ಅಫ್ಘಾನ್ ಸರ್ಕಾರ ಈಗಾಗಲೇ ವಿವಿಧ ರಾಜ್ಯಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಿದೆ.

ಆ. 15ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದಲ್ಲಿ ಇಂದು ನೂತನ ಸರ್ಕಾರ ರಚನೆಯಾಗಲಿದ್ದು, ತಾಲಿಬಾನ್​ ಸಂಘಟನೆಯ ಪ್ರಮುಖ ನಾಯಕರಿಗೆ ಮಹತ್ವದ ಹುದ್ದೆಗಳು ಸಿಗಲಿವೆ. ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಶೇಖ್ ಹೈಬತುಲ್ಲಾ ಅಖುಂಡಜಾದ, ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗುವುದು. ಈ ಮೊದಲು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಮುಲ್ಲಾ ಬರಾದಾರ್ ಹೆಸರು ಕೇಳಿಬಂದಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ನಾಳೆ ನೂತನ ಸರ್ಕಾರ ರಚನೆ ಸಾಧ್ಯತೆ; ತಾಲಿಬಾನ್- ಹಕ್ಕಾನಿ ನೆಟ್​ವರ್ಕ್​ ನಡುವೆ ಪೈಪೋಟಿ

Afghanistan Crisis: ಅಫ್ಘಾನಿಸ್ತಾನದ ಗೌಪ್ಯ ಸ್ಥಳದಿಂದ ಅಮೆರಿಕನ್ನರು, ಅಫ್ಘಾನ್​ ಕಮಾಂಡೋಗಳನ್ನು ರಹಸ್ಯವಾಗಿ ಶಿಫ್ಟ್​ ಮಾಡಿದ್ದು ಹೇಗೆ?

(Taliban Co-Founder Mullah Baradar To Lead New Afghanistan Government New Cabinet will Announce Today)

Published On - 1:50 pm, Fri, 3 September 21