ಲಡಾಖ್: ಭಾರತ ಮತ್ತು ಚೀನಾದ (India- China Border Dispute) ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಲೇ ಇದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ನಡುವೆ ಸಭೆಗಳು ನಡೆಯುತ್ತಿವೆ. ಮತ್ತೊಂದೆಡೆ, ಚೀನಾವು ನೀಚ ಕೃತ್ಯಗಳನ್ನು ಮಾಡುವುದನ್ನು ಇನ್ನೂ ನಿಲ್ಲಿಸಿಲ್ಲ. ಭಾರತದೊಂದಿಗೆ ಚೀನಾ 16ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಮುಕ್ತಾಯವಾದ ಬೆನ್ನಲ್ಲೇ ಚೀನಾ ಸೇನೆಯ PLA ಪಡೆಗಳು ಪ್ಯಾಂಗೋಂಗ್ ಸರೋವರದ (Pangong Lake) ಮೇಲೆ ಮಿಲಿಟರಿ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಚೀನಾದ ಮಾಧ್ಯಮಗಳು ಪ್ರಸಾರ ಮಾಡಿವೆ.
ಲಡಾಖ್‌ನ ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಸಮರಾಭ್ಯಾಸ ನಡೆಸಿದೆ. ಚೀನಾದ ಈ ಕ್ರಮದ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ಭಾರತದೊಂದಿಗೆ ಸೇನಾ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದ ಬೆನ್ನಲ್ಲೇ ಚೀನಾ ಸೇನೆಯ ಈ ವಿಡಿಯೋ ಮುನ್ನೆಲೆಗೆ ಬಂದಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಪ್ಯಾಂಗೋಂಗ್ ಸರೋವರದ ಬಳಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
Soon after the conclusion of 16th Corps Commander-level talks with India, China releases a video showing PLA troops carrying out a military exercise over #Pangong Lake. #Ladakh pic.twitter.com/1s90IkYSTg
— Rishikesh Kumar (@rishhikesh) July 19, 2022
ವೈರಲ್ ಆಗಿರುವ ಈ ವಿಡಿಯೋದಲ್ಲಿ ಚೀನಾ ಸೇನೆಯ ಹೆಲಿಕಾಪ್ಟರ್‌ಗಳು ಪ್ಯಾಂಗೋಂಗ್ ಸರೋವರದ ಮೇಲೆ ಹಾರುತ್ತಿರುವುದನ್ನು ಕಾಣಬಹುದು. ಚೀನಾದ ಮಿಲಿಟರಿ ಕಾರ್ಯಾಚರಣೆಯ ಈ ವಿಡಿಯೋ ಇತ್ತೀಚಿನದ್ದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಚೀನಾ ಸೇನೆಯು ಪ್ಯಾಂಗೊಂಗ್ ಸರೋವರದ ಬಳಿ ಸೇನಾ ಸಮರಾಭ್ಯಾಸ ನಡೆಸಿದ್ದು, ಉಭಯ ದೇಶಗಳ ನಡುವಿನ ಕಮಾಂಡರ್ ಮಟ್ಟದ ಮಾತುಕತೆ ಬಳಿಕ ಅದರ ವಿಡಿಯೋ ಇದೀಗ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ.
Just a day after India and China held 16th round of talks, the Chinese state media broadcast a clip of PLA carrying out an exercise over Pangong Lake. pic.twitter.com/EttBDSKIl7
— Aadil Brar (@aadilbrar) July 18, 2022
ಇದನ್ನೂ ಓದಿ: ಭಾರತ-ಚೀನಾ ಸೇನಾ ಕಮಾಂಡರ್ಗಳ ನಡುವೆ 16ನೇ ಸುತ್ತಿನ ಮಾತುಕತೆ
ಗಮನಾರ್ಹವೆಂದರೆ, ಲಡಾಖ್‌ನ ಪ್ಯಾಂಗೊಂಗ್ ಲೇಕ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶಗಳ ನಡುವೆ ಮಾತುಕತೆಯೂ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಮೊಲ್ಡೊದಲ್ಲಿ ಉಭಯ ದೇಶಗಳ ನಡುವೆ ಕಮಾಂಡರ್ ಮಟ್ಟದ ಮಾತುಕತೆ ನಡೆದಿತ್ತು. ಉಭಯ ದೇಶಗಳ ಸೇನೆಗಳ ನಡುವೆ ಇದುವರೆಗೆ 16 ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.
Published On - 11:02 am, Tue, 19 July 22