Modi in US: ಪ್ರಧಾನಿ ಮೋದಿ ಅಮೆರಿಕ ಭೇಟಿ ನಂತರ, ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತೀಯ ವಾಯುಪಡೆ

|

Updated on: Jun 22, 2023 | 4:46 PM

ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್ ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Modi in US: ಪ್ರಧಾನಿ ಮೋದಿ ಅಮೆರಿಕ ಭೇಟಿ ನಂತರ, ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತೀಯ ವಾಯುಪಡೆ
ಸಾಂದರ್ಭಿಕ ಚಿತ್ರ
Follow us on

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಿಇಒ,  ವೈದ್ಯರು, ಶಿಕ್ಷಣ ತಜ್ಞರನ್ನು ಭೇಟಿ ಮಾಡಿ ಚರ್ಚೆಯನ್ನು ನಡೆಸಿದ್ದಾರೆ, ಇದರ ಜತೆಗೆ ಈ ಬಾರಿ ವಿಶ್ವ ಯೋಗ ದಿನವನ್ನು ಅಮೆರಿಕದಲ್ಲಿ ಆಚರಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್ ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಹುರಾಷ್ಟ್ರೀಯ ಸಮೂಹದ ಏರೋಸ್ಪೇಸ್ ವಿಭಾಗವು ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಪ್ರಧಾನಿ ಮೋದಿಯವರ ಯುಎಸ್ ಪ್ರವಾಸದ ನಡುವೆ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಇದು ವಾಯುಪಡೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದೆ.

US ಏರೋಸ್ಪೇಸ್ ಕಂಪನಿಯ ಪ್ರಕಾರ, ಈ ಒಪ್ಪಂದವು ಭಾರತದಲ್ಲಿ GE ಏರೋಸ್ಪೇಸ್‌ನ F414 ಎಂಜಿನ್‌ಗಳ ಸಂಭಾವ್ಯ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ. ಜತೆಗೆ ಇದನ್ನು ರಫ್ತು ಮಾಡುವ ಅಧಿಕಾರವನ್ನು ಪಡೆಯಲು ಯುಎಸ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಎಂದು ವಿಮಾನ ಎಂಜಿನ್ ಪೂರೈಕೆದಾರರು ಹೇಳಿದ್ದಾರೆ. ಈ ಒಪ್ಪಂದದಿಂದ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ Mk2ವಿನ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: PM Modi in US: ಪ್ರಧಾನಿ ನರೇಂದ್ರ ಮೋದಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಗೆ ನೀಡಿದ ಉಡುಗೊರೆಗಳಲ್ಲಿ ಕರ್ನಾಟಕದ ಶ್ರೀಗಂಧ ಪೆಟ್ಟಿಗೆ ಸೇರಿದೆ!

ಭಾರತ ಮತ್ತು HAL ಜೊತೆಗಿನ ನಮ್ಮ ಬಹುಕಾಲದ ಪಾಲುದಾರಿಕೆಯಿಂದ ಈ ಐತಿಹಾಸಿಕ ಒಪ್ಪಂದವಾಗಿದೆ ಎಂದು GE ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, GE ಏರೋಸ್ಪೇಸ್ನ CEO ಹೆಚ್​. ಲಾರೆನ್ಸ್ ಕಲ್ಪ್, ಜೂನಿಯರ್ ಹೇಳಿದರು.

ಅಮೆರಿಕದ ಅಧ್ಯಕ್ಷ ಬಿಡೆನ್ ಮತ್ತು ಪ್ರಧಾನಿ ಮೋದಿಯವರ ಎರಡು ರಾಷ್ಟ್ರಗಳ ನಡುವಿನ ನಿಕಟ ಸಂಬಂಧವನ್ನು ಉಳಿಸಿಕೊಳ್ಳಲು ಮತ್ತು ಅಲ್ಲಿ ಮಹತ್ವ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಹತ್ವ ಪಾತ್ರವಹಿಸುತ್ತಿದ್ದಾರೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ನಮ್ಮ F414 ಎಂಜಿನ್‌ಗಳು ಉತ್ತಮವಾದದ್ದು ಮತ್ತು ಇದಕ್ಕೆ ಯಾವುದೂ ಸಾಟಿಯಿಲ್ಲ, ಇದು ಎರಡೂ ದೇಶಗಳಿಗೂ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಯೋಜನಗಳನ್ನು ನೀಡುತ್ತವೆ, ಏಕೆಂದರೆ ನಮ್ಮ ಗ್ರಾಹಕರು ತಮ್ಮ ಮಿಲಿಟರಿ ಫ್ಲೀಟ್‌ನ ಅಗತ್ಯಗಳನ್ನು ಪೂರೈಸಲು, ಉತ್ತಮ ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ನಾವು ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Thu, 22 June 23