ಉಕ್ರೇನ್-ರಷ್ಯಾ ಸಂಘರ್ಷವನ್ನು ಭಾರತ ಕೊನೆಗೊಳಿಸಬಹುದು ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾದಂತಹ ದೇಶಗಳು ಪ್ರಮುಖ ಪಾತ್ರ ವಹಿಸಬಹುದು ಎಂದಿದ್ದಾರೆ.
ಉತ್ತರ ಇಟಲಿಯ ಸೆರ್ನೊಬಿಯೊ ನಗರದ ಅಂಬ್ರೊಸೆಟ್ಟಿ ಫೋರಮ್‌ನಲ್ಲಿ ಶನಿವಾರ ಮೆಲೋನಿ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಭೆ ನಡೆಸಿದರು.
ಇದಕ್ಕೂ ಮುನ್ನ, ಈ ಪ್ರದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರತಿಕ್ರಿಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಉಕ್ರೇನ್ ಪ್ರವಾಸದ ನಂತರ ಇದೀಗ ಇಡೀ ವಿಶ್ವದ ಕಣ್ಣು ಭಾರತ ಹಾಗೂ ಪ್ರಧಾನಿ ಮೋದಿಯತ್ತ ನೆಟ್ಟಿದೆ.
ಈ ಯುದ್ಧವು ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ದೇಶಗಳ ಬಗ್ಗೆ ಮಾತನಾಡಿದ್ದರು.
ಪುಟಿನ್ ಭಾರತ ಮಾತ್ರವಲ್ಲದೆ ಚೀನಾ ಮತ್ತು ಬ್ರೆಜಿಲ್ ಕೂಡ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: PM Modi: ಕೈ ಮುಗಿದು ನಮಸ್ಕರಿಸಿ ಮೋದಿಯನ್ನು ಶೃಂಗಸಭೆಗೆ ಬರಮಾಡಿಕೊಂಡ ಇಟಲಿ ಪ್ರಧಾನಿ ಮೆಲೋನಿ
ಆದರೆ ಇಡೀ ಜಗತ್ತೇ ಭಾರತ ಮತ್ತು ಪ್ರಧಾನಿ ಮೋದಿಯತ್ತ ನೋಡುತ್ತಿದ್ದು ಅವರಿಂದ ಮಾತ್ರ ಈ ಯುದ್ಧವನ್ನು ನಿಲ್ಲಿಸಲು ಸಾಧ್ಯ ಎಂದು ಹೇಳುತ್ತಿದ್ದಾರೆ. ಪುಟಿನ್ ಉಕ್ರೇನ್ ಜೊತೆಗಿನ ಮಾತುಕತೆಯ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳಿರಲಿಲ್ಲ. ಆದರೆ ಈಗ ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು, ಭಾರತವು ಎರಡೂ ದೇಶಗಳಿಂದ ಶಾಂತಿಗಾಗಿ ನಿರಂತರವಾಗಿ ಮನವಿ ಮಾಡುತ್ತಿದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಶಕ್ತಿಯಿಂದಾಗಿ, ಭಾರತಕ್ಕೆ ಈ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯವಿದೆ ಎಂದು ಎಲ್ಲರೂ ಭಾವಿಸುತ್ತಾರೆ. ರಷ್ಯಾ ಬಿಟ್ಟರೆ ಭಾರತವೂ ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ, ಇದರಿಂದಾಗಿ ಅಮೆರಿಕ ಕೂಡ ಭಾರತದ ಪ್ರಸ್ತಾವನೆಗೆ ಪ್ರಾಮುಖ್ಯತೆ ನೀಡಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ