Viral Video: ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ: ಕಾರಣ ಕೇಳಿದ್ರೆ ದಂಗಾಗುತ್ತಿರಿ..!
ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ತನ್ನ ತಂದೆ ನನ್ನ ಮೇಲೆ 24/7 ನಿಗಾ ವಹಿಸಲು ಸಿಸಿಟಿವಿ ಫಿಕ್ಸ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಇದಲ್ಲದೇ ತಂದೆಯ ಈ ನಿರ್ಧಾರದಿಂದ ನಾನು ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಪಾಕಿಸ್ತಾನ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳ, ಕಂಪೆನಿ ಹಾಗೂ ಮನೆಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗಳ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು ಅಳವಡಿಸಿದ್ದು, ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಗಳು ಎಲ್ಲೆಲ್ಲಿ ಹೋಗ್ತಾಳೆ? ಏನು ಮಾಡುತ್ತಾಳೆ ಎಂದು ತಿಳಿಯಲು ಈತ ತನ್ನ ಮಗಳ ತಲೆ ಮೇಲೆ ಸಿಸಿಟಿವಿ ಅಳವಡಿಸಿರುವುದಾಗಿ ವರದಿಯಾಗಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Pakistan🫡😭 pic.twitter.com/Hdql8R2ejt
— Ghar Ke Kalesh (@gharkekalesh) September 6, 2024
ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ತಂದೆ 24/7 ತನ್ನ ಮೇಲೆ ನಿಗಾ ವಹಿಸಲು ಸಿಸಿಟಿವಿ ಫಿಕ್ಸ್ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಇದಲ್ಲದೇ ತಂದೆಯ ಈ ನಿರ್ಧಾರದಿಂದ ನಾನು ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Viral Video: ಊಟ ಕೊಡಲು ನಿರಾಕರಿಸಿದ್ದಕ್ಕೆ ಎಣ್ಣೆ ಏಟಲ್ಲಿ ರೆಸ್ಟೋರೆಂಟ್‌ಗೆ ಟ್ರಕ್ ನುಗ್ಗಿಸಿದ ಚಾಲಕ; ವಿಡಿಯೋ ವೈರಲ್
@gharkekalesh ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೆ. 06ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ ಒಂದು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋಗೆ ಸಾಕಷ್ಟು ಜನರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ