Viral: ಎಂಥಾ ಕಾಲ ಬಂತು ನೋಡಿ…. ಸಾವಿನ ಮನೆಯಲ್ಲಿ ಹೆಣದ ಜೊತೆಯೂ ರೀಲ್ಸ್
ಕೆಲವರಿಗಂತೂ ಸಿಕ್ಕಾಪಟ್ಟೆ ರೀಲ್ಸ್ ಹುಚ್ಚು. ಸ್ಥಳ, ಸಂದರ್ಭ ಏನು ನೋಡದೆ ಎಲ್ಲೆಂದರಲ್ಲಿ ರೀಲ್ಸ್ ಮಾಡುವ ಜನರೂ ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿ ಹೆಣದ ಜೊತೆಗೆಯೇ ರೀಲ್ಸ್ ಮಾಡಿದ್ದಾನೆ. ಈ ದೃಶ್ಯವನ್ನು ಕಂಡು ಎಂಥಾ ಕಾಲ ಬಂತಪ್ಪಾ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದ್ರೆ ಫೇಮಸ್ ಆಗುವ ಸಲುವಾಗಿ ಹುಚ್ಚು ಹುಚ್ಚು ಸಾಹಸಗಳನ್ನು ಮಾಡುತ್ತಿದ್ದಾರೆ. ಹೌದು ಕೆಲವರು ತಮ್ಮ ಪ್ರಾಣದ ಜೊತೆಗೆಯೇ ಚೆಲ್ಲಾಟವಾಡಿದ್ರೆ ಇನ್ನೂ ಕೆಲವರು ರೈಲು, ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿ ಹೆಣದ ಜೊತೆಗೆಯೇ ರೀಲ್ಸ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇನ್ನೂ ಈ ಕಣ್ಣಲ್ಲಿ ಎಂಥೆತಾ ಅವತಾರಗಳನ್ನು ನೋಡ ಬೇಕಿದ್ಯೋ ದೇವ್ರೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.
ಯಾರಾದರೂ ತೀರಿ ಹೋದ್ರೆ, ಆ ಸಾವಿನ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿರುತ್ತದೆ. ಎಲ್ಲರ ಕಣ್ಣಲ್ಲೂ ಕಣ್ಣೀರು ತುಂಬಿರುತ್ತದೆ. ಆದ್ರೆ ಇಲ್ಲೊಬ್ಬ ಆಸಾಮಿ ಸಾವಿನ ಮನೆಯಲ್ಲಿಯೂ ರೀಲ್ಸ್ ಮಾಡಿದ್ದಾನೆ. ಈ ಕುರಿತ ವಿಡಿಯೋವನ್ನು ಸಂಜಯ್ ತ್ರಿಪಾಠಿ (sanjayjourmo) ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೆಣದ ಜೊತೆ ಕೂಡಾ ರೀಲ್ಸ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
अर्थी के साथ भी रील ☹️ pic.twitter.com/k6OQsMxh6u
— SANJAY TRIPATHI (@sanjayjourno) September 6, 2024
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಲ್ಲರೂ ಹೆಣದ ಮುಂದೆ ಕೂತೂ ಜೋರಾಗಿ ಅಳುತ್ತಿದ್ದರೆ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆ ಹೆಣದ ಮುಂದೆ ಅಳುತ್ತಾ ಎಮೋಷನಲ್ ರೀಲ್ಸ್ ಮಾಡುವಂತಹ ದೃಶ್ಯವನ್ನು ಕಾಣಬಹುದು.
ಸೆಪ್ಟೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಅತ್ಯಂತ ನಾಚಿಕೆಗೇಡಿನ ದೃಶ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮನುಷ್ಯರಲ್ಲಿ ಮಾನವೀಯತೆ ಮತ್ತು ಸೂಕ್ಷ್ಮತೆ ಮರೆಯಾಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಲ್ಲಾ ಈ ಮನುಷ್ಯನಿಗೆ ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುವುದೇ ಗೊತ್ತಿಲ್ಲವೇʼ ಎಂದು ಕಿಡಿ ಕಾರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ