AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಏಷ್ಯಾ ವಿಮಾನದಲ್ಲಿ ತನ್ನ ಸೀಟಿನಲ್ಲೇ ಮಲ ವಿಸರ್ಜನೆ ಮಾಡಿದ ಮಹಿಳೆ

ಏರ್‌ಏಷ್ಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಸೀಟಿನಲ್ಲೇ ಮಲವಿಸರ್ಜನೆ ಮಾಡಿ ಸಹ ಪ್ರಯಾಣಿಕರಲ್ಲಿ ಆಕ್ರೋಶ ಮೂಡಿಸಿದ್ದಾರೆ. 40 ನಿಮಿಷಗಳ ದುರ್ವಾಸನೆಯ ನಂತರ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಅನಾರೋಗ್ಯ ಕಾರಣ ಹೇಳಿದರೂ, ಇಂತಹ ಅಶಿಸ್ತಿನ ವರ್ತನೆಗೆ ವಿಮಾನಯಾನ ನಿಷೇಧ ಸಾಧ್ಯತೆ ಇದೆ. ಪ್ರಯಾಣಿಕರು ಆರೋಗ್ಯ ಸಮಸ್ಯೆಗಳಿದ್ದಲ್ಲಿ ಮುಂಚಿತವಾಗಿ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಮುಖ್ಯ.

ಏರ್ ಏಷ್ಯಾ ವಿಮಾನದಲ್ಲಿ ತನ್ನ ಸೀಟಿನಲ್ಲೇ ಮಲ ವಿಸರ್ಜನೆ ಮಾಡಿದ ಮಹಿಳೆ
ಏರ್ ಏಷ್ಯಾ
ನಯನಾ ರಾಜೀವ್
|

Updated on:Aug 26, 2026 | 1:22 PM

Share

ಕೌಲಾಲಂಪುರ್, ಆಗಸ್ಟ್​ 26: ಮಲೇಷ್ಯಾದಿಂದ ಚೀನಾಕ್ಕೆ ಪ್ರಯಾಣಿಸುತ್ತಿದ್ದ ಏರ್ ಏಷ್ಯಾ (AirAsia) ವಿಮಾನ(Flight)ದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಸೀಟಿನಲ್ಲೇ ಮಲವಿಸರ್ಜನೆ ಮಾಡಿದ ಘಟನೆ ನಡೆದಿದ್ದು, ಸಹ ಪ್ರಯಾಣಿಕರು ಗಂಟೆಗಳ ಕಾಲ ಅಸಹನೀಯ ದುರ್ವಾಸನೆಯಲ್ಲಿ ಪ್ರಯಾಣಿಸುವಂತಾಯಿತು. ವಿಮಾನದಲ್ಲಿದ್ದ ಶೌಚಾಲಯ ಕೇವಲ ಕೆಲವೇ ಹೆಜ್ಜೆಗಳ ದೂರದಲ್ಲಿದ್ದರೂ ಈ ಘಟನೆ ಸಂಭವಿಸಿದ್ದು, ಕ್ಯಾಬಿನ್‌ನಲ್ಲಿದ್ದ ಇತರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಧ್ಯರಾತ್ರಿಯ ಘಟನೆ: ರಾತ್ರಿ 10.30 ಕ್ಕೆ ಟೇಕ್‌ಆಫ್ ಆಗಿದ್ದ ವಿಮಾನದಲ್ಲಿ ಮುಂಜಾನೆ ಸುಮಾರು 2 ಗಂಟೆಯ ವೇಳೆ ಪ್ರಯಾಣಿಕರೆಲ್ಲರೂ ನಿದ್ರಿಸುತ್ತಿದ್ದಾಗ ಈ ಘಟನೆ ನಡೆದಿದೆ. 40 ವರ್ಷದ ಮಹಿಳೆಯೊಬ್ಬರು ಸೀಟಿನಿಂದ ಎದ್ದು ಬ್ಯಾಗ್ ಹಿಡಿದು ಶೌಚಾಲಯದತ್ತ ಓಡಿದ್ದಾರೆ.

ಮಹಿಳೆ ವಾಂತಿ ಮಾಡಿಕೊಳ್ಳಲು ಹೋಗಿರಬಹುದು ಎಂದು ಪ್ರಯಾಣಿಕರು ಭಾವಿಸಿದ್ದರು. ಆದರೆ ಅವರ ಸೀಟಿನ ಮೇಲೆ ಮತ್ತು ವಿಮಾನದ ಕಾರ್ಪೆಟ್ ಮೇಲೆ ಮಲ ಹರಡಿಕೊಂಡಿರುವುದು ಕಂಡುಬಂದಿದೆ. ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಾಗ, ತನಗೆ ತೀವ್ರ ಅನಾರೋಗ್ಯ ಮತ್ತು ಅಸ್ವಸ್ಥತೆ ಉಂಟಾಗಿದ್ದ ಕಾರಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಆಕೆ ಸಮರ್ಥಿಸಿಕೊಂಡಿದ್ದಾಳೆ.

40 ನಿಮಿಷಗಳ ಕಾಲ ವಾಸನೆ: ಘಟನೆಯಿಂದಾಗಿ ಅಕ್ಕಪಕ್ಕದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಸುಮಾರು 40 ನಿಮಿಷಗಳ ಕಾಲ ವಿಪರೀತ ದುರ್ವಾಸನೆಯಲ್ಲಿ ನರಳಬೇಕಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ವಿಮಾನ ಸಿಬ್ಬಂದಿ ತಕ್ಷಣವೇ ಸೋಂಕುನಿವಾರಕಗಳು , ಏರ್ ಫ್ರೆಶ್ನರ್‌ಗಳನ್ನು ಬಳಸಿ ಆ ಜಾಗವನ್ನು ಸ್ವಚ್ಛಗೊಳಿಸಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಇಡೀ ವಿಮಾನವನ್ನು ಸಂಪೂರ್ಣವಾಗಿ ಡೀಪ್ ಕ್ಲೀನಿಂಗ್ ಮಾಡಲಾಯಿತು.

ಮತ್ತಷ್ಟು ಓದಿ: Plane Crash: ಅಲಾಸ್ಕಾದಲ್ಲಿ 8 ಜನರಿದ್ದ ಪ್ರಯಾಣಿಕರ ವಿಮಾನ ಪತನ

ಏರ್‌ಲೈನ್ಸ್ ಸ್ಪಷ್ಟನೆ: ಏರ್ ಏಷ್ಯಾ ಚೀನಾ ಜನರಲ್ ಮ್ಯಾನೇಜರ್ ಫ್ರಾಂಕ್ ಟ್ಯಾಂಗ್ ಟಿಂಗ್ ಅವರು ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ನೈರ್ಮಲ್ಯ ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ವಿಮಾನಯಾನ ನಡವಳಿಕೆ ನಿಯಮಗಳು: ಅಂತಾರಾಷ್ಟ್ರೀಯ ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದೊಳಗೆ ಪ್ರಯಾಣಿಕರು ಇತರರ ಆರೋಗ್ಯ ಅಥವಾ ನೈರ್ಮಲ್ಯಕ್ಕೆ ಧಕ್ಕೆ ತರುವಂತಹ ಅಶಿಸ್ತಿನ ನಡವಳಿಕೆ ತೋರಿದರೆ ಅಂತಹವರನ್ನು ‘ಅನ್‌ರೂಲಿ ಪ್ಯಾಸೆಂಜರ್’ ಎಂದು ಪರಿಗಣಿಸಿ ಭವಿಷ್ಯದಲ್ಲಿ ವಿಮಾನ ಪ್ರಯಾಣದಿಂದ ನಿಷೇಧಿಸುವ ಸಾಧ್ಯತೆಯಿರುತ್ತದೆ.

ಆರೋಗ್ಯ ತುರ್ತುಸ್ಥಿತಿ: ವಿಮಾನದಲ್ಲಿ ಪ್ರಯಾಣಿಸುವಾಗ ಹೊಟ್ಟೆ ನೋವು ಅಥವಾ ಅಜೀರ್ಣದಂತಹ ಸಮಸ್ಯೆಗಳಿದ್ದರೆ ಮುಂಚಿತವಾಗಿಯೇ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡುವುದು ಅಗತ್ಯ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:22 pm, Wed, 26 August 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು