ಧರ್ಮ ಯಾವುದೇ ಆಗಿರಲಿ, ಐಹಿಕ ಸುಖಭೋಗಗಳನ್ನು ತ್ಯಜಿಸಿ ಜೀವಿಸುವುದು ಸುಲಭ ಸಾಧ್ಯವಲ್ಲ. ಈ ಮಾತು ಬೌಧ್ಧ ಭಿಕ್ಷುಗಳಿಗೂ (ಭಿಕ್ಕು ಅಂತಲೂ ಕರೆಯುತ್ತಾರೆ) (monk) ಅನ್ವಯಿಸುತ್ತದೆ. ಬೌದ್ಧ ಧರ್ಮಕ್ಕೆ (Buddhist Religion) ಸೇರಿದ ವ್ಯಕ್ತಿಯೊಬ್ಬ ಭಿಕ್ಷು ಆಗುವ ನಿರ್ಧಾರ (ಸನ್ಯಾಸ ಸ್ವೀಕರಿಸುವ) ತೆಗೆದುಕೊಂಡರೆ ಅವನು ಹಲವಾರು ನಿಬಂಧನೆಗಳಿಗೆ ಒಳಪಟ್ಟು ಜೀವಿಸಬೇಕಾಗುತ್ತದೆ. ಭಿಕ್ಕುಗಳು ಅಗತ್ಯವಿದ್ದಲ್ಲಿ ಮಾತ್ರ ಮಾತಾಡಬೇಕು, ಹೊರಗಿನ ಪ್ರಪಂಚದ ಜೊತೆ ಯಾವುದೇ ಸಂಪರ್ಕವಿಟ್ಟುಕೊಳ್ಳಬಾರದು, ದಿನಕ್ಕೆ 7 ಬಾರಿ ಪ್ರಾರ್ಥನೆ (prayer) ಮಾಡಬೇಕು, ಸದಾ ಯಾವುದಾದರೂ ಚಟುವಟಿಕೆ-ದೈಹಿಕ ಶ್ರಮ, ಅಧ್ಯಯನ ಅಥವಾ ಪ್ರಾರ್ಥನೆಯಲ್ಲಿ ತೊಡಗಿರಬೇಕು ಹೀಗೆ ಈ ಪಟ್ಟಿ ಮುಂದುವರಿಯುತ್ತದೆ.
ಸನ್ಯಾಸತ್ವ ಸ್ವೀಕರಿಸಿದ ನಂತರ ಭಿಕ್ಷುವೊಬ್ಬ ತಾನು ಸಾಯುವರೆಗೆ ಈ ಕಟ್ಟುಪಾಡುಗಳಿಗೆ ಬದ್ಧನಾಗಿರಬೇಕಾಗುತ್ತದೆ. ಭಿಕ್ಷುಗಳು ಯಾವುದೇ ರೀತಿಯ ಮನರಂಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ, ಮಾದಕ ವಸ್ತುಗಳನ್ನು (ಡ್ರಗ್ಸ್) ಅವರು ಸೇವಿಸಲೇಕೂಡದು.
ಡ್ರಗ್ ಟೆಸ್ಟ್ ನಲ್ಲಿ ಮಾಂಕ್ಗಳು ಫೇಲ್
ಆದರೆ, ಥೈಲ್ಯಾಂಡ್ ನ ಬೌದ್ಧ ಮಂದಿರವೊಂದರಲ್ಲಿ ನೆಲೆಸಿರುವ ಭಿಕ್ಷುಗಳನ್ನು ಡ್ರಗ್ ಟೆಸ್ಟ್ ಗೆ ಒಳಪಡಿಸಿದಾಗ ಎಲ್ಲರ ರಿಸಲ್ಟ್ ಪಾಸಿಟಿವ್ ಬಂದಿದ್ದು ಅವರನ್ನು ರಿಹ್ಯಾಬ್ ಸೆಂಟರ್ ಗೆ ಕಳಿಸಲಾಗಿದೆ.
ಕೇಂದ್ರೀಯ ಥೈಲ್ಯಾಂಡ್ ನಲ್ಲಿನ ಬೌದ್ಧ ಮಠವೊಂದರಲ್ಲಿದ್ದ ಎಲ್ಲ ಭಿಕ್ಷುಗಳು ಡ್ರಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವುದರಿಂದ ಅವರನ್ನು ಸನ್ಯಾಸತ್ವದಿಂದ ಅನರ್ಹಗೊಳಿಸಿಲಾಗಿದೆ ಎಂದು ಸ್ಥಳಿಯ ಆಡಳಿತ ತಿಳಿಸಿದೆ.
ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಬೂನ್ಲರ್ಟ್ ತಿಂತಪ್ಥೈ ಹೆಸರಿನ ಒಬ್ಬ ಅಧಿಕಾರಿ, ‘ಬುಂಗ್ ಸ್ಯಾಮ್ ಫಾನ್ ಜಿಲ್ಲೆಯ ಫೆಚಾಬುನ್ ಎಂಬ ಪ್ರಾಂತ್ಯದಲ್ಲಿರುವ ಒಂದು ಬೌದ್ಧ ಮಠದ ಒಬ್ಬ ಆಬಟ್ (ಮಠದ ಆಡಳಿತಾಧಿಕಾರಿ) ಮತ್ತು ಇತರ ನಾಲ್ಕು ಮಾಂಕ್ ಗಳ (ಭಿಕ್ಷುಗಳು) ಡ್ರಗ್ಸ್ ಪರೀಕ್ಷೆಯನ್ನು ಸೋಮವಾರ ನಡೆಸಿದ್ದು ಅವರ ದೇಹದಲ್ಲಿ ಮಿಥಾಂಫಿಟಾಮೈನ್ ಅಂಶ ಕಂಡು ಬಂದಿದೆ. ಅವರ ಹಾಸಿಗೆಗಳ ಕೆಳಗೆ ಡ್ರಗ್ ಪೊಟ್ಟಣಗಳು ಸಿಕ್ಕಿವೆ,’ ಎಂದು ಹೇಳಿದ್ದಾರೆ.
ಮಾಂಕ್ ಗಳನ್ನು ರಿಹ್ಯಾಬ್ ಸೆಂಟರ್ ಗೆ ವರ್ಗಾಯಿಸಲಾಗಿದೆ
ಅಧಿಕಾರಿಗಳು ನೀಡಿರುವ ಹೇಳಿಕೆ ಪ್ರಕಾರ ಎಲ್ಲ ಭಿಕ್ಷುಗಳನ್ನು ವೈದ್ಯಕೀಯ ಸೌಲಬಭ್ಯವುಳ್ಳ ಡ್ರಗ್ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಮಠದಲ್ಲಿನ ಗುಡಿಗಳು ಖಾಲಿಯಾಗಿರುವುದರಿಂದ ಸ್ಥಳೀಯರು ಚಿಂತಿತರಾಗಿದ್ದಾರೆ. ಗುಡಿಗಳಲ್ಲಿ ಪೂಜಾ ಸಂಸ್ಕಾರಗಳು (merit-making) ಸ್ಥಗಿತಗೊಂಡಿರುವುದು ಅವರಲ್ಲಿ ಬೇಸರವನ್ನುಂಟು ಮಾಡಿದೆ.
ಮೆರಿಟ್-ಮೇಕಿಂಗ್ ವಿಧಿಯ ಅಂಗಾವಾಗಿ ಬೌದ್ಧ ಧರ್ಮದ ಅನುಯಾಯಿಗಳು ಪುಣ್ಯಾರ್ಥವಾಗಿ ಭಿಕ್ಷುಗಳಿಗೆ ಆಹಾರ ನೀಡುತ್ತಾರೆ. ಸ್ಥಳೀಯರು ತಮ್ಮ ಧಾರ್ಮಿಕ ವಿಧಿಗಳನ್ನು ಪೂರೈಸಿಕೊಳ್ಳುವದಕ್ಕೋಸ್ಕರ ಎಲ್ಲ ಮಾಂಕ್ ಗಳನ್ನು ಗುಡಿಗೆ ಕಳಿಸುವುದಾಗಿ ಬೂನ್ಲರ್ಟ್ ಅಧಿಕಾರಿಗಳು ಹೇಳಿದ್ದಾರೆ.
ಪವಿತ್ರ ಗುರುಗಳನ್ನು ಸ್ಥಳಾಂತರಿಸಿರುವ ಪುನರ್ವಸತಿ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.
ಡ್ರಗ್ಸ್ ಸೇವಿಸಿದ್ದು ಅಂಗೀಕರಿಸಿದ ಭಿಕ್ಷುಗಳು
ಮಾಂಕ್ ಗಳು ಡ್ರಗ್ಸ್ ತೆಗೆದುಕೊಳ್ಳುವುದರ ಜೊತೆಗೆ ಅವುಗಳ ಮಾರಾಟ ಮಾಡಿದ ಸಂಗತಿಯನ್ನೂ ಅಂಗೀಕರಿಸಿದ್ದಾರೆ. ಡ್ರಗ್ಸ್ ಸೇವನೆ ಮತ್ತು ಮಾರಾಟ ಎರಡರಲ್ಲೂ ತಾವು ತೊಡಗಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ, ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವಸಂಸ್ಥೆಯ ಡ್ರಗ್ಸ್ ಮತ್ತು ಕ್ರೈಮ್ ಕಚೇರಿ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ಥೈಲ್ಯಾಂಡ್ ಮಿಥಾಂಫಿಟಾಮೈನ್ ಡ್ರಗ್ ಕಳ್ಳಸಾಗಣೆಗೆ ಕೇಂದ್ರಸ್ಥಳವಾಗಿದ್ದು ಮ್ಯಾನ್ಮಾರ್ ನ ಅರಾಜಕ ರಾಜ್ಯವಾಗಿರುವ ಶಾನ್ ನಿಂದ ಲಾವೋಸ್ ಮೂಲಕ ದೇಶವನ್ನು ಪ್ರವೇಶಿಸುತ್ತಿದೆ. ಈ ಡ್ರಗ್ ಥೈಲ್ಯಾಂಡ್ ನಲ್ಲಿ ಭಾರಿ ಅಗ್ಗ ಬೆಲೆಗೆ ಲಭ್ಯವಿದೆ.
ವರದಿಗಳ ಪ್ರಕಾರ ಓಪನ್ ಮಾರ್ಕೆಟ್ ನಲ್ಲಿ ಮಿಥಾಂಫಿಟಾಮೈನ್ ಡ್ರಗ್ 20 ಬಹ್ತ್ ಗಿಂತ (ಸುಮಾರು ರೂ. 46) ಕಡಿಮೆ ಬೆಲೆಗೆ ಸಿಗುತ್ತವೆ. ಮಾಂಕ್ ಗಳು ಡ್ರಗ್ಸ್ ವಿಷಯ ಹಾಗಿರಲಿ, ಯಾವುದೇ ಐಹಿಕ ಪದಾರ್ಥವನ್ನು ತಮ್ಮೊಂದಿಗೆ ಹೊಂದುವಂತಿಲ್ಲ.
ತನ್ನಿಡೀ ಬದುಕನ್ನು ಧರ್ಮಕ್ಕೆ ಸಮರ್ಪಿಸಿಕೊಂಡವನೇ ಮಾಂಕ್ ಅನಿಸಿಕೊಳ್ಳುತ್ತಾನೆ ಮತ್ತು ಇಹಲೋಕದ ಎಲ್ಲ ಸುಖಭೋಗ ಮತ್ತು ಸಮಾಜದಿಂದ ತನ್ನನ್ನು ಬೇರ್ಪಡಿಸಿಕೊಂಡು ಜೀವಿಸುತ್ತಾನೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Wed, 30 November 22