ಪಾಕಿಸ್ತಾನದ ನೂತನ ಸೇನ ಮುಖ್ಯಸ್ಥರಾಗಿ ಜನರಲ್ ಆಸಿಮ್ ಮುನೀರ್ (General Asim Munir) ಮಂಗಳವಾರ ಅಧಿಕಾರವಹಿಸಿಕೊಂಡರು. ನ್ಯೂಕ್ಲಿಯರ್-ಆಸ್ತ್ರಗಳನ್ನು ದೇಶದ ಮಿಲಿಟರಿ ವ್ಯವಸ್ಥೆಯಲ್ಲ್ಲಿ ಇದೊಂದು ಮಹತ್ತರ ಬದಲಾವಣೆ ಎಂದು ಹೇಳಲಾಗುತ್ತಿದೆ. ಸೇನಾ ದಂಡನಾಯಕನಾಗಿ ಮುನಿರ್ ಅವರ ನೇಮಕಾತಿಯನ್ನು ಪಾಕಿಸ್ತಾನ ಸರ್ಕಾರ ಕಳೆದ ವಾರವೇ ಘೋಷಿಸಿತ್ತು. ಆದರೆ ಸರ್ಕಾರ ಮತ್ತು ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ನಡುವೆ ನಡೆಯುತ್ತಿರುವ ರಾಜಕೀಯದ ಸಂಘರ್ಷದ ನಡುವೆ ಸೇನೆಯನ್ನು ಎಳೆತಂದಿರುವ ಸಂದಿಗ್ಧ ಸ್ಥಿತಿಯಲ್ಲಿ ಜನರಲ್ ಮುನೀರ್ ಸೇನೆಯ ಮುಖ್ಯಸ್ಥನಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಪಾಕಿಸ್ತಾನ ಪ್ರಸ್ತುತವಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ (economic crisis) ಮುಳುಗಿದೆ.
‘ಸೇನೆಯ ಮುಖ್ಯಸ್ಥನಾಗಿ ಜನರಲ್ ಮುನೀರ್ ಅವರ ನೇಮಕಾತಿ ಸೇನೆ ಮತ್ತು ದೇಶಕ್ಕೆ ಒಂದು ಪಾಸಿಟಿವ್ ನಡೆಯಾಗಿ ಸಾಬೀತಾಗಲಿದೆ ಎಂಬ ಸಂಪೂರ್ಣ ಭರವಸೆ ನನಗಿದೆ,’ ಎಂದು ಆ ಹುದ್ದೆಯಿಂದ ನಿರ್ಗಮಿಸುತ್ತಿರುವ ಜನರಲ್ ಕಮರ್ ಜಾವೆದ್ ಬಾಜ್ವಾ ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ಕಾರ್ಯಾಲಯದಲ್ಲಿ ನಡೆದ ಅಧಿಕಾರ ಹಸ್ತಾಂತರಿಸುವ ಸಮಾರಂಭದಲ್ಲಿ ಹೇಳಿದರು.
ಸೇನಾ ಮುಖ್ಯಸ್ಥನಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಾಜ್ವಾ ಅವರು ಇತ್ತೀಚಿಗೆ ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಏಪ್ರಿಲ್ ನಲ್ಲಿ ತಮ್ಮ ಸರ್ಕಾರದ ವಿರುದ್ಧ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಮತ್ತು ಅದರ ಪತನದಲ್ಲಿ ಸೇನೆ ದೊಡ್ಡ ಪಾತ್ರ ನಿರ್ವಹಿಸಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು.
‘ಸೇನಾ ನಾಯಕತ್ವ ಮತ್ತ್ ದೇಶದ ನಡುವೆ ಹದಗೆಟ್ಟಿರುವ ಬಾಂಧವ್ಯವನ್ನು ಸರಿಪಡಿಸಿ ಉತ್ತಮಗೊಳಿಸುವುದು ಜನಲರ್ ಆಸಿಮ್ ಮುನೀರ್ ಅವರ ಪ್ರಥಮ ಆದ್ಯತೆಯಾಗಿದೆ,’ ಎಂದು ಇಮ್ರಾನ್ ಖಾನ್ ಅವರ ಹಿರಿಯ ಆಪ್ತ ಅಸದ್ ಉಮರ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿರುವ ಇಮ್ರಾನ್ ಖಾನ್ ಸಾರ್ವತ್ರಿಕ ಚುನಾವಣೆಗಳನ್ನು ಬೇಗ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ತಮ್ಮ ಪಕ್ಷದ ಆಡಳಿತದಲ್ಲಿರುವ ಪ್ರಾಂತೀಯ ವಿಧಾನಸಭೆಗಳನ್ನು ವಿಸರ್ಜಿಸುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. ಅವರು ಹಾಗೆ ಮಾಡಿದ್ದೇಯಾದಲ್ಲಿ ಅದು ಸಂವೈಧಾನಿಕ ಬಿಕ್ಕಟ್ಟಿಗೆ ಕಾರಣವಾಗಲಿದೆ.
ಪಾಕಿಸ್ತಾನ ತಾಲಿಬಾನ್ ಸರ್ಕಾರದೊಂದಿಗೆ 6 ತಿಂಗಳು ಹಿಂದೆ ಮಾಡಿಕೊಂಡಿದ್ದ ತಾತ್ಕಾಲಿಕ ಕದನ ವಿರಾಮನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿರುವುದರಿಂದ ಅದು ನಡೆಸಬಹುದಾದ ಸೇನಾ ಕಾರ್ಯಾಚರಣೆಗಳನ್ನು ಹತ್ತಿಕ್ಕುವ ಸವಾಲು ಕೂಡ ಜನರಲ್ ಮುನೀರ್ ಅವರ ಮುಂದಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ