AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jack Ma: ಜಪಾನ್​ನಲ್ಲಿ ವಾಸವಾಗಿದ್ದರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

ಚೀನಾದ ಉದ್ಯಮಿ ಮತ್ತು ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಅವರು ಏಕಸ್ವಾಮ್ಯ ವಿರೋಧಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರಣ ಚೀನಾ ಸರ್ಕಾರ ಅವರ ವಿರುದ್ಧ ದೂರು ದಾಖಲು ಮಾಡಿತ್ತು. 2020ರಿಂದ ತಮ್ಮ ವ್ಯವಹಾರಗಳು ಕುಸಿಯುತ್ತ ಬಂದಿತ್ತು, ಈಗ ಸುಮಾರು ಆರು ತಿಂಗಳಿಂದ ಜಪಾನ್ ಟೋಕಿಯೊದಲ್ಲಿ ವಾಸಿಸುತ್ತಿದ್ದಾರೆ.

Jack Ma: ಜಪಾನ್​ನಲ್ಲಿ ವಾಸವಾಗಿದ್ದರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ
Jack Ma
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Nov 30, 2022 | 6:50 PM

Share

ಬೀಜಿಂಗ್: ಚೀನಾದ ಉದ್ಯಮಿ ಮತ್ತು ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಅವರು ಏಕಸ್ವಾಮ್ಯ ವಿರೋಧಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರಣ ಚೀನಾ ಸರ್ಕಾರ ಅವರ ವಿರುದ್ಧ ದೂರು ದಾಖಲು ಮಾಡಿತ್ತು. 2020ರಿಂದ ತಮ್ಮ ವ್ಯವಹಾರಗಳು ಕುಸಿಯುತ್ತ ಬಂದಿತ್ತು, ಈಗ ಸುಮಾರು ಆರು ತಿಂಗಳಿಂದ ಜಪಾನ್ ಟೋಕಿಯೊದಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಮಂಗಳವಾರ ಜಾಕ್ ಮಾ ಅವರ ಕುಟುಂಬದೊಂದಿಗೆ ಹಲವು ತಿಂಗಳುಗಳಿಂದ ಜಪಾನ್‌ನಲ್ಲಿ ವಾಸವಾಗಿದ್ದಾರೆ. ಇದೀಗ ಟೋಕಿಯೊದ ಹೊರಗಿನ ಗ್ರಾಮಾಂತರದಲ್ಲಿ ಸ್ಕೀ ರೆಸಾರ್ಟ್‌ಗಳು ಮತ್ತು ಯುಎಸ್, ಇಸ್ರೇಲ್‌ಗೆ ಪ್ರವಾಸಗಳನ್ನು ಮಾಡುತ್ತಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಇದನ್ನು ಓದಿ: Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ

ಜಾಕ್ ಮಾ 2020ರಲ್ಲಿ ಚೀನಾದ ಸರ್ಕಾರವನ್ನು ಟೀಕಿಸಿದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸರ್ಕಾರಿ ಬ್ಯಾಂಕ್‌ಗಳು ಪ್ಯಾನ್‌ಶಾಪ್ ಮನಸ್ಥಿತಿಯನ್ನು ಹೊಂದಿವೆ ಎಂದು ಆರೋಪಿಸಿದರು. ಅವರು ಸ್ಥಾಪಿಸಿದ ಎರಡೂ ಕಂಪನಿಗಳು ಚೀನಾ ಸರ್ಕಾರದಿಂದ ಅಡೆತಡೆಗಳ ಎದುರಿಸಿವೆ. ಚೀನೀ ಸರ್ಕಾರ ಆಂಟ್‌ನ ಬ್ಲಾಕ್‌ಬಸ್ಟರ್ USD 37 ಬಿಲಿಯನ್ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ರದ್ದುಗೊಳಿಸಿದೆ ಮತ್ತು ಕಳೆದ ವರ್ಷ ಆಂಟಿಟ್ರಸ್ಟ್ ದುರುಪಯೋಗಕ್ಕಾಗಿ ಅಲಿಬಾಬಾಗೆ ದಾಖಲೆಯ USD 2.8 ಶತಕೋಟಿ ದಂಡ ವಿಧಿಸಿದರು.

ಚೀನಾ ಸರ್ಕಾರದೊಂದಿಗಿನ ಕಿತ್ತಾಟದ ಸಮಯದಲ್ಲಿ ಜಾಕ್ ಮಾ ಅವರು ಭಾರತಕ್ಕೆ ಭೇಟಿ ನೀಡಿದ್ದರು, ನಂತರ ಭಾರತದಲ್ಲಿ ಅಲಿಬಾಬಾ ವ್ಯಾಪಾರ ಹಿತಾಸಕ್ತಿಗಳನ್ನು ಅಭಿವೃದ್ಧಿಪಡಿಸಿದರು ಮತ್ತು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಜಾಕ್ ಮಾ ಅವರು ಅಲಿಬಾಬಾ ಪ್ರಧಾನ ಕಚೇರಿಯನ್ನು ಹೊಂದಿರುವ ಶಾಂಘೈ ಬಳಿಯ ಹ್ಯಾಂಗ್‌ಝೌ ನಗರದಲ್ಲಿ ಮನೆ ಹೊಂದಿದ್ದಾರೆ. ಚೀನಾ ಸರ್ಕಾರದ ಜೊತೆಗಿನ ಗುದ್ದಾಟದಿಂದ ಜಾಕ್ ಮಾ ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ವಿವಿಧ ದೇಶಗಳಿಗೆ ಪ್ರವಾಸ ಮಾಡಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಜಾಕ್ ಮಾ, ಚೀನಾದ ಅತ್ಯಂತ ಗೌರವಾನ್ವಿತ ಉದ್ಯಮಿಯಾಗಿದ್ದು, ಚೀನಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆದರು. 2019ರಲ್ಲಿ ನಿವೃತ್ತಿರಾಗುವ ಹೊತ್ತಿಗೆ ತಕ್ಷಣ ಆಶ್ಚರ್ಯಕರ ಘೋಷಣೆಯನ್ನು ಮಾಡಿದರೂ, ಚೀನಾ ಸರ್ಕಾರ ಧೋರಣೆಯಿಂದ, ನಾನು ಕಡಲತೀರ ಪ್ರದೇಶದಲ್ಲಿ ತನ್ನ ವ್ಯವಹಾರವನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದರು. ಚೀನಾದ ಉನ್ನತ ವ್ಯವಹಾರಗಳಿಂದ ದೂರ ಉಳಿಯಲು ಮುಂದಾಗಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Wed, 30 November 22