ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ನಾಯಕ ಅಬು ಹಸನ್ ಅಲ್ ಹಶಿಮಿ ಅಲ್ ಖುರೇಶಿ ಸಾವು
ಹಶಿಮಿ ದೇವರ ಶತ್ರುಗಳೊಂದಿಗಿನ ಯುದ್ಧದಲ್ಲಿ ಹತರಾಗಿದ್ದಾರೆ. ಆತನ ಸಾವಿನ ದಿನಾಂಕ ಅಥವಾ ಸಂದರ್ಭಗಳನ್ನು ವಕ್ತಾರ ವಿವರಿಸಿಲ್ಲ. ಗುಂಪಿನ ಹೊಸ ನಾಯಕ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಎಂದು ಘೋಷಿಸಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಗುಂಪು (ISIS) ಬುಧವಾರ ತನ್ನ ನಾಯಕ ಅಬು ಹಸನ್ ಅಲ್-ಹಶಿಮಿ ಅಲ್-ಖುರೇಶಿ ((Abu Hasan al-Hashimi al-Qurashi)ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಅವರ ಸ್ಥಾನಕ್ಕೆ ಬೇರೊಬ್ಬ ನಾಯಕನನ್ನು ಘೋಷಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಇರಾಕಿನ ಹಶಿಮಿ “ದೇವರ ಶತ್ರುಗಳೊಂದಿಗಿನ ಯುದ್ಧದಲ್ಲಿ” ಕೊಲ್ಲಲ್ಪಟ್ಟರು ಎಂದು ಭಯೋತ್ಪಾದಕ ಗುಂಪಿನ ವಕ್ತಾರ ಹೇಳಿದ್ದು ಅವನ ಸಾವಿನ ದಿನಾಂಕ ಅಥವಾ ಸಂದರ್ಭಗಳನ್ನು ವಿವರಿಸಿಲ್ಲ ಆಡಿಯೋ ಸಂದೇಶದಲ್ಲಿ ಮಾತನಾಡಿದ ವಕ್ತಾರ ಗುಂಪಿನ ಹೊಸ ನಾಯಕ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರೇಶಿ ಎಂದು ಹೇಳಿದ್ದಾರೆ. ಖುರೇಶಿ ಎಂಬುದು ಪ್ರವಾದಿ ಮೊಹಮ್ಮದ್‌ನ ಬುಡಕಟ್ಟು ಜನಾಂಗವನ್ನು ಉಲ್ಲೇಖಿಸುತ್ತದೆ.
#BREAKING Islamic State group leader Abu Hasan al-Hashimi al-Qurashi killed in battle, replacement announced: spokesman pic.twitter.com/qRbMnJhzA5
— AFP News Agency (@AFP) November 30, 2022
2014 ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಹಿಂಸಾಚಾರ ಏರಿಕೆಯ ನಂತರ ಅದು ವಿಶಾಲವಾದ ಭೂಪ್ರದೇಶವನ್ನು ವಶಪಡಿಸಿಕೊಂಡಿತು. ಇದನ್ನು 2017ರಲ್ಲಿ ಇರಾಕ್‌ನಲ್ಲಿ ಮತ್ತು ಎರಡು ವರ್ಷಗಳ ನಂತರ ಸಿರಿಯಾದಲ್ಲಿ ಸೋಲಿಸಲಾಯಿತು. ಆದರೆ ಸುನ್ನಿ ಮುಸ್ಲಿಂ ಉಗ್ರಗಾಮಿ ಗುಂಪಿನ ಸ್ಲೀಪರ್ ಸೆಲ್‌ಗಳು ಇನ್ನೂ ಎರಡೂ ದೇಶಗಳಲ್ಲಿ ದಾಳಿಗಳನ್ನು ನಡೆಸುತ್ತವೆ. ಪ್ರಪಂಚದ ಬೇರೆಡೆ ದಾಳಿಗಳನ್ನು ನಡೆಸಿರುವುದಾಗಿ ಹೇಳಿಕೊಳ್ಳುತ್ತಿವೆ
ಐಸಿಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರೇಶಿ ಈ ವರ್ಷದ ಆರಂಭದಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಇದಕ್ಕಿಂತ ಹಿಂದಿನ ನಾಯಕ ಅಬು ಬಕರ್ ಅಲ್-ಬಾಗ್ದಾದಿಯನ್ನು ಅಕ್ಟೋಬರ್ 2019 ರಲ್ಲಿ ಇಡ್ಲಿಬ್‌ನಲ್ಲಿ ಕೊಲ್ಲಲಾಯಿತು.
Published On - 9:42 pm, Wed, 30 November 22