ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ, 22 ಮಂದಿ ಸಾವು

|

Updated on: Oct 26, 2023 | 7:33 AM

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೆವಿಸ್ಟೋನ್ ಪ್ರಾಂತ್ಯದ ಮೈನೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಆಂಡ್ರೊಸ್ಕೋಗ್ಗಿನ್ ಕೌಂಟಿ ಶೆರಿಫ್ ಕಚೇರಿ ತಮ್ಮ ಫೇಸ್​ಬುಕ್ ಪುಟದಲ್ಲಿ ಶಂಕಿತನ ಎರಡು ಫೋಟೊಗಳನ್ನು ಬಿಡುಗಡೆ ಮಾಡಿದೆ.

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ, 22 ಮಂದಿ ಸಾವು
ಗುಂಡಿನ ದಾಳಿ
Follow us on

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೆವಿಸ್ಟೋನ್ ಪ್ರಾಂತ್ಯದ ಮೈನೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಆಂಡ್ರೊಸ್ಕೋಗ್ಗಿನ್ ಕೌಂಟಿ ಶೆರಿಫ್ ಕಚೇರಿ ತಮ್ಮ ಫೇಸ್​ಬುಕ್ ಪುಟದಲ್ಲಿ ಶಂಕಿತನ ಎರಡು ಫೋಟೊಗಳನ್ನು ಬಿಡುಗಡೆ ಮಾಡಿದೆ.

ಬಂದೂಕುಧಾರಿಯು ತನ್ನ ಭುಜದ ಮೇಲೆ ಆಯುಧವನ್ನು ತೂಗುಹಾಕಿಕೊಂಡು ಪ್ರವೇಶಿಸುತ್ತಿರುವುದನ್ನು ಕಾಣಬಹುದು ಆತ ಈಗ ತಲೆಮರೆಸಿಕೊಂಡಿದ್ದಾನೆ.

ಮತ್ತಷ್ಟು ಓದಿ: ಕೆನಡಾ: ಸಾಮೂಹಿಕ ಗುಂಡಿನ ದಾಳಿ, ಮೂವರು ಮಕ್ಕಳು ಸೇರಿದಂತೆ ಐವರು ಸಾವು

ಪೊಲೀಸರು ದಾಳಿಕೋರನ ಫೋಟೊ ಬಿಡುಗಡೆ ಮಾಡಿದ್ದು, ಜನರ ಸಹಾಯ ಕೋರಿದ್ದಾರೆ. ಫೋಟೊದಲ್ಲಿ ಉದ್ದನೆಯ ತೋಳಿನ ಅಂಗಿ ಮತ್ತು ಜೀನ್ಸ್​ ಧರಿಸಿರುವ ಗಡ್ಡಧಾರಿಯೊಬ್ಬ ಫೈರಿಂಗ್ ರೈಫಲ್ ಹಿಡಿದು ಗುಂಡು ಹಾರಿಸುತ್ತಿದ್ದಾನೆ. ಲೆವಿಸ್ಟನ್​ನಲ್ಲಿರುವ ಸೆಂಟ್ರಲ್ ಮೈನೆ ಮೆಡಿಕಲ್ ಸೆಂಟರ್​ನಲ್ಲಿ ಈ ಸಾಮೂಹಿ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ