ಕೆನಡಾ: ಸಾಮೂಹಿಕ ಗುಂಡಿನ ದಾಳಿ, ಮೂವರು ಮಕ್ಕಳು ಸೇರಿದಂತೆ ಐವರು ಸಾವು
ಕೆನಡಾದ ಉತ್ತರ ಒಂಟಾರಿಯೊ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಶಂಕಿತ ಶೂಟರ್ ಸೇರಿದಂತೆ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ. ಕೆನಡಾದ ಪೊಲೀಸರ ಪ್ರಕಾರ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಉತ್ತರ ಒಂಟಾರಿಯೊ ನಗರದ ಎರಡು ಮನೆಗಳಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ಶವವಾಗಿ ಪತ್ತೆಯಾಗಿದ್ದಾರೆ.

ಸೋಮವಾರ ರಾತ್ರಿ 10.30ಕ್ಕೆ (ಸ್ಥಳೀಯ ಕಾಲಮಾನ) ಸಾಲ್ಟ್ ಸ್ಟೆಯಲ್ಲಿ ಈ ದುರಂತ ಘಟನೆ ನಡೆದಿದೆ ಎಂದು ಕೆನಡಾದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇರಿ, ಒಂಟಾರಿಯೊ, ಟೊರೊಂಟೊದಿಂದ ಉತ್ತರಕ್ಕೆ ಸುಮಾರು 700 ಕಿಮೀ ದೂರದಲ್ಲಿರುವ US ರಾಜ್ಯದ ಮಿಚಿಗನ್‌ನ ಗಡಿಯಲ್ಲಿರುವ ಮೂರು ಗ್ರೇಟ್ ಲೇಕ್‌ಗಳ ಸಂಧಿಯ ಸಮೀಪದಲ್ಲಿದೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿಯೂ ಕೂಡ ಸಾವನ್ನಪ್ಪಿದ್ದಾನೆ, ಆರು ವರ್ಷ ಹಾಗೂ ಹನ್ನೆರಡು ವರ್ಷದ ಮಕ್ಕಳ ಶವ ಕೂಡ ಪತ್ತೆಯಾಗಿದೆ, ಜತೆಗೆ ವ್ಯಕ್ತಿಯೊಬ್ಬ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ಎಲ್ಲರನ್ನೂ ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು
ಎರಡೂ ಮನೆಯಲ್ಲಿ ಶವಗಳು ಪತ್ತೆಯಾಗಿದ್ದು, ಈ ಸಾವಿಗೆ ಪರಸ್ಪರ ಸಂಬಂಧವಿದೆ ಎನ್ನಲಾಗಿದೆ. 2020 ಮತ್ತು 2021 ರ ನಡುವೆ ಗುಂಡಿನ ದಾಳಿ ಕಡಿಮೆಯಾಗಿವೆ ಎಂದು ಕೆನಡಾದ ಸರ್ಕಾರದ ಡೇಟಾ ಸೂಚಿಸುತ್ತದೆ. ಆದಾಗ್ಯೂ, ಒಂದು ದಶಕದ ಹಿಂದಿನಿಂದ ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಆದರೆ ಈ ಘಟನೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ