ಇಸ್ರೇಲ್​-ಹಮಾಸ್​ ಯುದ್ಧದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​​ ಮಾಡಿದ್ದಕ್ಕೆ ನಟಿಯ ಬಂಧನ

ಅಕ್ಟೋಬರ್​ 7ರಂದು ಇಸ್ರೇಲ್​ ಮೇಲೆ ಹಮಾಸ್​ ನಡೆಸಿದ ದಾಳಿಯ ಫೋಟೋವನ್ನು ಮೈಸಾ ಅದ್ಬೆಲ್​ ಹದಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಹಮಾಸ್​ ಉಗ್ರರು ಬುಲ್ಡೋಜರ್​ ಬಳಸಿ ಇಸ್ರೇಲ್​ ಗಡಿಯ ಬೇಲಿಯನ್ನು ಮುರಿದು ನುಗ್ಗುತ್ತಿರುವ ದೃಶ್ಯ ಇದರಲ್ಲಿ ಇದೆ. ಇದರ ಕ್ಯಾಪ್ಷನ್​ಗೂ ಆಕ್ಷೇಪ ವ್ಯಕ್ತವಾಗಿದೆ.

ಇಸ್ರೇಲ್​-ಹಮಾಸ್​ ಯುದ್ಧದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​​ ಮಾಡಿದ್ದಕ್ಕೆ ನಟಿಯ ಬಂಧನ
ಮೈಸಾ ಅದ್ಬೆಲ್​ ಹದಿ
Follow us
ಮದನ್​ ಕುಮಾರ್​
|

Updated on:Oct 25, 2023 | 2:49 PM

ಹಮಾಸ್​ ಉಗ್ರರು ಮತ್ತು ಇಸ್ರೇಲ್​ (Israel) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನರ ಸಾವು ಸಂಭವಿಸಿದೆ. ಈ ಯುದ್ಧಕ್ಕೆ (Israel-Hamas War) ಸಂಬಂಧಿಸಿದಂತೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವು ಸೆಲೆಬ್ರಿಟಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್​ ಮಾಡಿದ ಅನೇಕರನ್ನು ಬಂಧಿಸಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿವಾದಾತ್ಮಕ ಪೋಸ್ಟ್​ ಮಾಡಿದ್ದಕ್ಕಾಗಿ ಅರಬ್​-ಇಸ್ರೇಲಿ ನಟಿ ಮೈಸಾ ಅಬ್ದೆಲ್​ ಹದಿ (Maisa Abdel Hadi) ಅವರನ್ನು ಸೋಮವಾರ (ಅಕ್ಟೋಬರ್​ 23) ಬಂಧಿಸಲಾಗಿದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್​ 25ರ ತನಕ ಅವರನ್ನು ವಶದಲ್ಲಿ ಇರಿಸಿಕೊಳ್ಳಲಾಗುವುದು ಎಂಬ ಮಾಹಿತಿ ಸಿಕ್ಕಿದೆ.

ಇಸ್ರೇಲ್​ನ ನಝರತ್​ ನಗರದಲ್ಲಿ ಮೈಸಾ ಅದ್ಬೆಲ್​ ಹದಿ ವಾಸಿಸುತ್ತಿದ್ದಾರೆ. ಅಕ್ಟೋಬರ್​ 7ರಂದು ಇಸ್ರೇಲ್​ ಮೇಲೆ ಹಮಾಸ್​ ನಡೆಸಿದ ದಾಳಿಯ ಫೋಟೋವನ್ನು ಮೈಸಾ ಅದ್ಬೆಲ್​ ಹದಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಹಮಾಸ್​ ಉಗ್ರರು ಬುಲ್ಡೋಜರ್​ ಬಳಸಿ ಇಸ್ರೇಲ್​ ಗಡಿಯ ಬೇಲಿಯನ್ನು ಮುರಿದು ನುಗ್ಗುತ್ತಿರುವ ದೃಶ್ಯ ಇದರಲ್ಲಿ ಇದೆ. ‘ಬರ್ಲಿನ್​ ಶೈಲಿಯಲ್ಲಿ ಹೋಗೋಣ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದರು. ಇದು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹಮಾಸ್-ಇಸ್ರೇಲ್ ಸಂಘರ್ಷ: ಇಸ್ರೇಲ್​ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಬಹುದು ಎಂದ ಜೋ ಬೈಡನ್

1989ರ ನವೆಂಬರ್​ 9ರಂದು ಲಕ್ಷಾಂತರ ಜನರು ಬರ್ಲಿನ್​ ಗೋಡೆಯನ್ನು ನಾಶಪಡಿಸಿದ್ದರು. ಅದನ್ನೇ ಉಲ್ಲೇಖವಾಗಿ ಇಟ್ಟುಕೊಂಡು ಮೈಸಾ ಅದ್ಬೆಲ್​ ಹದಿ ಅವರು ಈ ಪೋಸ್ಟ್​ ಮಾಡಿದ್ದಾರೆ. ಬರ್ಲಿನ್​ ಗೋಡೆಯನ್ನು ನಾಶಪಡಿಸಿದ ರೀತಿಯಲೇ ಇಸ್ರೇಲ್​ನ ಗಡಿಯನ್ನು ನಾಶ ಮಾಡಬೇಕು ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಇದು ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತದೆ ಎಂಬ ಆರೋಪ ಎದುರಾಗಿರುವುದರಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಇಸ್ರೇಲ್​​​-ಹಮಾಸ್​ ಸಂಘರ್ಷ: ವರಸೆ ಬದಲಿಸಿದ ಚೀನಾ, ಇಸ್ರೇಲ್​​​ಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ

ಇಸ್ರೇಲ್​ ಹಮಾಸ್​ ಯುದ್ಧದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸತತ 17ದಿನಗಳಿಂದ ಯುದ್ಧ ನಡೆಯುತ್ತಿದೆ. 6400ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಬೇರೆ ಬೇರೆ ದೇಶಗಳಲ್ಲಿ ಇರುವ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಕೆಲವರು ಹಮಾಸ್​ ಕೃತ್ಯವನ್ನು ಖಂಡಿಸಿದ್ದಾರೆ. ಇನ್ನೂ ಕೆಲವರು ಇಸ್ರೇಲ್​ನ ಯುದ್ಧಾಪರಾಧದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:33 am, Wed, 25 October 23