ರಾವಣನ ದಹನ ಮಾಡಲು ವಿಫಲವಾದ ಕಂಗನಾ ರಣಾವತ್; ನಟಿಯ ಪರದಾಟ ನೋಡಿ  

ಕಳೆದ 50 ವರ್ಷಗಳಲ್ಲಿ ರಾವಣನ ದಹನವನ್ನು ಪುರುಷರೇ ಮಾಡುತ್ತಾ ಬರುತ್ತಿದ್ದರು. ಈ ವರ್ಷ ಕಂಗನಾ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರಿಂದ ಇದು ಸಾಧ್ಯವಾಗಿಲ್ಲ. ಅವರು ಮೂರು ಬಾರಿ ಪ್ರಯತ್ನಿಸಿದರೂ ಬಾಣ ಬಿಡಲು ಬರಲೇ ಇಲ್ಲ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಾವಣನ ದಹನ ಮಾಡಲು ವಿಫಲವಾದ ಕಂಗನಾ ರಣಾವತ್; ನಟಿಯ ಪರದಾಟ ನೋಡಿ   
ಕಂಗನಾ
Follow us
|

Updated on: Oct 25, 2023 | 11:00 AM

ನಟಿ ಕಂಗನಾ ರಣಾವತ್ (Kangana Ranaut) ಅವರು ಎಲ್ಲರ ಎದುರು ನಗೆಪಾಟಲಿಗೆ ಈಡಾಗಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಲವಕುಶ ರಾಮ್​ಲೀಲಾ ಸಮಾರಂಭದಲ್ಲಿ ಅವರು ರಾವಣನ ದಹನ ಮಾಡಲು ವಿಫಲರಾಗಿದ್ದಾರೆ. ಅವರಿಗೆ ಬಾಣ ಬಿಡಲು ಸಾಧ್ಯವೇ ಆಗಿಲ್ಲ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ನಟಿಯನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಅವರಿಗೆ ಈ ರೀತಿ ಆಗಬಾರದಿತ್ತು ಎಂದು ಅನೇಕರು ಹೇಳಿದ್ದಾರೆ.

ಕಳೆದ 50 ವರ್ಷಗಳಲ್ಲಿ ರಾವಣನ ದಹನವನ್ನು ಪುರುಷರೇ ಮಾಡುತ್ತಾ ಬರುತ್ತಿದ್ದರು. ಈ ವರ್ಷ ಕಂಗನಾ ಅವರಿಗೆ ಅವಕಾಶ ನೀಡಲಾಯಿತು. ಆದರೆ, ಅವರಿಂದ ಇದು ಸಾಧ್ಯವಾಗಿಲ್ಲ. ಅವರು ಮೂರು ಬಾರಿ ಪ್ರಯತ್ನಿಸಿದರೂ ಬಾಣ ಬಿಡಲು ಬರಲೇ ಇಲ್ಲ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಕಂಗನಾ ಅವರು ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕೂಡ ಇದ್ದರು. ಅವರು ಬಿಲ್ಲನ್ನು ಕೈಗೆ ಎತ್ತಿಕೊಂಡಿದ್ದಾರೆ. ಬಾಣ ಬಿಡಲು ನೋಡಿದರೂ ಅದು ಸಾಧ್ಯವಾಗಿಲ್ಲ. ಆಗ ಕಂಗನಾ ನಕ್ಕಿದ್ದಾರೆ. ಬೇರೆಯವರು ಬಾಣ ಬಿಟ್ಟಿದ್ದಾರೆ. ಆ ಬಳಿಕ ಅವರು ‘ಜೈ ಶ್ರೀ ರಾಮ್’ ಎಂದು ಕೂಗಿದ್ದಾರೆ.

‘ಬಾಲಿವುಡ್​ನಲ್ಲಿ ಸ್ಟಂಟ್ ಮಾಡಿದಷ್ಟು ಸುಲಭವಲ್ಲ. ಇವರೆಲ್ಲ ಚಿತ್ರರಂಗಕ್ಕೆ ಸೂಕ್ತ’ ಎಂದು ಕೆಲವರು ಹೇಳಿದ್ದಾರೆ. ‘ಸಿಕ್ಕ ಒಂದೊಳ್ಳೆಯ ಅವಕಾಶವನ್ನೂ ಕೈಚೆಲ್ಲಿಕೊಂಡಿರಲ್ಲ’ ಎಂದು ಕೆಲವರು ಬರೆದಿದ್ದಾರೆ. ‘ಕಂಗನಾಗೆ ಇಷ್ಟೊಂದು ಅವಮಾನ ಆಗಬಾರದಿತ್ತು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮೊದಲ ಬಾರಿ ಮಹಿಳೆಯಿಂದ ರಾವಣ ದಹನ; ಇತಿಹಾಸ ಬರೆಯಲಿರುವ ಕಂಗನಾ ರಣಾವತ್​ 

‘ಲವಕುಶ ರಾಮ್​ಲೀಲಾ’ದಲ್ಲಿ ಕಳೆದ ವರ್ಷ ಪ್ರಭಾಸ್​ ಅವರು ರಾವಣನ ದಹನ ಮಾಡಿದ್ದರು. ‘ಆದಿಪುರುಷ್’ ರಿಲೀಸ್ ಸಂದರ್ಭದಲ್ಲಿ ಪ್ರಭಾಸ್​ಗೆ ಈ ಅವಕಾಶ ಸಿಕ್ಕಿತ್ತು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ಅಜಯ್​ ದೇವಗನ್​, ಜಾನ್​ ಅಬ್ರಾಹಂ ಮೊದಲಾದವರು ರಾವಣನ ದಹನ ಮಾಡಿದ್ದರು. ಕಂಗನಾ ರಣಾವತ್ ನಟನೆಯ ‘ತೇಜಸ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರ ಅಕ್ಟೋಬರ್ 27ರಂದು ಬಿಡುಗಡೆ ಆಗುತ್ತಿದೆ. ಅವರ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ಸಿನಿಮಾದ ಬಿಡುಗಡೆ ದಿನಾಂಕ 2023ಕ್ಕೆ ಮುಂದೂಡಲ್ಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ