ದಕ್ಷಿಣ ಭಾರತ ಚಿತ್ರರಂಗವನ್ನು ಮತ್ತೆ ಕೊಂಡಾಡಿದ ರವೀನಾ ಟಂಡನ್
Raveena Tandon: ಬಾಲಿವುಡ್ ನಟಿ ರವೀನಾ ಟಂಡನ್ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಬಹಳ ಜನಪ್ರಿಯರು. ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ಗೂ ಇರುವ ವ್ಯತ್ಯಾಸದ ಬಗ್ಗೆ ಅವರು ಮಾತನಾಡಿದ್ದಾರೆ.
ಬಾಲಿವುಡ್ (Bollywood) ನಟಿ ರವೀನಾ ಟಂಡನ್ (Raveena Tandon), ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಚಿರ ಪರಿಚಿತರು. ಹಿಂದಿ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಈ ನಟಿ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗಿನ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 2’ ನಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ರವೀನಾ, ಬಾಲಿವುಡ್ಗಿಂತಲೂ ದಕ್ಷಿಣ ಭಾರತ ಚಿತ್ರರಂಗ ಹಲವು ವಿಧಗಳಲ್ಲಿ ಬೆಸ್ಟ್ ಎಂದು ಹೇಳುತ್ತಲೇ ಬಂದಿದ್ದಾರೆ. ಈಗ ಮತ್ತೊಮ್ಮೆ ದಕ್ಷಿಣ ಭಾರತ ಚಿತ್ರರಂಗವನ್ನು ಕೊಂಡಾಡಿದ್ದಾರೆ.
ರಾಜಶ್ರೀ ಅನ್ಪ್ಲಗ್ಡ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ರವೀನಾ ಟಂಡನ್, ”ದಕ್ಷಿಣ ಭಾರತ ಚಿತ್ರರಂಗ ಮೊದಲಿನಿಂದಲೂ ತನ್ನ ಮೂಲ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ. ಅದು ತನ್ನ ಬೇರುಗಳನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಆದರೆ ಬಾಲಿವುಡ್ನಲ್ಲಿ ನಾವು ಸದಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನೇ ನಕಲು ಮಾಡುತ್ತಾ ಬಂದಿದ್ದೀವಿ. ಅವರು ರಾಯಲ್ ಅಥವಾ ಎಲೈಟ್ ಮಾದರಿಯ ಸಿನಿಮಾಗಳನ್ನು ಮಾಡುವುದಿಲ್ಲ. ಆದರೆ ಮುಂಬೈನಲ್ಲಿ ನಾವು ಮೊದಲಿನಿಂದಲೂ ಎಲೈಟ್ ಮಾದರಿಯ ಸಿನಿಮಾಗಳನ್ನು ಮಾಡುತ್ತಲೇ ಬಂದಿದ್ದೇವೆ. ಅದು ನಮಗೆ ವರ್ಕ್ ಆಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡ್ತಾರೆ ರವೀನಾ ಟಂಡನ್ ಮಗಳು?
ನಾನು ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೆಲಸ ಮಾಡಿದಾಗಲೆಲ್ಲ ಬಹಳ ಎಂಜಾಯ್ ಮಾಡಿದ್ದೇನೆ. ಅಲ್ಲಿ ಕೆಲಸ ಮಾಡಿ ಮುಂಬೈಗೆ ಬಂದಾಗ, ನೀವು ದಪ್ಪ ಆಗಿಬಿಟ್ಟಿದ್ದೀರ, ಸಣ್ಣ ಆಗಿ ಎನ್ನುತ್ತಿದ್ದರು. ಅದೇ ದಕ್ಷಿಣ ಭಾರತ ಚಿತ್ರರಂಗಕ್ಕೆ ಹೋದಾಗ ಏಕೆ ಇಷ್ಟು ಸಣ್ಣ ಆಗಿದ್ದೀರಿ, ಚೆನ್ನಾಗಿ ತಿನ್ನಿ ಎನ್ನುತ್ತಿದ್ದರು. ಹಾಗಾಗಿ ದಕ್ಷಿಣದ ಸಿನಿಮಾದಲ್ಲಿ ನಟಿಸುವಾಗ ನಾನು ಡಯಟ್ ಬಿಟ್ಟುಬಿಡುತ್ತಿದ್ದೆ. ಚೆನ್ನಾಗಿ ಇಡ್ಲಿ, ಚಟ್ನಿ, ದೋಸೆಗಳನ್ನು ತಿನ್ನುತ್ತಿದ್ದೆ ಎಂದಿದ್ದಾರೆ.
‘ಕೆಜಿಎಫ್’ ಬಗ್ಗೆಯೂ ಮಾತನಾಡಿರುವ ರವೀನಾ, ‘ಕೆಜಿಎಫ್’ ಮೊದಲ ಭಾಗ ಚಿತ್ರೀಕರಣ ಆಗುವಾಗ ಆ ಸಿನಿಮಾದಲ್ಲಿ ನಾನು ನಟಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೆ. ಹಾಗಾಗಿ ಡ್ಯೂಪ್ ಬಳಸಿ ಶೂಟ್ ಮಾಡಿ ಅದನ್ನೇ ಮೊದಲ ಭಾಗದ ಕೆಲವು ದೃಶ್ಯಗಳಲ್ಲಿ ಬಳಸುವಂತೆ ಹೇಳಿದ್ದೆ. ಮೊದಲ ಭಾಗ ಸೂಪರ್ ಹಿಟ್ ಆಯಿತು ಅದಾದ ಬಳಿಕ ನಾನು ಎರಡನೇ ಭಾಗದಲ್ಲಿ ನಟಿಸಿದೆ” ಎಂದಿದ್ದಾರೆ ರವೀನಾ. ರವೀನಾ ಟಂಡನ್, ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿದರು. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ರವೀನಾ ಟಂಡನ್ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ