AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೆಲೆಬ್ರಿಟಿಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ಕೆಲವರಿಗೆ ಸೆಟ್​ನಲ್ಲೇ ಲವ್ ಆದರೆ, ಇನ್ನೂ ಕೆಲವರಿಗೆ ಪಾರ್ಟಿಯಲ್ಲಿ ಪರಿಚಯ ಆಗಿ, ಈ ಪರಿಚಯ ಫ್ರೆಂಡ್​​ಶಿಪ್​ಗೆ ತಿರುಗಿ, ಅದು ಪ್ರೀತಿ ಆಗಿ ಬದಲಾಗಿ ಆ ಬಳಿಕ ಮದುವೆ ಆದವರು ಅನೇಕರಿದ್ದಾರೆ. ಸೈಫ್​ ಅಲಿ ಖಾನ್ ಅವರಿಂದ ರಣವೀರ್ ಸಿಂಗ್ ತನಕ ಹಲವರು ಪ್ರಪೋಸ್​ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.  

ಈ ಸೆಲೆಬ್ರಿಟಿಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?
ಈ ಸೆಲೆಬ್ರಿಟಿಗಳು ಪ್ರೇಮ ನಿವೇದನೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 24, 2023 | 8:12 AM

Share

ಸೆಲೆಬ್ರಿಟಿಗಳ ಲವ್​ ಸ್ಟೋರಿ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಅವರ ಲವ್​ ಸ್ಟೋರಿ ಹೇಗೆ ಆರಂಭ ಆಯ್ತು, ಪ್ರಪೋಸ್ ಮಾಡಿದ್ದು ಯಾರು ಎಂಬ ಬಗ್ಗೆ ಪ್ರಶ್ನೆ ಎದ್ದಿರುತ್ತದೆ. ಕೆಲವರಿಗೆ ಸೆಟ್​ನಲ್ಲೇ ಲವ್ ಆದರೆ, ಇನ್ನೂ ಕೆಲವರಿಗೆ ಪಾರ್ಟಿಯಲ್ಲಿ ಪರಿಚಯ ಆಗಿ, ಈ ಪರಿಚಯ ಫ್ರೆಂಡ್​​ಶಿಪ್​ಗೆ ತಿರುಗಿ, ಅದು ಪ್ರೀತಿ ಆಗಿ ಬದಲಾಗಿ ಆ ಬಳಿಕ ಮದುವೆ ಆದವರು ಅನೇಕರಿದ್ದಾರೆ. ಸೈಫ್​ ಅಲಿ ಖಾನ್-ಕರೀನಾ ಕಪೂರ್ (Kareena Kapoor) ಅವರಿಂದ ಹಿಡಿದು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತನಕ ಹಲವರು ಪ್ರಪೋಸ್​ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಭಾಗಿ ಆಗುತ್ತಿದ್ದಾರೆ. ಇವರು ಸೀಸನ್ 8ರ ಮೊದಲ ಅತಿಥಿ ಆಗಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. 2015ರಲ್ಲಿ ರಣವೀರ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ಇದನ್ನು ದೀಪಿಕಾ ಒಪ್ಪಿದ್ದರು. ಆ ಬಳಿಕ ಇಬ್ಬರೂ ಮದುವೆ ಆದರು.

ಶಾರುಖ್ ಖಾನ್ ಹಾಗೂ ಗೌರಿ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಬ್ಬರೂ ಕಾಲೇಜು ಸಂದರ್ಭದಲ್ಲೇ ಓಡಾಟ ನಡೆಸಿದ್ದರು. ಅವರು ಗೌರಿಯ ಹಿಂದೆ ಬಿದ್ದರು. ಜುಹು ಬೀಚ್​ನಲ್ಲಿ ಗೌರಿಗೆ ಪ್ರಪೋಸ್ ಮಾಡಿದ್ದರು ಶಾರುಖ್. ಶಾರುಖ್ ಖಾನ್ ಜೀರೋದಿಂದ ಹೀರೋ ಆಗುವವರೆಗೂ ಅವರು ಶಾರುಖ್ ಜೊತೆ ಗೌರಿ ಇದ್ದಾರೆ.

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್​ ಮದುವೆ ಆಗಿದ್ದಾರೆ. ಬಾಲಿವುಡ್​ನ ಕ್ಯೂಟ್ ಕಪಲ್ ಸಾಲಿನಲ್ಲಿ ಇವರೂ ಇದ್ದಾರೆ. ರಣಬೀರ್ ಕಪೂರ್ ಮೇಲೆ ಆಲಿಯಾಗೆ ಮೊದಲೇ ಕ್ರಶ್ ಇತ್ತು. ‘ಬ್ರಹ್ಮಾಸ್ತ್ರ’ ಸಿನಿಮಾದ ಸೆಟ್​ನಲ್ಲಿ ಇಬ್ಬರ ಮಧ್ಯೆ ಲವ್ ಆಯಿತು ಎನ್ನಲಾಗಿದೆ. ಕೀನ್ಯಾದ ಮಸಾಯಿ ಮಾರಾದಲ್ಲಿ ರಣಬೀರ್ ಅವರು ಆಲಿಯಾಗೆ ಪ್ರಪೋಸ್ ಮಾಡಿದ್ದರು.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಐಶ್ವರ್ಯಾ ರೈ ಅವರನ್ನು ನ್ಯೂಯಾರ್ಕ್​ ಹೋಟೆಲ್ ಒಂದರಲ್ಲಿ ಮದುವೆ ಆಗಲು ಕನಸು ಕಂಡಿದ್ದರು ಅಭಿಷೇಕ್. ಇದೇ ಹೋಟೆಲ್​ನಲ್ಲಿ ಐಶ್ವರ್ಯಾಗೆ ಮದುವೆ ಆಗುವ ಪ್ರಪೋಸಲ್ ಇಟ್ಟಿದ್ದರು.

 ಸೋನಂ ಕಪೂರ್ ಹಾಗೂ ಆನಂದ್ ಅಹೂಹಾ

ಆನಂದ್ ಅಹೂಜಾ ಅವರು ಫ್ರೆಂಡ್ ಒಬ್ಬರಿಗೆ ಸೋನಂ ಕಪೂರ್​ನ ಪರಿಚಯಿಸಲು ಪ್ರಯತ್ನಿಸಿದ್ದರು. ಆದರೆ ಅಲ್ಲಾಗಿದ್ದೇ ಬೆರೆ. ಆನಂದ್ ಅಹೂಜಾ ಜೊತೆ ಸೋನಂ ಫ್ರೆಂಡ್​ಶಿಪ್ ಬೆಳೆಸಿಕೊಂಡರು. ನಂತರ ಇಬ್ಬರ ಮಧ್ಯೆ ಪ್ರೀತಿ ಮೂಡಿತು. 2017ರ ಅಕ್ಟೋಬರ್​ನಲ್ಲಿ ಲಂಡನ್​ನ ಆಕ್ಸ್​ಫರ್ಡ್​ ಯೂನಿವರ್ಸಿಟಿಯ ಲೈಬ್ರರಿಯಲ್ಲಿ ಸೋನಂಗೆ ಆನಂದ್ ಮದುವೆ ಪ್ರಪೋಸಲ್ ಇಟ್ಟರು ಎನ್ನಲಾಗಿದೆ. ನಂತರ ನ್ಯೂಯಾರ್ಕ್​ ಸಿಟಿಗೆ ಟ್ರಿಪ್ ಹೋದರು. ಮಧ್ಯ ರಸ್ತೆಯಲ್ಲಿ ಮಂಡಿ ಊರಿ ಆನಂದ್ ಪ್ರಪೋಸ್ ಮಾಡಿದರು.

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಒಟ್ಟಾಗಿ ನಟಿಸಿದ್ದಾರೆ. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಪ್ಯಾರಿಸ್​ಗೆ ಕ್ಯಾಶ್ಯುವಲ್ ಟ್ರಿಪ್ ತೆರಳಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕಮಿಟ್ ಆಗಲು ಇಷ್ಟ ಇರಲಿಲ್ಲ. ಸೈಫ್ ಪ್ರಪೋಸ್ ಮಾಡಿದಾಗ ಅವರಿಗೆ ನೋ ಎನ್ನೋಕೆ ಸಾಧ್ಯವೇ ಆಗಲಿಲ್ಲ.

ಟ್ವಿಂಕಲ್ ಖನ್ನಾ-ಅಕ್ಷಯ್ ಕುಮಾರ್

ಟ್ವಿಂಕಲ್ ಖನ್ನಾ ಹಾಗೂ ಅಕ್ಷಯ್ ಕುಮಾರ್ ‘ಇಂಟರ್​ನ್ಯಾನಲ್ ಖಿಲಾಡಿ’ ಶೂಟ್​ಗಾಗಿ ವಿಮಾನದಲ್ಲಿ ಪ್ರಯಾಣಿಸಿದ್ದರು. ಅಕ್ಷಯ್ ಕುಮಾರ್ ಅವರು ಈ ವೇಳೆ ಟ್ವಿಂಕಲ್​ಗೆ ಪ್ರಪೋಸ್ ಮಾಡಿದ್ದರು. ಇಬ್ಬರೂ ನಂತರ ಮದುವೆ ಆದರು.

ಇದನ್ನೂ ಓದಿ: ‘ಹಣ ದೋಚಿದ್ದೂ ಗೊತ್ತಾಗಲಿಲ್ಲ’; ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್

ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಮಧ್ಯೆ ಹಲವು ವರ್ಷಗಳ ವಯಸ್ಸಿನ ಅಂತರ ಇದೆ. ಪ್ರಿಯಾಂಕಾ ಚೋಪ್ರಾ ವಯಸ್ಸಿನಲ್ಲಿ ಹಿರಿಯವರು. ಇಬ್ಬರೂ ಬೇರೆ ಆಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಸುಖವಾಗಿ ಇಬ್ಬರೂ ಸಂಸಾರ ನಡೆಸುತ್ತಿದ್ದಾರೆ. ನಿಕ್ ಜೋನಸ್ ಅವರು ಮಂಡಿ ಊರಿ ಪ್ರಿಯಾಂಕಾಗೆ ಪ್ರಪೋಸ್ ಮಾಡಿದ್ದರು. ಪ್ರಿಯಾಂಕಾ ಚೋಪ್ರಾ 45 ಸೆಕೆಂಡ್ ಸೈಲೆಂಟ್ ಆಗಿದ್ದರು. ನಂತರ ರಿಂಗ್ ತೊಡಿಸಲೇ ಎಂದು ನಿಕ್ ಕೇಳಿದ್ದರು. ಇದಕ್ಕೆ ಪ್ರಿಯಾಂಕಾ ಸಮ್ಮತಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್