AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಜನಪ್ರಿಯ ನಟರ ಪಟ್ಟಿಯಲ್ಲಿ ಶಾರುಖ್​ ಖಾನ್​ಗೆ ನಂ.1 ಸ್ಥಾನ; ಇನ್ನುಳಿದ ನಟರ ಕಥೆ ಏನು?

ಜನಪ್ರಿಯ ಟಾಪ್​ 10 ನಟರ ಪಟ್ಟಿಯಲ್ಲಿ ಶಾರುಖ್​ ಖಾನ್​ ಅವರು ನಂಬರ್​ 1 ಸ್ಥಾನದಲ್ಲಿ ಇದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟರೇ ಬಹುಪಾಲು ಸ್ಥಾನ ಪಡೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗದ ನಟರ ಪೈಕಿ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಅವರ ಹೆಸರು ಮಾತ್ರ ಇದೆ. ಸ್ಥಾನಗಳಲ್ಲಿ ಯಾರು

Shah Rukh Khan: ಜನಪ್ರಿಯ ನಟರ ಪಟ್ಟಿಯಲ್ಲಿ ಶಾರುಖ್​ ಖಾನ್​ಗೆ ನಂ.1 ಸ್ಥಾನ; ಇನ್ನುಳಿದ ನಟರ ಕಥೆ ಏನು?
ಶಾರುಖ್​ ಖಾನ್
ಮದನ್​ ಕುಮಾರ್​
|

Updated on: Oct 23, 2023 | 3:01 PM

Share

ಬಾಲಿವುಡ್​ನ ‘ಬಾಕ್ಸ್​ ಆಫೀಸ್​ ಸುಲ್ತಾನ’ ಶಾರುಖ್​ ಖಾನ್ (Shah Rukh Khan)​ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. 2023ರ ವರ್ಷ ಅವರ ಪಾಲಿಗೆ ನಿಜಕ್ಕೂ ಸ್ಪೆಷಲ್​. ಈ ವರ್ಷ ಅವರು ನಟಿಸಿದ ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳು ಬ್ಲಾಕ್​ ಬಸ್ಟರ್​ ಆಗಿವೆ. ಅದರಿಂದಾಗಿ ಅವರ ಜನಪ್ರಿಯತೆ ಹೆಚ್ಚಿದೆ. ಭಾರತದ ಜನಪ್ರಿಯ ನಟರ ಪಟ್ಟಿಯಲ್ಲಿ (Most Popular Indian Actors List) ಶಾರುಖ್​ ಖಾನ್​ ಅವರಿಗೆ ನಂಬರ್​ 1 ಸ್ಥಾನ ಸಿಕ್ಕಿದೆ. ಇದು ಅವರ ಅಭಿಮಾನಿಗಳ ಹೆಮ್ಮೆಗೆ ಕಾರಣ ಆಗಿದೆ. ಒರಮ್ಯಾಕ್ಸ್​ ಮೀಡಿಯಾ (Ormax Media) ಸಮೀಕ್ಷೆ ನಡೆಸಿದೆ. ಸೆಪ್ಟೆಂಬರ್​ 2023ರ ಪಟ್ಟಿಯನ್ನು ಈ ಸಂಸ್ಥೆ ಬಿಡುಗಡೆ ಮಾಡಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ಜನಪ್ರಿಯ ಟಾಪ್​ 10 ನಟರ ಪಟ್ಟಿಯಲ್ಲಿ ಶಾರುಖ್​ ಖಾನ್​ ಅವರು ನಂಬರ್​ 1 ಸ್ಥಾನದಲ್ಲಿ ಇದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ನಟರೇ ಬಹುಪಾಲು ಸ್ಥಾನ ಪಡೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗದ ನಟರ ಪೈಕಿ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಅವರ ಹೆಸರು ಮಾತ್ರ ಇದೆ. ದಕ್ಷಿಣ ಭಾರತದ ಹೀರೋಗಳಾದ ಪ್ರಭಾಸ್​, ಅಲ್ಲು ಅರ್ಜುನ್​, ಜೂನಿಯರ್ ಎನ್​ಟಿಆರ್​, ಮಹೇಶ್​ ಬಾಬು, ಸೂರ್ಯ, ಅಜಿತ್​ ಕುಮಾರ್​ ಮತ್ತು ವಿಜಯ್​ ಅವರು ಈ ಪಟ್ಟಿಯಲ್ಲಿ ಇದ್ದಾರೆ.

ಟಾಪ್​ 10 ಜನಪ್ರಿಯ ನಟರ ಪಟ್ಟಿ:

  1. ಶಾರುಖ್​ ಖಾನ್​
  2. ದಳಪತಿ ವಿಜಯ್​
  3. ಪ್ರಭಾಸ್​
  4. ಅಕ್ಷಯ್​ ಕುಮಾರ್​
  5. ಸಲ್ಮಾನ್​ ಖಾನ್​
  6. ಅಜಿತ್​ ಕುಮಾರ್​
  7. ಜೂನಿಯರ್​ ಎನ್​ಟಿಆರ್​
  8. ಅಲ್ಲು ಅರ್ಜುನ್​
  9. ಸೂರ್ಯ
  10. ಮಹೇಶ್​ ಬಾಬು

ಇದನ್ನೂ ಓದಿ: ಶಾರುಖ್​ ನಟನೆಯ 25 ವರ್ಷದ ಹಳೇ ಸಿನಿಮಾ ಮರು ಬಿಡುಗಡೆ; 25 ರೂ. ಟಿಕೆಟ್​: ಕೆಲವೇ ನಿಮಿಷಗಳಲ್ಲಿ ಸೋಲ್ಡ್​ ಔಟ್​

ಇತ್ತೀಚಿನ ವರ್ಷಗಳಲ್ಲಿ ಶಾರುಖ್​ ಖಾನ್​ ಅವರು ಸತತ ಸೋಲು ಕಂಡಿದ್ದರು. ಆದರೆ 2023ರಲ್ಲಿ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಈಗ ಅವರು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳ ದೊಡ್ಡ ಸಕ್ಸಸ್​ ನಂತರ ‘ಡಂಕಿ’ ಬರುತ್ತಿರುವುದರಿಂದ ಈ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇದೆ. ಈ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಶಾರುಖ್​ ಖಾನ್​ ಅವರು 1000 ಕೋಟಿ ರೂಪಾಯಿ ಮೈಲಿಗಲ್ಲು ಸಾಧಿಸಿದ್ದಾರೆ. ಅವರ ಮುಂಬರುವ ಸಿನಿಮಾಗಳು ಕೂಡ ಅದೇ ರೀತಿ ಕಲೆಕ್ಷನ್​ ಮಾಡಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ