ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ ಎಂದ ಟರ್ಕಿ ಅಧ್ಯಕ್ಷ; ಇಸ್ರೇಲ್ ಆಕ್ರೋಶ
ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ, ಅದು ವಿಮೋಚನಾ ಗುಂಪು, ತನ್ನ ಭೂಮಿ ಮತ್ತು ಜನರನ್ನು ರಕ್ಷಿಸಲು 'ಮುಜಾಹಿದ್ದೀನ್' ಯುದ್ಧವನ್ನು ನಡೆಸುತ್ತಿದೆ"ಯಹಮಾಸ್ ವಿರುದ್ಧ ಇಸ್ರೇಲ್ ಪ್ರತೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಪಾಶ್ಚಿಮಾತ್ಯ ಶಕ್ತಿಗಳನ್ನು ತರಾಟೆಗೆ ತೆಗೆದುಕೊಂಡ ಟರ್ಕಿ ಅಧ್ಯಕ್ಷರು, "ಪಶ್ಚಿಮ ಇಸ್ರೇಲ್‌ಗಾಗಿ ಸುರಿಸುವ ಕಣ್ಣೀರು ವಂಚನೆಯದ್ದು ಎಂದಿದ್ದಾರೆ.
ಟೆಲ್ ಅವಿವ್ ಅಕ್ಚೋಬರ್ 25: ಇಸ್ರೇಲ್-ಗಾಜಾ ಸಂಘರ್ಷದ (Israel-Gaza conflict) ಕುರಿತು ಮಾತನಾಡಿದ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ (Tayyip Erdogan), ಹಮಾಸ್ (Hamas) ಭಯೋತ್ಪಾದಕ ಸಂಘಟನೆಯಲ್ಲ, ಆದರೆ ಪ್ಯಾಲೆಸ್ತೀನ್ ಭೂಮಿ ಮತ್ತು ಜನರನ್ನು ರಕ್ಷಿಸಲು ಹೋರಾಡುತ್ತಿರುವ ವಿಮೋಚನಾ ಗುಂಪು ಎಂದು ಹೇಳಿದ್ದಾರೆ. ತನ್ನ ಆಡಳಿತಾರೂಢ ಎಕೆ ಪಾರ್ಟಿ ಶಾಸಕರೊಂದಿಗೆ ಮಾತನಾಡಿದ ತಯ್ಯಿಪ್ ಎರ್ಡೊಗನ್, ಇಸ್ರೇಲಿ ಮತ್ತು ಪ್ಯಾಲೆಸ್ತೀನ್ ಪಡೆಗಳ ನಡುವೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲು ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ, ಅದು ವಿಮೋಚನಾ ಗುಂಪು, ತನ್ನ ಭೂಮಿ ಮತ್ತು ಜನರನ್ನು ರಕ್ಷಿಸಲು ‘ಮುಜಾಹಿದ್ದೀನ್’ ಯುದ್ಧವನ್ನು ನಡೆಸುತ್ತಿದೆ”ಯಹಮಾಸ್ ವಿರುದ್ಧ ಇಸ್ರೇಲ್ ಪ್ರತೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಪಾಶ್ಚಿಮಾತ್ಯ ಶಕ್ತಿಗಳನ್ನು ತರಾಟೆಗೆ ತೆಗೆದುಕೊಂಡ ಟರ್ಕಿ ಅಧ್ಯಕ್ಷರು, “ಪಶ್ಚಿಮ ಇಸ್ರೇಲ್‌ಗಾಗಿ ಸುರಿಸುವ ಕಣ್ಣೀರು ವಂಚನೆಯದ್ದು ಎಂದಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಟಲಿಯ ಉಪ ಪ್ರಧಾನ ಮಂತ್ರಿ ಮ್ಯಾಟಿಯೊ ಸಾಲ್ವಿನಿ, ಇವರು ಯುದ್ಧ ತೀವ್ರತೆ ತಗ್ಗಿಸವು ಸಹಾಯ ಮಾಡಲಿಲ್ಲ ಎಂದಿದ್ದಾರೆ. ನಾನು ನನ್ನ ಸಹೋದ್ಯೋಗಿ (ವಿದೇಶಿ ಸಚಿವ ಆಂಟೋನಿಯೊ) ತಜಾನಿಗೆ ಔಪಚಾರಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಟರ್ಕಿಶ್ ರಾಯಭಾರಿಯನ್ನು ಕರೆಸುವಂತೆ ಪ್ರಸ್ತಾಪಿಸುತ್ತೇನೆ” ಎಂದು ಮ್ಯಾಟಿಯೊ ಸಾಲ್ವಿನಿ ಹೇಳಿದರು.
ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಕತಾರ್‌ನಲ್ಲಿ ಮಾತನಾಡುತ್ತಾ ಗಾಜಾದಲ್ಲಿನ ತನ್ನ ಯುದ್ಧದಲ್ಲಿ ಇಸ್ರೇಲ್ “ಮಾನವೀಯತೆಯ ವಿರುದ್ಧ ಅಪರಾಧ” ಮಾಡಿದೆ ಎಂದು ಹೇಳಿದರು.
“ಶಾಲೆಗಳು, ಆಸ್ಪತ್ರೆಗಳು ಮತ್ತು ಮಸೀದಿಗಳಲ್ಲಿ ಮಕ್ಕಳು, ರೋಗಿಗಳು ಮತ್ತು ವೃದ್ಧರು ಸೇರಿದಂತೆ ನಮ್ಮ ಪ್ಯಾಲೆಸ್ತೀನ್ ಸಹೋದರರನ್ನು ಗುರಿಯಾಗಿಸುವುದು ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಅವರು ಹೇಳಿದರು.
ಇದನ್ನೂ ಓದಿ: ಹಮಾಸ್‌ನ ಭೂಗತ ಸುರಂಗಗಳನ್ನು ನಾಶ ಮಾಡಲು ಇಸ್ರೇಲ್ ಯೋಜನೆ: ಅಮೆರಿಕದ ಪತ್ರಕರ್ತ
ತಯ್ಯಿಪ್ ಎರ್ಡೋಗನ್ ಹೇಳಿಕೆ ಖಂಡಿಸಿದ ಟೆಲ್ ಅವಿವ್, ಭಯೋತ್ಪಾದಕ ಸಂಘಟನೆ ಹಮಾಸ್ ಬಗ್ಗೆ ಟರ್ಕಿಯ ಅಧ್ಯಕ್ಷರ ಕಟುವಾದ ಮಾತುಗಳನ್ನು ನಾವು ತಿರಸ್ಕರಿಸುತ್ತೇವೆ. ಭಯೋತ್ಪಾದಕ ಸಂಘಟನೆಯನ್ನು ರಕ್ಷಿಸಲು ಟರ್ಕಿಯ ಅಧ್ಯಕ್ಷರ ಪ್ರಯತ್ನ ಮತ್ತು ಅವರ ಪ್ರಚೋದಿಸುವ ಮಾತುಗಳು ಸಹ ಇಡೀ ಜಗತ್ತು ಕಂಡ ಭಯಾನಕತೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಹಮಾಸ್‌ನ ಅಕ್ಟೋಬರ್ 7 ರ ದಾಳಿಯಿಂದ ಉಂಟಾದ ನಾಗರಿಕರ ಸಾವುಗಳನ್ನು ಟರ್ಕಿ ಖಂಡಿಸಿದ್ದು, ಇಸ್ರೇಲ್ ಸಂಯಮದ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಒತ್ತಾಯಿಸಿತು. ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಮತ್ತು ಮಾನವೀಯ ನೆರವು ಕಳುಹಿಸಲು ಮುಂದಾದಾಗ ಗಾಜಾದ ಮೇಲೆ ಇಸ್ರೇಲ್‌ನ ಭಾರೀ ಬಾಂಬ್ ದಾಳಿಯನ್ನು ಅಂಕಾರಾ ಬಲವಾಗಿ ಖಂಡಿಸಿದೆ.
ಇಸ್ರೇಲ್ ಟರ್ಕಿಯ ಸದುದ್ದೇಶದ ಲಾಭವನ್ನು ಪಡೆದುಕೊಂಡಿದೆ ಎಂದು ಆರೋಪಿಸಿದ ಎರ್ಡೊಗನ್, ತಾನು ಈಗ ಇಸ್ರೇಲ್ ಪ್ರವಾಸವನ್ನು ರದ್ದುಗೊಳಿಸಿದ್ದೇನೆ ಎಂದು ಹೇಳಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ