ಬಾಂಗ್ಲಾದೇಶದ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ; ದೇವರ ವಿಗ್ರಹಕ್ಕೆ ಬೆಂಕಿ

|

Updated on: Dec 07, 2024 | 9:51 PM

ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಾಗಿದೆ. ಈ ಕುರಿತು ಈಗಾಗಲೇ ದೂರು ದಾಖಲಿಸಲಾಗಿದೆ. ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲ್ವಿಚಾರಕರು ಈ ಬಗ್ಗೆ ಮಾತನಾಡಿ, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಹಿಂದೂ ದೇವಸ್ಥಾನವನ್ನು ಸುಟ್ಟು ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಬಾಂಗ್ಲಾದೇಶದ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ; ದೇವರ ವಿಗ್ರಹಕ್ಕೆ ಬೆಂಕಿ
ಬಾಂಗ್ಲಾದೇಶದ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ
Follow us on

ಢಾಕಾ: ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದೆ. ಇದರ ನಡುವೆ, ಢಾಕಾದ ಹೊರವಲಯದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಢಾಕಾದ ಧೋರ್ ಗ್ರಾಮದಲ್ಲಿರುವ ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆದಿದೆ.

ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅವರ ಪೂರ್ವಜರ ದೇವಸ್ಥಾನವನ್ನು ಸುಟ್ಟು ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ದೇವಸ್ಥಾನದ ಮೇಲ್ವಿಚಾರಕ ಬಾಬುಲ್ ಘೋಷ್ ತಿಳಿಸಿದ್ದಾರೆ. ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಬಾಬುಲ್ ಘೋಷ್, ವಿಗ್ರಹಗಳ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚುವಾಗ ದೇವಸ್ಥಾನದ ಸಿಬ್ಬಂದಿ ಬಂದ ಹೆಜ್ಜೆ ಸಪ್ಪಳ ಕೇಳಿ ಓಡಿಹೋಗಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಢಾಕಾದಲ್ಲಿ ಇಸ್ಕಾನ್ ದೇವಾಲಯಕ್ಕೆ ಬೆಂಕಿ, ವಿಗ್ರಹಗಳ ನಾಶ

ಲಕ್ಷ್ಮೀನಾರಾಯಣ ದೇವಸ್ಥಾನ ನಮ್ಮ ಪೂರ್ವಜರ ದೇವಸ್ಥಾನ. ನಿನ್ನೆ ರಾತ್ರಿ ದಾಳಿಕೋರರು ಹಿಂಬದಿಯಿಂದ ಮನೆಯೊಳಗೆ ನುಗ್ಗಿ ವಿಗ್ರಹಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸೀರೆ ಮತ್ತು ಧೋತಿಯನ್ನು ಧರಿಸಿದ್ದ ಲಕ್ಷ್ಮಿ ಮತ್ತು ನಾರಾಯಣನ ವಿಗ್ರಹಗಳು, ಅವುಗಳ ಹಿಂದಿದ್ದ ಪರದೆ ಎಲ್ಲಾ ಸುಟ್ಟುಹೋಗಿದೆ. ನಾವು ಸ್ವಲ್ಪ ಹೊತ್ತು ಹೊರಗೆ ಹೋಗಿದ್ದೆವು. ನಮ್ಮ ನೆರೆಹೊರೆಯವರು ಬೆಂಕಿಯನ್ನು ನೋಡಿ, ಅವರೆಲ್ಲರೂ ಅದನ್ನು ನೀರಿನಿಂದ ನಂದಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ ದಾಳಿಕೋರರು ಇಲ್ಲಿಯೇ ಇದ್ದರು. ಆದರೆ ನಮ್ಮ ಕಾಲಿನ ಸದ್ದು ಕೇಳಿ ಓಡಿಹೋದರು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ