Arindam Bagchi: ವಿಶ್ವಸಂಸ್ಥೆಗೆ ಭಾರತದ ನೂತನ ಶಾಶ್ವತ ಪ್ರತಿನಿಧಿಯಾಗಿ ಅರಿಂದಮ್ ಬಾಗ್ಚಿ ನೇಮಕ

|

Updated on: Oct 17, 2023 | 7:13 AM

ವಿಶ್ವಸಂಸ್ಥೆಗೆ ಭಾರತದ ನೂತನ ಶಾಶ್ವತ ಪ್ರತಿನಿಧಿಯಾಗಿ ಅರಿಂದಮ್ ಬಾಗ್ಚಿ ನೇಮಕಗೊಂಡಿದ್ದಾರೆ. ಬಾಗ್ಚಿ ಅವರು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾಗಿದ್ದರು ಹಾಗೂ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯೂ ಆಗಿದ್ದಾರೆ. ಶೀಘ್ರದಲ್ಲಿಯೇ ವಿಶ್ವಸಂಸ್ಥೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಾಗ್ಚಿ ಅವರು 1995ನೇ ತಂಡದ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದಾರೆ, ಅವರು ಮಾರ್ಚ್​ 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿದ್ದಾರೆ.

Arindam Bagchi: ವಿಶ್ವಸಂಸ್ಥೆಗೆ ಭಾರತದ ನೂತನ ಶಾಶ್ವತ ಪ್ರತಿನಿಧಿಯಾಗಿ ಅರಿಂದಮ್ ಬಾಗ್ಚಿ ನೇಮಕ
ಅರಿಂದಮ್
Image Credit source: Hindustan Times
Follow us on

ವಿಶ್ವಸಂಸ್ಥೆಗೆ ಭಾರತದ ನೂತನ ಶಾಶ್ವತ ಪ್ರತಿನಿಧಿಯಾಗಿ ಅರಿಂದಮ್ ಬಾಗ್ಚಿ(Arindam Bagchi) ನೇಮಕಗೊಂಡಿದ್ದಾರೆ. ಬಾಗ್ಚಿ ಅವರು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾಗಿದ್ದರು ಹಾಗೂ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯೂ ಆಗಿದ್ದಾರೆ. ಶೀಘ್ರದಲ್ಲಿಯೇ ವಿಶ್ವಸಂಸ್ಥೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಬಾಗ್ಚಿ ಅವರು 1995ನೇ ತಂಡದ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದಾರೆ, ಅವರು ಮಾರ್ಚ್​ 2020ರಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿದ್ದಾರೆ.

ಬಾಗ್ಚಿ ಅವರು ಈ ಹಿಂದೆ ಕ್ರೊವೇಷಿಯಾದಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಬಾಗ್ಚಿ ಅವರು ಮಾರ್ಚ್ 2021ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಇವುಗಳಲ್ಲಿ ಕೊರೊನಾ ಸಾಂಕ್ರಾಮಿಕ, ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಬಿಕ್ಕಟ್ಟು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಜಿ20 ಶೃಂಗಸಭೆ ಆಯೋಜನೆಯೂ ಸೇರಿದೆ.

ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಅರಿಂದಮ್ ಬಾಗ್ಚಿ , ವಿಶ್ವಸಂಸ್ಥೆ ಮತ್ತು ಜಿನೀವಾದಲ್ಲಿರುವ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಮುಂದಿನ ರಾಯಭಾರಿ ಅಥವಾ ಶಾಶ್ವತ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.

ಏತನ್ಮಧ್ಯೆ, ಜಂಟಿ ಕಾರ್ಯದರ್ಶಿ (ಜಿ-20) ನಾಗರಾಜ್ ನಾಯ್ಡು ಕಾಕನೂರ್ ಮತ್ತು ಮಾರಿಷಸ್‌ನ ಹೈಕಮಿಷನರ್ ನಂದಿನಿ ಸಿಂಗ್ಲಾ ಸೇರಿದಂತೆ ಸುಮಾರು ನಾಲ್ವರು ಹಿರಿಯ ರಾಜತಾಂತ್ರಿಕರ ಹೆಸರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಹುದ್ದೆಗೆ ಪರಿಗಣಿಸಲಾಗುತ್ತಿದೆ. ಈ ಮೊದಲು ಈ ಹುದ್ದೆಯಲ್ಲಿ ಇಂದ್ರಮಣಿ ಪಾಂಡೆ ಕಾರ್ಯ ನಿರ್ವಹಿಸುತ್ತಿದ್ದರು, ಅವರ ಸ್ಥಾನಕ್ಕೆ ಇದೀಗ ಬಾಗ್ಚಿ ಅವರನ್ನು ನೇಮಕ ಮಾಡಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ