ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ! ಮುಂದೇನು?

|

Updated on: Dec 02, 2023 | 4:48 PM

ಈಗ ಪಾಕಿಸ್ತಾನದಲ್ಲಿ ಪತ್ತೆಯಾಗಿರುವ ನಾಣ್ಯಗಳ ಬಣ್ಣವು ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದೆ. ಏಕೆಂದರೆ ತಾಮ್ರವನ್ನು ಗಾಳಿಗೆ ತಾಗಿಸಿದಾಗ ಅದರ ಬಣ್ಣ ಬದಲಾಗುತ್ತದೆ. ಶತಮಾನಗಳಿಂದಲೂ ಈ ನಾಣ್ಯಗಳು ಪೆಟ್ಟಿಗೆಯಲ್ಲಿ ಉಳಿದುಕೊಂಡಿದ್ದರಿಂದ ಅವು ದೊಡ್ಡ ಗುಂಡು ಕಲ್ಲಾಗಿ ಮಾರ್ಪಟ್ಟವು.

ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ! ಮುಂದೇನು?
ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ!
Follow us on

ಭೂಮಿಯನ್ನು ಉತ್ಖನನ ಮಾಡುವಾಗ, ನಮ್ಮ ಪೂರ್ವಜರ ಇತಿಹಾಸ ಮತ್ತು ವೈಭವವನ್ನು ತಿಳಿಸುವ ವಿವಿಧ ವಸ್ತುಗಳು ಆಗಾಗ್ಗೆ ಪತ್ತೆಯಾಗುತ್ತಿರುತ್ತವೆ. ಪ್ರಾಚೀನ ಕಾಲದಲ್ಲಿ, ಮಾನವರು ತಮ್ಮ ಸಂಪತ್ತನ್ನು ಮಣ್ಣಿನ ಮಡಕೆಗಳಲ್ಲಿ ಹೂತಿಡುತ್ತಿದ್ದರು. ಅಂತಹ ಸಂಪತ್ತನ್ನು ಒಮ್ಮೊಮ್ಮೆ ಈಗಿನ ಜನರು ಪತ್ತೆ ಹಚ್ಚಿ ಹೊರತೆಗೆಯುವುದು ಉಂಟು. ಹೀಗೆ ಭೂಮಿಯಲ್ಲಿ ಅಡಗಿರುವ ನಿಧಿಗಳು, ಕೆಲವೊಮ್ಮೆ ಭೂಮಿಯ ಕೆಳಗಿನ ಪದರಗಳಲ್ಲಿ ಮತ್ತು ಕೆಲವೊಮ್ಮೆ ಸಮುದ್ರದಲ್ಲಿ ಅಡಗಿರುವ ನಿಧಿಗಳು ಪತ್ತೆಯಾಗುತ್ತವೆ ಮತ್ತು ಅವುಗಳನ್ನು ಶೋಧಿಸಿ ಹೊರ ತೆಗೆದಾಗ ಬೆಲೆಬಾಳುವ ಒಡವೆಗಳು ಮತ್ತು ರತ್ನಗಳು ಪತ್ತೆಯಾಗುತ್ತವೆ. ಇಂತಹ ಪ್ರಾಚೀನ ನಿಧಿ ಸಂಪತ್ತು ಬೆಳಕಿಗೆ ಬರುವ ಅನೇಕ ಘಟನೆಗಳು ಮತ್ತು ಕಥೆಗಳನ್ನು ನಾವು ಆಗಾಗ್ಗೆ ಕೇಳುತ್ತೇನೆ. ಇತ್ತೀಚೆಗಷ್ಟೇ ಇಂತಹ ನಿಧಿ ಪಾಕಿಸ್ತಾನದಲ್ಲಿ (Pakistan) ಬೆಳಕಿಗೆ ಬಂದಿದ್ದು, ಅದರ ಬಗ್ಗೆ ಜನರಲ್ಲಿ ಚರ್ಚೆಯಾಗುತ್ತಿದೆ. ಕುಶಾನು ಕಾಲದ (Buddhist) ಸಂಪತ್ತು ಜನರ ಮುಂದೆ ಬಂದಿದೆ.

ಇಂತಹ ಪ್ರಾಚೀನ ಸಂಪತ್ತು ನೆರೆಯ ನಮ್ಮ ದಾಯಾದಿ ಪಾಕಿಸ್ತಾನದಲ್ಲಿ ಕಂಡುಬಂದಿದೆ. ಬರೋಬ್ಬರಿ 2,000 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಒಳಗೊಂಡಿರುವ ಅತ್ಯಂತ ಅಪರೂಪದ ನಿಧಿ ಇಲ್ಲಿ ಕಂಡುಬಂದಿದೆ. ಈ ನಿಧಿಯಲ್ಲಿನ ಅನೇಕ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದೆ. ಇದು ಬೌದ್ಧ ದೇವಾಲಯಗಳ ಗೋರಿಗಳಲ್ಲಿ ಕಂಡುಬಂದಿದೆ. ಲೈವ್‌ ಸೈನ್ಸ್ ಈ ನಿಧಿಗೆ ಸಂಬಂಧಿಸಿದ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮಧ್ಯ ಆಗ್ನೇಯ ಪಾಕಿಸ್ತಾನದಲ್ಲಿ ಕ್ರಿ.ಪೂ. 2600 ರ ಮೊಹೆಂಜೋದಾರೋ ಕಾಲದ ( Buddhist Stupa of Mohenjodaro) ಬೃಹತ್ ರಚನೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಈ ನಾಣ್ಯಗಳು ಹೇಗಿವೆ?
ಈ ನಿಧಿಯ ಬಗ್ಗೆ ಪುರಾತತ್ವಶಾಸ್ತ್ರಜ್ಞ, ಮಾರ್ಗದರ್ಶಿ ಶೇಖ್ ಜಾವೇದ್ ಅಲಿ ಸಿಂಧಿ ಅವರು ಹೀಗೆ ಹೆಳಿದ್ದಾರೆ: ಇದು ಮೊಹೆಂಜೋದಾರೋ ಪತನದ ನಂತರದ, ಸುಮಾರು 1600 ವರ್ಷಗಳಷ್ಟು ಹಳೆಯದು. ಅದರ ನಂತರ ಬಂಡೆಗಳ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು ಎಂದಿದ್ದಾರೆ. ಈ ನಾಣ್ಯಗಳನ್ನು ಪತ್ತೆ ಮಾಡಿದ ತಂಡದಲ್ಲಿ ಶೇಖ್ ಜಾವೇದ್ ಕೂಡ ಒಬ್ಬರು.

ಮತ್ತಷ್ಟು ಓದಿ: ಅಂಜು ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಪಾಕ್ ಉದ್ಯಮಿಯಿಂದ ಭರ್ಜರಿ ಉಡುಗೊರೆ

ಈಗ ಪತ್ತೆಯಾಗಿರುವ ನಾಣ್ಯಗಳ ಬಣ್ಣವು ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದೆ. ಏಕೆಂದರೆ ತಾಮ್ರವನ್ನು ಗಾಳಿಗೆ ತಾಗಿಸಿದಾಗ ಅದರ ಬಣ್ಣ ಬದಲಾಗುತ್ತದೆ. ಶತಮಾನಗಳಿಂದಲೂ ಈ ನಾಣ್ಯಗಳು ಪೆಟ್ಟಿಗೆಯಲ್ಲಿ ಉಳಿದುಕೊಂಡಿದ್ದರಿಂದ ಅವು ದೊಡ್ಡ ಗುಂಡು ಕಲ್ಲಾಗಿ ಮಾರ್ಪಟ್ಟವು. ಈ ನಿಧಿಯು ಪುರಾತತ್ತ್ವಜ್ಞರ ಪ್ರಕಾರ ಸುಮಾರು 5.5 ಕಿಲೋಗಳಷ್ಟು ತೂಗುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sat, 2 December 23