ಹೈತಿಯಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ, ಭಾರಿ ಸ್ಫೋಟ, 25 ಮಂದಿ ಸಾವು, 40 ಜನರಿಗೆ ಗಾಯ

|

Updated on: Sep 15, 2024 | 9:30 AM

ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​ ಪಲ್ಟಿಯಾದ ಪರಿಣಾಮ ಭಾರಿ ಸ್ಫೋಟ ಸಂಭವಿಸಿ 25 ಮಂದಿ ಸಾವನ್ನಪ್ಪಿರುವ ಘಟನೆ ಹೈತಿಯಲ್ಲಿ ನಡೆದಿದೆ. 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಸುಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ಹೈತಿಯ ಆಸ್ಪತ್ರೆಗಳು ಸಾಕಷ್ಟು ಸೌಲಭ್ಯಗಳನ್ನು ಹೊಂದಿಲ್ಲ.

ಹೈತಿಯಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿ, ಭಾರಿ ಸ್ಫೋಟ, 25 ಮಂದಿ ಸಾವು, 40 ಜನರಿಗೆ ಗಾಯ
ಸ್ಫೋಟ
Image Credit source: Global News
Follow us on

ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​ ಪಲ್ಟಿಯಾದ ಪರಿಣಾಮ ಭಾರಿ ಸ್ಫೋಟ ಸಂಭವಿಸಿ 25 ಮಂದಿ ಸಾವನ್ನಪ್ಪಿರುವ ಘಟನೆ ಹೈತಿಯಲ್ಲಿ ನಡೆದಿದೆ. 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಭೀರವಾಗಿ ಸುಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ಹೈತಿಯ ಆಸ್ಪತ್ರೆಗಳು ಸಾಕಷ್ಟು ಸೌಲಭ್ಯಗಳನ್ನು ಹೊಂದಿಲ್ಲ.

1.2 ಕೋಟಿ ಜನಸಂಖ್ಯೆ ಹೊಂದಿರುವ ಈ ದೇಶವು ಇಂಧನ ಕೊರತೆಯಿಂದ ಸಂಕಷ್ಟದಲ್ಲಿದೆ. ಗುಂಪುಗಳ ನಡುವಿನ ಕಾಳಗದಿಂದಾಗಿ ದೇಶಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಮೂರು ವರ್ಷಗಳ ಹಿಂದೆ ಪ್ರಬಲ ಭೂಕಂಪದಿಂದ ತತ್ತರಿಸಿದ್ದ 60,000 ಜನರು ವಾಸಿಸುವ ಮಿರಾಗೋನೆಯಲ್ಲಿ ಶನಿವಾರದ ಅಪಘಾತ ಸಂಭವಿಸಿದೆ.

2021 ರಲ್ಲಿ, ಹೈtಇಯ ಎರಡನೇ ಅತಿದೊಡ್ಡ ನಗರವಾದ ಕ್ಯಾಪ್-ಹೈಟಿಯನ್‌ನಲ್ಲಿ ಇಂಧನ ತುಂಬಿದ ಟ್ರಕ್ ಉರುಳಿಬಿದ್ದು ಸ್ಫೋಟಗೊಂಡಾಗ 75 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: Haiti Blast: ಹೈಟಿಯಲ್ಲಿ ಗ್ಯಾಸ್​ ಟ್ಯಾಂಕರ್ ಸ್ಫೋಟ; 50ಕ್ಕೂ ಹೆಚ್ಚು ಜನ ಸಜೀವ ದಹನ, 20 ಮನೆ ಸುಟ್ಟು ಭಸ್ಮ

ನಗರದ ಪೂರ್ವ ಅಂಚಿನಲ್ಲಿರುವ ಸನ್ಮಾರಿ ಪ್ರದೇಶದಲ್ಲಿ ಮಧ್ಯರಾತ್ರಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಟ್ಯಾಂಕರ್ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಸುಮಾರು 20 ಮನೆಗಳೂ ಸುಟ್ಟು ಕರಕಲಾಗಿದ್ದವು.

ಟ್ಯಾಂಕರ್ ಪಲ್ಟಿಯಾದ ನಂತರ ಕೆಲವರು ರಸ್ತೆಯಲ್ಲಿ ಸುರಿದ ಪೆಟ್ರೋಲ್ ಸಂಗ್ರಹಿಸಲು ಓಡಿದರು. ಈ ಸಂದರ್ಭದಲ್ಲಿ ಇಂಧನ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ವೇಗವಾಗಿ ಹರಡಿತು. ಇದರಿಂದಾಗಿ ಜನರು ಸಜೀವ ದಹನವಾದರು.

ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ದೇಶದ ಪ್ರಧಾನಿ ಏರಿಯಲ್ ಹೆನ್ರಿ, ಸುಟ್ಟಗಾಯಗಳಿಂದ ಸಾವನ್ನಪ್ಪಿರುವವರ ಗುರುತು ಪತ್ತೆ ಹಚ್ಚುವುದು ಕಷ್ಟದ ವಿಷಯವಾಗಿದೆ ಎಂದು ಹೇಳಿದರು. ಮೇಯರ್ ಪ್ರಕಾರ, ವೇಗವಾಗಿ ಬಂದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ, ನಂತರ ಹತ್ತಿರದಲ್ಲಿದ್ದ ಜನರು ಇಂಧನ ಸಂಗ್ರಹಿಸಲು ಓಡಿದಾಗ ಸ್ಫೋಟ ಸಂಭವಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ