Haiti Blast: ಹೈಟಿಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ; 50ಕ್ಕೂ ಹೆಚ್ಚು ಜನ ಸಜೀವ ದಹನ, 20 ಮನೆ ಸುಟ್ಟು ಭಸ್ಮ
ಇಂದು ಬೆಳಗ್ಗೆ ಹೈಟಿಯ ಕ್ಯಾಪ್-ಹೈಟಿಯನ್ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನವದೆಹಲಿ: ಇಂದು ಬೆಳಗ್ಗೆ ಹೈಟಿಯ ಕ್ಯಾಪ್-ಹೈಟಿಯನ್ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು ಸುಮಾರು 50 ಜನರು ಸಾವನ್ನಪ್ಪಿದ್ದಾರೆ. 50ರಿಂದ 54 ಜನರು ಇಂದು ಜೀವಂತವಾಗಿ ದಹನವಾಗಿದ್ದಾರೆ, ಅವರ ಮೃತದೇಹಗಳನ್ನು ಗುರುತಿಸುವುದು ಕೂಡ ಅಸಾಧ್ಯವಾಗಿದೆ ಎಂದು ಹೈಟಿಯ ಉಪ ಮೇಯರ್ ಪ್ಯಾಟ್ರಿಕ್ ಅಲ್ಮೊನರ್ ಹೇಳಿದ್ದಾರೆ. ಬೆಂಕಿಯ ಸ್ಫೋಟದಿಂದ ಆ ಪ್ರದೇಶದಲ್ಲಿ ಸುಮಾರು 20 ಮನೆಗಳು ಸುಟ್ಟು ಭಸ್ಮವಾಗಿವೆ. ಮನೆಯೊಳಗೆ ಎಷ್ಟು ಜನರಿದ್ದಾರೆ ಎಂಬುದರ ಕುರಿತು ನಾವು ಇನ್ನೂ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಹೈಟಿಯ ಕ್ಯಾಪ್-ಹೈಟಿಯನ್ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ಸಂಸ್ಥೆ AFP ಜೊತೆ ಮಾತನಾಡಿದ ಉಪ ಮೇಯರ್ ಪ್ಯಾಟ್ರಿಕ್ ಅಲ್ಮೊನರ್, 50ರಿಂದ 54 ಜನರು ಜೀವಂತವಾಗಿ ಸುಟ್ಟುಹೋದ ದೃಶ್ಯವನ್ನು ನಾನು ನೋಡಿದ್ದೇನೆ. ಅಲ್ಮೋನೋರ್ ಸ್ಫೋಟದಿಂದ ಈ ಪ್ರದೇಶದಲ್ಲಿ ಸುಮಾರು 20 ಮನೆಗಳು ಸುಟ್ಟು ಹೋಗಿವೆ ಎಂದು ತಿಳಿಸಿದ್ದಾರೆ.
ಉತ್ತರ ಹೈಟಿಯಲ್ಲಿ ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡಿದ್ದು, 50 ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಯಾಪ್-ಹೈಟಿಯನ್ ನಗರದಲ್ಲಿ ಇಂದು ಮುಂಜಾನೆ ಈ ಸ್ಫೋಟ ಸಂಭವಿಸಿದೆ ಎಂದು ಪ್ರಧಾನಿ ಏರಿಯಲ್ ಹೆನ್ರಿ ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ: ಟೈರ್ ಸ್ಫೋಟಗೊಂಡು ಲಾರಿ ಪಲ್ಟಿ, ನಾಲ್ವರ ದುರ್ಮರಣ
Rohini Court Blast: ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ಸ್ಫೋಟ; ಒಬ್ಬರಿಗೆ ಗಾಯ