Leena Nair: ಫ್ರಾನ್ಸ್​ ಫ್ಯಾಷನ್ ಸಂಸ್ಥೆ ಚಾನೆಲ್ ಸಿಇಒ ಪಟ್ಟಕ್ಕೇರಿದ ಭಾರತದ ಲೀನಾ ನಾಯರ್

2022ರ ಜನವರಿ ತಿಂಗಳಲ್ಲಿ ಲೀನಾ ಚಾನೆಲ್ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಂದಹಾಗೆ, ಲೀನಾ ನಾಯರ್ ಭಾರತದಲ್ಲಿ ಜನಿಸಿದ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಭಾರತದವರಾದ ಇವರು ಇದೀಗ ಇಂಗ್ಲೆಂಡ್​ನಲ್ಲಿ ಸೆಟಲ್ ಆಗಿದ್ದಾರೆ.

Leena Nair: ಫ್ರಾನ್ಸ್​ ಫ್ಯಾಷನ್ ಸಂಸ್ಥೆ ಚಾನೆಲ್ ಸಿಇಒ ಪಟ್ಟಕ್ಕೇರಿದ ಭಾರತದ ಲೀನಾ ನಾಯರ್
ಲೀನಾ ನಾಯರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 15, 2021 | 1:16 PM

ಫ್ರಾನ್ಸ್​: ಫ್ರೆಂಚ್ ಫ್ಯಾಷನ್ ಹೌಸ್ ‘ಚಾನೆಲ್’ ನೂತನ ಸಿಇಒ ಆಗಿ ಭಾರತ ಮೂಲದ ಲೀನಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ. ಲೀನಾ ನಾಯರ್ ಈ ಮೊದಲು ಯುನಿಲಿವರ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಕಳೆದ 30 ವರ್ಷಗಳಿಂದ ಲೀನಾ ನಾಯರ್ ಯುನಿಲಿವರ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ. 2022ರ ಜನವರಿ ತಿಂಗಳಲ್ಲಿ ಲೀನಾ ಚಾನೆಲ್ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಂದಹಾಗೆ, ಲೀನಾ ನಾಯರ್ ಭಾರತದಲ್ಲಿ ಜನಿಸಿದ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಭಾರತದವರಾದ ಇವರು ಇದೀಗ ಇಂಗ್ಲೆಂಡ್​ನಲ್ಲಿ ಸೆಟಲ್ ಆಗಿದ್ದಾರೆ.

ಲೀನಾ ನಾಯರ್ ಜಮ್​ಶೆಡ್​ಪುರ ಮೂಲದವರಾಗಿದ್ದು, 30 ವರ್ಷಗಳಿಂದಲೂ ಯುನಿಲಿವರ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಫ್ರಾನ್ಸ್​ನ ಫ್ಯಾಷನ್ ಸಂಸ್ಥೆ ‘ಚಾನೆಲ್’​ ಫ್ರಾನ್ಸ್​ನ ಪ್ರತಿಷ್ಠಿತ ಫ್ಯಾಷನ್ ಸಂಸ್ಥೆಯಾಗಿದೆ. 52 ವರ್ಷ ವಯಸ್ಸಿನ ಅಮೆರಿಕದ ಉದ್ಯಮಿ ಮೌರೀನ್ ಚಿಕ್ವೆಟ್ ಫ್ಯಾಷನ್ ಹಿನ್ನೆಲೆಯಿಂದ ಬಂದವರು. ಅವರು 2016ರ ಆರಂಭದವರೆಗೆ 9 ವರ್ಷಗಳ ಕಾಲ ‘ಚಾನೆಲ್‌’ನ CEO ಆಗಿದ್ದರು. ಅವರ ಸ್ಥಾನಕ್ಕೆ ಲೀನಾ ನಾಯರ್ ನೇಮಕಗೊಂಡಿದ್ದಾರೆ.

ಫ್ರೆಂಚ್ ಬಿಲಿಯನೇರ್ ಆಗಿರುವ 73 ವರ್ಷದ ಅಲೈನ್ ವರ್ತೈಮರ್ ತಮ್ಮ ಸಹೋದರ ಗೆರಾರ್ಡ್ ವರ್ತೈಮರ್ ಅವರೊಂದಿಗೆ ಚಾನೆಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಯುನಿಲಿವರ್‌ನಲ್ಲಿ 1,50,000 ಜನ ಸಿಬ್ಬಂದಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಲೀನಾ ನಾಯರ್ ಮುಂದಿನ ವರ್ಷ ಜನವರಿ ಅಂತ್ಯದಲ್ಲಿ ಚಾನೆಲ್ ಸಂಸ್ಥೆಯನ್ನು ಸೇರಲಿದ್ದಾರೆ. ಹಾಗೇ, ಅವರು ಲಂಡನ್‌ನಲ್ಲಿ ನೆಲೆಸಲಿದ್ದಾರೆ.

ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಸಮೂಹದಲ್ಲಿ ಒಂದಾಗಿರುವ ಚಾನೆಲ್ ಸಂಸ್ಥೆಯನ್ನು ನಡೆಸಲು ಆಯ್ಕೆಯಾದ  ಲೀನಾ ನಾಯರ್ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

1) ಲೀನಾ ನಾಯರ್ ಭಾರತದಲ್ಲಿ ಜನಿಸಿದ ಬ್ರಿಟಿಷ್ ಪ್ರಜೆ.

2) ಲೀನಾ ನಾಯರ್ XLRI ಜಮ್ಶೆಡ್‌ಪುರದ ಹಳೆಯ ವಿದ್ಯಾರ್ಥಿ.

3) 52 ವರ್ಷ ವಯಸ್ಸಿನವರು ಅಮೆರಿಕದ ಉದ್ಯಮಿ ಮೌರೀನ್ ಚಿಕ್ವೆಟ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಅವರ ಸ್ಥಾನಕ್ಕೆ ಲೀನಾ ನಾಯರ್ ನೇಮಕವಾಗಲಿದ್ದಾರೆ. 2016ರ ಆರಂಭದವರೆಗೆ 9 ವರ್ಷಗಳ ಕಾಲ ಚಾನೆಲ್‌ನ CEO ಆಗಿದ್ದರು.

4) ಅವರು 1992ರಲ್ಲಿ ಯೂನಿಲಿವರ್‌ನ ಭಾರತೀಯ ಅಂಗಸಂಸ್ಥೆ HUL ಗೆ ಕಾರ್ಖಾನೆಯ ಮಹಡಿಯಲ್ಲಿ ಟ್ರೈನಿಯಾಗಿ ಸೇರಿದರು.

5) ಯೂನಿಲಿವರ್‌ನಲ್ಲಿ ನಾಯರ್ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

6) ಆಂಗ್ಲೋ-ಡಚ್ ಬಹುರಾಷ್ಟ್ರೀಯ ಯೂನಿಲಿವರ್‌ನಲ್ಲಿ ಲೀನಾ ನಾಯರ್ ಮೊದಲ ಮಹಿಳೆ ಮತ್ತು ಅತ್ಯಂತ ಕಿರಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

7) ಲೀನಾ ನಾಯರ್ ಅವರು ಯೂನಿಲಿವರ್ ಲೀಡರ್‌ಶಿಪ್ ಎಕ್ಸಿಕ್ಯೂಟಿವ್‌ನ ಸದಸ್ಯರಾಗಿದ್ದರು. ಅದು ಯೂನಿಲಿವರ್‌ನ ವ್ಯವಹಾರ ಮತ್ತು ಆರ್ಥಿಕ ಕಾರ್ಯಕ್ಷಮತೆಯನ್ನು ತಲುಪಿಸುವ ಜವಾಬ್ದಾರಿಯನ್ನು ಹೊಂದಿದೆ.

8) ಯೂನಿಲಿವರ್‌ನಲ್ಲಿ 1,50,000 ಜನರನ್ನು ನೋಡಿಕೊಳ್ಳುತ್ತಿದ್ದ ನಾಯರ್, ಜನವರಿ ಅಂತ್ಯದಲ್ಲಿ ಚಾನೆಲ್‌ಗೆ ಸೇರುತ್ತಾರೆ. ಆಕೆ ಲಂಡನ್ ನಲ್ಲಿ ನೆಲೆಸಲಿದ್ದಾರೆ.

9) ಲೀನಾ ನಾಯರ್ ಈ ಹಿಂದೆ ಬ್ರಿಟಿಷ್ ಸರ್ಕಾರದ ವ್ಯವಹಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ವಿಭಾಗದ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

10) ಯೂನಿಲಿವರ್‌ನಲ್ಲಿ ಲೀನಾ ನಾಯರ್ ಕೊನೆಯ ಹುದ್ದೆ ಮಾನವ ಸಂಪನ್ಮೂಲ ಮುಖ್ಯಸ್ಥರ ಹುದ್ದೆಯಾಗಿತ್ತು. ಕಂಪನಿಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು

ಇದನ್ನೂ ಓದಿ: Shilpa Shetty: ಅಭಿಮಾನಿಗಳ ಹೃದಯ ಗೆದ್ದ ಶಿಲ್ಪಾ ಶೆಟ್ಟಿಯ ಇತ್ತೀಚಿಗಿನ ಫ್ಯಾಷನ್​ ಆಯ್ಕೆಗಳು!

Hindustan Unilever Ltd: ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಮಾರುಕಟ್ಟೆ ಬಂಡವಾಳ 6 ಲಕ್ಷ ಕೋಟಿ ರೂ.