World’s Most Admired Men 2021 ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಕೊಹ್ಲಿಗಿಂತ ಮೇಲೆ ತೆಂಡೂಲ್ಕರ್; ಅಗ್ರಸ್ಥಾನದಲ್ಲಿ ಒಬಾಮ, ಎಂಟನೇ ಸ್ಥಾನದಲ್ಲಿ ಮೋದಿ
ಮ್ಯಾಂಚೆಸ್ಟರ್ ಯುನೈಟೆಡ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ 2021 ರಲ್ಲಿ ವಿಶ್ವದ ಟಾಪ್ 20 ಅತ್ಯಂತ ಮೆಚ್ಚುಗೆ ಪಡೆದ ಪುರುಷರಲ್ಲಿ ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕೂಡ ವಿಶೇಷ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಮತ್ತು ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ (Lionel Messi) ಅವರು 2021ರಲ್ಲಿ YouGov ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ . ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಭಾರತೀಯ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ(Virat Kohli) ಕೂಡ ಬ್ರಿಟಿಷ್ ಅಂತರಾಷ್ಟ್ರೀಯ ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಹಂಚಿಕೊಂಡಿರುವ ವಿಶೇಷ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮೀಕ್ಷೆಯ ಪ್ರಕಾರ ಕೊಹ್ಲಿ, ತೆಂಡೂಲ್ಕರ್, ರೊನಾಲ್ಡೊ ಮತ್ತು ಮೆಸ್ಸಿ 2021 ರಲ್ಲಿ ವಿಶ್ವದ ಟಾಪ್ 20 ಅತ್ಯಂತ ಮೆಚ್ಚುಗೆ ಪಡೆದ ಪುರುಷರಲ್ಲಿ ಸೇರಿದ್ದಾರೆ. ಪುರುಷರ ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಉದ್ಯಮಿ ಬಿಲ್ ಗೇಟ್ಸ್ ಇದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರು ತಮ್ಮ ಅಂಕಿ ಅಂಶವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಖ್ಯಾತ ಕ್ರಿಕೆಟಿಗ ತೆಂಡೂಲ್ಕರ್ ಅವರು 2021 ರ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಶ್ರೇಯಾಂಕದಲ್ಲಿ ಟೆಸ್ಟ್ ನಾಯಕ ಕೊಹ್ಲಿಗಿಂತ ಮೇಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ 12 ನೇ ಸ್ಥಾನವನ್ನು ಪಡೆದಿದ್ದರೆ, ಬ್ಯಾಟಿಂಗ್ ಮಾಂತ್ರಿಕ ಕೊಹ್ಲಿ ಪಟ್ಟಿಯಲ್ಲಿ 18 ನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್ ಆಟಗಾರ ರೊನಾಲ್ಡೊ 2021 ರ ವಿಶ್ವದ ಅತ್ಯಂತ ಮೆಚ್ಚುಗೆಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯಲು ಎರಡು ಸ್ಥಾನಗಳನ್ನು ಏರಿದ್ದಾರೆ. ರೊನಾಲ್ಡೊ ಪ್ರತಿಸ್ಪರ್ಧಿ ಮೆಸ್ಸಿ ನಾಲ್ಕು ಸ್ಥಾನಗಳನ್ನು ಜಿಗಿದಿದ್ದರೂ ಮೆಸ್ಸಿ ಟಾಪ್ 10 ಪಟ್ಟಿಯಲ್ಲಿ ರೊನಾಲ್ಡೊವನ್ನು ಮೀರಿಸಲು ವಿಫಲರಾಗಿದ್ದಾರೆ.
World’s Most Admired Men 2021 (1-10)
1. Barack Obama ?? 2. Bill Gates ?? 3. Xi Jinping ?? 4. Cristiano Ronaldo ?? 5. Jackie Chan ?? 6. Elon Musk ?? 7. Lionel Messi ?? 8. Narendra Modi ?? 9. Vladimir Putin ?? 10. Jack Ma ??https://t.co/aBRU8YhnJV pic.twitter.com/htWTGoharj
— YouGov America (@YouGovAmerica) December 14, 2021
ಪಿಎಸ್‌ಜಿಯಲ್ಲಿ ನೇಮರ್ ಮತ್ತು ಕೈಲಿಯನ್ ಬಪ್ಪೆ ಅವರೊಂದಿಗೆ ಸೇರುವ ಮೂಲಕ ಎಫ್‌ಸಿ ಬಾರ್ಸಿಲೋನಾ ಜೊತೆಗಿನ ತನ್ನ ಸುದೀರ್ಘ ಒಡನಾಟವನ್ನು ಕೊನೆಗೊಳಿಸಿದ ಮೆಸ್ಸಿ ಕಳೆದ ವರ್ಷ ಪುರುಷರ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದರು. ಮೆಸ್ಸಿಯ ಮಾಜಿ ಎಲ್ ಕ್ಲಾಸಿಕೊ ಪ್ರತಿಸ್ಪರ್ಧಿ ರೊನಾಲ್ಡೊ ಯುಗೋವ್‌ನ ಅತ್ಯಂತ ಮೆಚ್ಚುಗೆ ಪಡೆದ ಶ್ರೇಯಾಂಕಗಳ ಆರಂಭದಿಂದಲೂ ಪುರುಷರ ಪಟ್ಟಿಯಲ್ಲಿ ಅವರ ಅತ್ಯುತ್ತಮ ಶ್ರೇಯಾಂಕವನ್ನು (4) ಸಾಧಿಸಿದ್ದಾರೆ.
ಬ್ರಿಟಿಷ್ ಸಂಸ್ಥೆಯ ಪ್ರಕಾರ 38 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 42,000 ಕ್ಕಿಂತ ಹೆಚ್ಚು ಜನರನ್ನು ಸಮೀಕ್ಷೆಗೆ ಬಳಸಿದ್ದು, ಪ್ರಪಂಚದ ಅತ್ಯಂತ ಮೆಚ್ಚುಗೆ ಪಡೆದ ಪುರುಷರು ಮತ್ತು ಮಹಿಳೆಯರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪುರುಷರ ಶ್ರೇಯಾಂಕದಲ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಹಿಳಾ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಮಿಚೆಲ್ ಒಬಾಮಾ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಪುರುಷರ ಶ್ರೇಯಾಂಕದಲ್ಲಿ ಬಾಲಿವುಡ್ ಐಕಾನ್ ಶಾರುಖ್ ಖಾನ್ (14) ಅಮಿತಾಭ್ ಬಚ್ಚನ್ (15) ಅವರಿಗಿಂತ ಮೇಲಿದ್ದಾರೆ.
ಇದನ್ನೂ ಓದಿ: NDPS Act ಏನಿದು ಎನ್ಡಿಪಿಎಸ್ ಕಾಯ್ದೆ? ಅದರ ತಿದ್ದುಪಡಿ ಮತ್ತು ಪರಿಣಾಮಗಳೇನು?
Published On - 6:17 pm, Wed, 15 December 21