Titanic Submarine: ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲೇ ಮತ್ತೊಂದು ಅವಘಡ, ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೈಟಾನಿಕ್ ಜಲಾಂತರ್ಗಾಮಿ ನಾಪತ್ತೆ

ಟೈಟಾನಿಕ್ (Titanic)ಹಡಗು ಮುಳುಗಿದ ಸ್ಥಳ ಅಟ್ಲಾಂಟಿಕ್ ಸಾಗರರಿಂದ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಟೈಟಾನಿಕ್ ಹಡಗಿನ ಅವಶೇಷಗಳಿರುವ ಕಡೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.

Titanic Submarine: ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲೇ ಮತ್ತೊಂದು ಅವಘಡ, ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೈಟಾನಿಕ್ ಜಲಾಂತರ್ಗಾಮಿ ನಾಪತ್ತೆ
ಟೈಟಾನಿಕ್ ಹಡಗು

Updated on: Jun 20, 2023 | 9:53 AM

ಟೈಟಾನಿಕ್ (Titanic)ಹಡಗು ಮುಳುಗಿದ ಸ್ಥಳ ಅಟ್ಲಾಂಟಿಕ್ ಸಾಗರರಿಂದ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ.
ಟೈಟಾನಿಕ್ ಹಡಗಿನ ಅವಶೇಷಗಳಿರುವ ಕಡೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ. ಟೈಟಾನಿಕ್ ಸಬ್​ಮೆರಿನ್ ಕಣ್ಮರೆಯಾಗಿರುವುದನ್ನು ಸ್ಕೈ ನ್ಯೂಸ್ ದೃಢಪಡಿಸಿದೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ದೃಢಪಟ್ಟಿಲ್ಲ.

ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗಡ್ಡೆಗೆ (ಐಸ್ ರಾಕ್) ಡಿಕ್ಕಿ ಹೊಡೆದ ನಂತರ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಿತ್ತು. ಆ ಸಮಯದಲ್ಲಿ, ಟೈಟಾನಿಕ್ ಮುಳುಗುವಿಕೆಯಿಂದ 1500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್ 10 ರಂದು, ಈ ಹಡಗು ಬ್ರಿಟನ್‌ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು, ಅದು ಅಪಘಾತಕ್ಕೆ ಬಲಿಯಾಯಿತು.

ಮತ್ತಷ್ಟು ಓದಿ: Titanic Movie: ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್​’ ಸಿನಿಮಾ; ಇಲ್ಲಿದೆ ವಿವರ

ಹಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಕೂಡ ಟೈಟಾನಿಕ್ ಹಡಗು ದುರಂತದ ಬಗ್ಗೆ ಅದೇ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಟೈಟಾನಿಕ್ ಅಪಘಾತವನ್ನು ಬಹಳ ಹತ್ತಿರದಿಂದ ತೋರಿಸಲಾಗಿದೆ. ಈ ಚಿತ್ರ ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.

ನೌಕೆಯಲ್ಲಿದ್ದವರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆದರೆ ಎಷ್ಟು ಮಂದಿ ಇದ್ದರು ಎನ್ನುವ ಕುರಿತು ನಿಖರವಾದ ಮಾಹಿತಿ ಇಲ್ಲ ಎಂದು ಓಸಿಂಗೇಟ್ ಕಂಪನಿ ಹೇಳಿದೆ.

ಸಮುದ್ರಯಾನವು ನ್ಯೂಫೌಂಡ್​ಲ್ಯಾಂಡ್​ನ ಸೇಂಟ್​ ಜಾನ್ಸ್​ನಲ್ಲಿ ಪ್ರಾರಂಭವಾಗುತ್ತದೆ. ಅಟ್ಲಾಂಟಿಕ್​ನಾದ್ಯಂತ ಸುಮಾರು 400 ಮೈಲಿಗಳಷ್ಟು ಸಂಚರಿಸುತ್ತದೆ. ಐವರು ಮಾತ್ರ ಈ ನೌಕೆಯನ್ನು ಒಂದೇ ಸಮಯದಲ್ಲಿ ಹತ್ತಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us