House built ala Titanic Ship: ಟೈಟಾನಿಕ್ ಹಡಗು ಮಾದರಿಯ ಮನೆ ನೋಡಿದ್ದೀರಾ? ಒಮ್ಮೆ ಡಾರ್ಜೀಲಿಂಗ್​ಗೆ ಹೋಗಿಬನ್ನಿ!

House built ala Titanic Ship: ಟೈಟಾನಿಕ್ ಹಡಗು ಮಾದರಿಯ ಮನೆ ನೋಡಿದ್ದೀರಾ? ಒಮ್ಮೆ ಡಾರ್ಜೀಲಿಂಗ್​ಗೆ ಹೋಗಿಬನ್ನಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2023 | 8:08 AM

ತಮ್ಮ ಕನಸಿನ ಮನೆ ಕಟ್ಟಲು ಮಿಂಟು ವರ್ಷಗಳ ಕಾಲ ಹಣ ಕೂಡಿಟ್ಟರು. ಕಲ್ಲು ಕಟೆಯುವ ಕೆಲಸದಲ್ಲಿ ತರಬೇತಿ ಪಡೆಯಲು ನೇಪಾಳಕ್ಕೂ ಹೋಗಿ ಬಂದರು

ಪಶ್ಚಿಮ ಬಂಗಾಳದ ಡಾರ್ಜೀಲಿಂಗ್ ನಲ್ಲಿರುವ ನಿಜ್ಬರಿ ಪ್ರದೇಶದ ರೈತರೊಬ್ಬರಿಗೆ ಚಿಕ್ಕಂದಿನಿಂದಲೇ ಒಂದು ಕನಸಿತ್ತು. ಅವರ ಕನಸು ನಮಗೆ ವಿಚಿತ್ರ ಅನಿಸಬಹುದು- ಟೈಟಾನಿಕ್ ಹಡಗಿನಂತೆ (Titanic ship) ಮನೆಕಟ್ಟುವುದು ಅವರ ಹೆಬ್ಬಯಕೆಯಾಗಿತ್ತು. ಅವರ ಕನಸು ಈಗ ನೆರವೇರುವ ಹಂತದಲ್ಲಿದೆ. ಮಿಂಟು ರಾಯ್ (Mintu Roy) ಹೆಸರಿನ ಈ ರೈತ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ, ಕೊಲ್ಕತ್ತಾದ ಹೌರಾ ಏರಿಯಾದಲ್ಲಿ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ (Durga Puja) ಭಾಗವಹಿಸಿದ್ದರು. ಆಯೋಜಕರು ಪೂಜೆಗಾಗಿ ಟೈಟಾನಿಕ್ ಹಡಗಿನ ಮಾದರಿಯಲ್ಲಿ ಪೆಂಡಾಲ್ ಹಾಕಿದ್ದರು. ಆ ಪೆಂಡಲ್ ಬಾಲಕ ಮಿಂಟು ಮೇಲೆ ಅದೆಷ್ಟು ಪ್ರಭಾವ ಬೀರಿತೆಂದರೆ ಮುಂದೆ ಮನೆಕಟ್ಟಿದರೆ ಆ ವಿಖ್ಯಾತ ಹಡಗಿನ ಮಾದರಿಯಲ್ಲೇ ಕಟ್ಟಬೇಕೆಂಬ ಸಂಕಲ್ಪ ಮನದಲ್ಲಿ ಬೇರೂರಿಬಿಟ್ಟಿತು.

ಇದನ್ನೂ ಓದಿ: Train Accident In Shahdol: ಮಧ್ಯಪ್ರದೇಶದಲ್ಲಿ ರೈಲುಗಳು ಮುಖಾಮುಖಿ ಡಿಕ್ಕಿ, ಹಲವು ರೈಲುಗಳ ಸಂಚಾರ ರದ್ದು

‘ಜನ ಬಂದು ವೀಕ್ಷಿಸಲಿ ಎಂಬ ಉದ್ದೇಶದಿಂದ ಬಹಳಷ್ಟು ಮುತುವರ್ಜಿವಹಿಸಿ ಪ್ರೀತಿ ಮತ್ತು ಆಸ್ಥೆಯಿಂದ ಮನೆ ಕಟ್ಟಿದ್ದೇನೆ. ನನ್ನ ಹೆಸರು ಖ್ಯಾತಿಗೆ ಬರಲಿ ಎಂಬ ಉದ್ದೇಶ ಖಂಡಿತ ನನಗಿಲ್ಲ,’ ಎಂದು ಮಿಂಟು ರಾಯ್ ಹೇಳುತ್ತಾರೆ.

ತಮ್ಮ ಕನಸಿನ ಮನೆ ಕಟ್ಟಲು ಮಿಂಟು ವರ್ಷಗಳ ಕಾಲ ಹಣ ಕೂಡಿಟ್ಟರು. ಕಲ್ಲು ಕಟೆಯುವ ಕೆಲಸದಲ್ಲಿ ತರಬೇತಿ ಪಡೆಯಲು ನೇಪಾಳಕ್ಕೂ ಹೋಗಿ ಬಂದರು. ಇಂದು ಮಿಂಟು ಅವರ ಕನಸಿನ ಮನೆಯಿಂದ ಅವರ ಗ್ರಾಮಕ್ಕೆ ವಿಶಿಷ್ಟ ಖ್ಯಾತಿ ಬಂದೊದಗಿದೆ. ಜನ ಊರ ಹೆಸರು ಹೇಳುವಾಗ ‘ಹಡಗು ಮನೆ’ ಊರು ಅಂತ ಹೇಳುತ್ತಿದ್ದಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ