AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Titanic Movie: ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್​’ ಸಿನಿಮಾ; ಇಲ್ಲಿದೆ ವಿವರ

‘ಟೈಟಾನಿಕ್’ ಸಿದ್ಧಗೊಂಡಿದ್ದು 1997ರಲ್ಲಿ. ಈಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ 25 ವರ್ಷಗಳ ಹಿಂದೆ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ, ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಅಪ್​ಗ್ರೇಡ್ ಮಾಡಿ ಸಿನಿಮಾ ಬಿಡುಗಡೆ ಆಗುತ್ತಿದೆ.

Titanic Movie: ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್​’ ಸಿನಿಮಾ; ಇಲ್ಲಿದೆ ವಿವರ
ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್’
TV9 Web
| Edited By: |

Updated on: Jun 23, 2022 | 4:31 PM

Share

1997ರಲ್ಲಿ ತೆರೆಗೆ ಬಂದ ‘ಟೈಟಾನಿಕ್​’ ಚಿತ್ರಕ್ಕೆ (Titanic Movie) ಬೇರೆಯದೇ ತೂಕ ಇದೆ. ‘ಟೈಟಾನಿಕ್​’ ತೆರೆಗೆ ಬಂದು 25 ವರ್ಷ ಕಳೆದರೂ ಐಕಾನಿಕ್​ ಚಿತ್ರಗಳ ಸಾಲಿನಲ್ಲಿ ಇದು ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಚಿತ್ರವನ್ನು ಹತ್ತಾರು ಬಾರಿ ನೋಡಿದವರು ಅನೇಕರಿದ್ದಾರೆ. ‘ಟೈಟಾನಿಕ್​’ ಮಾಡಿದ ಮೋಡಿ ಅಷ್ಟು ದೊಡ್ಡದು. ಜೇಮ್ಸ್ ಕ್ಯಾಮೆರಾನ್ (James Cameron) ನಿರ್ದೇಶನದ ಈ ಸಿನಿಮಾ ಹಲವು ಬದಲಾವಣೆಗಳೊಂದಿಗೆ ಮತ್ತೆ ರಿಲೀಸ್ ಆಗುತ್ತಿದೆ. ‘ಟೈಟಾನಿಕ್​’ ರಿಲೀಸ್ ಆಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಮುಂದಿನ ವರ್ಷ ಪ್ರೇಮಿಗಳ ದಿನಾಚರಣೆಯಂದು (ಫೆಬ್ರವರಿ 14) ‘ಟೈಟಾನಿಕ್​’ ಮತ್ತೆ ತೆರೆಗೆ ಬರುತ್ತಿದೆ.

ರೋಸ್ ಹಾಗೂ ಜ್ಯಾಕ್​ ಲವ್​ಸ್ಟೋರಿಯ ಮೇಲೆ ‘ಟೈಟಾನಿಕ್​’ ಚಿತ್ರದ ಕಥೆ ಸಾಗುತ್ತದೆ. ಅಷ್ಟೇ ಅಲ್ಲ, ವಿಶ್ವ ಕಂಡ ಅದ್ಭುತ ಹಡಗು ಟೈಟಾನಿಕ್​ ಹೇಗೆ ನಾಶವಾಯಿತು ಎಂಬುದನ್ನೂ ಈ ಸಿನಿಮಾ ಹೇಳುತ್ತದೆ. ಈಗ ‘ಟೈಟಾನಿಕ್​’ ಸಿನಿಮಾದ ಸಂಗೀತ, ಹಿನ್ನೆಲೆ ಸಂಗೀತ, ಸಿನಿಮಾ ಗುಣಮಟ್ಟ ಎಲ್ಲವನ್ನೂ ಉನ್ನತ ದರ್ಜೆಗೆ ಏರಿಸಿ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ ರೀಮಾಸ್ಟರ್ಡ್ ಎನ್ನಲಾಗುತ್ತದೆ.

ಈಗ ರಿಲೀಸ್ ಆಗುತ್ತಿರುವುದು ರೀಮಾಸ್ಟರ್ಡ್​​ ‘ಟೈಟಾನಿಕ್’. ಈ ಚಿತ್ರ ಸಿದ್ಧಗೊಂಡಿದ್ದು 1997ರಲ್ಲಿ. ಈಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ 25 ವರ್ಷಗಳ ಹಿಂದೆ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ, ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಅಪ್​ಗ್ರೇಡ್ ಮಾಡಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ಬಿಡುಗಡೆ ಆಗುತ್ತಿರುವ ಸಿನಿಮಾ, 3ಡಿ, 4ಕೆ ಹಾಗೂ ಎಚ್​​ಡಿಆರ್​ ಅವತರಣಿಕೆಯಲ್ಲಿ ಇರಲಿದೆ.

ಇದನ್ನೂ ಓದಿ
Image
Justin Bieber: ವೈರಸ್​ನಿಂದ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು; ಖ್ಯಾತ ಗಾಯಕನಿಗೆ ಕಾಡುತ್ತಿದೆ ಗಂಭೀರ ಸಮಸ್ಯೆ
Image
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
Image
Johnny Depp Amber Heard Case: ಮಾಜಿ ಪತ್ನಿ ವಿರುದ್ಧದ ಕೇಸ್ ಗೆದ್ದು ಸುಮಾರು 116 ಕೋಟಿ ರೂ ಪರಿಹಾರ ಪಡೆದ ಖ್ಯಾತ ನಟ ಜಾನಿ ಡೆಪ್​
Image
Stranger Things 4: ‘ಸ್ಟ್ರೇಂಜರ್​ ಥಿಂಗ್ಸ್​ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್​ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ

‘ಟೈಟಾನಿಕ್​ ರೀತಿ ಸಿನಿಮಾ ರೀ-ರಿಲೀಸ್ ಮಾಡುವ ಪ್ರಕ್ರಿಯೆ ಚಿತ್ರರಂಗದ ಪಾಲಿಗೆ ಹೊಸದಲ್ಲ. ಕನ್ನಡದ ಅನೇಕ ಸಿನಿಮಾಗಳು ಈ ಮಾದರಿಯಲ್ಲಿ ಬಿಡುಗಡೆ ಆಗಿವೆ. ವಿಷ್ಣುವರ್ಧನ್​ ನಟನೆಯ ‘ನಾಗರಹಾವು’ ಚಿತ್ರ ರೀಮಾಸ್ಟರ್ಡ್ ಆಗಿ ರಿಲೀಸ್ ಆಗಿತ್ತು. ರಾಜ್​ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರಕ್ಕೂ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದರು. ‘ಟೈಟಾನಿಕ್​’ ಚಿತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಅದಕ್ಕೂ ಹೊಸ ಟಚ್ ನೀಡಿ ಬಿಡುಗಡೆ ಮಾಡಲಾಗುತ್ತಿದೆ’ ಎಂಬುದು ಚಿತ್ರರಂಗದ ಪಂಡಿತರ ಮಾತು.

‘ಟೈಟಾನಿಕ್’​ ಚಿತ್ರದಲ್ಲಿ ಲಿಯನಾರ್ಡೋ ಡಿಕ್ಯಾಪ್ರಿಯೋ ಹಾಗೂ ಕೇಟ್​ ವಿನ್ಸ್​ಲೆಟ್​ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ರೀ ರಿಲೀಸ್ ಆಗುತ್ತಿರುವುದು ಇದೇ ಮೊದಲೇನಲ್ಲ. 2012ರಲ್ಲಿ ಈ ಚಿತ್ರ ಮೊದಲ ಬಾರಿ 3ಡಿಯಲ್ಲಿ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಈ ವರೆಗೆ 17,226 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರಕ್ಕೆ 11 ಆಸ್ಕರ್ ಪ್ರಶಸ್ತಿಗಳು ಸಿಕ್ಕಿವೆ ಅನ್ನೋದು ವಿಶೇಷ.

ಇದನ್ನೂ ಓದಿ: 22 ವರ್ಷಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹೇಗಿದ್ರು ನೋಡಿ; ಇಲ್ಲಿದೆ ಫೋಟೋ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ