ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದು, ಬಳಿಕ ಮೃತದೇಹ ಮೊಸಳೆಯೊಳಗೆ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಈ ಘಟನೆ ನಡೆದಿದೆ. 65 ವರ್ಷದ ಕೆವಿನ್ ಡಾರ್ಮೊಡಿ ಎಂಬುವವರು ಸಾಲ್ಟ್ವಾಟರ್ ಕ್ರೊಕೊಟೈಲ್ ಹ್ಯಾಬಿಟ್ಯಾಟ್ಗೆ ಮೀನು ಹಿಡಿಯಲೆಂದು ತೆರಳಿದ್ದರು.
ಮೀನು ಹಿಡಿಯುತ್ತಿದ್ದವರು ಜೋರಾಗಿ ಕಿರುಚಿದ್ದರು, ಬಳಿಕ ನೀರು ಚಿಮ್ಮಿತ್ತು ಯಾರು ಎಲ್ಲಿ ಹೋದರು ಎನ್ನುವ ಸುಳಿವೇ ಇರಲಿಲ್ಲ. ಅಂತಿಮವಾಗಿ ಅನಿವಾರ್ಯವಾಗಿ 4.2 ಮೀಟರ್ ಮತ್ತೊಂದು 2.8 ಮೀಟರ್ ಉದ್ದದ ಮೊಸಳೆಯನ್ನು ರೇಂಜರ್ ಹತ್ಯೆ ಮಾಡಿದ್ದಾರೆ.
ಮತ್ತಷ್ಟು ಓದಿ: ಮೊಸಳಿಲೇ ಅದು, ಅಲ್ಲಲೇ ಪಾ! ರಾತ್ರಿ ವೇಳೆ ಮೊಸಳೆ ಪ್ರತ್ಯಕ್ಷ
ಬಳಿಕ ಪರೀಕ್ಷೆ ನಡೆಸಿದಾಗ ಎರಡೂ ಮೊಸಳೆಯ ಹೊಟ್ಟೆಯೊಳಗೆ ಮಾನವರ ಅವಶೇಷಗಳು ಕಂಡುಬಂದಿವೆ. ಇದು ದುರಂತ ಸಾವು ಎಂದು ಹೇಳಲಾಯಿತು.
ಸುಮಾರು 130 ಮಂದಿ ಜನಸಂಖ್ಯೆಯನ್ನು ಹೊಂದಿರುವ ಗ್ರಾಮೀಣ ಉತ್ತರ ಕ್ವೀನ್ಸ್ಲ್ಯಾಂಡ್ ಪಟ್ಟಣವಾದ ಲಾರಾದವರಾಗಿದ್ದ ಅವರು ತಮ್ಮ ಉತ್ತಮ ಸ್ನೇಹಿತ ಎಂದು ಹೆಂಡರ್ಸನ್ ಹೇಳಿದ್ದಾರೆ. ಕ್ವೀನ್ಸ್ಲ್ಯಾಂಡ್ ರಾಜ್ಯದ ವನ್ಯಜೀವಿ ಅಧಿಕಾರಿ ಮೈಕೆಲ್ ಜಾಯ್ಸ್ ಜನರು ಜಾಗರೂಕರಾಗಿರುವಂತೆ ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ