Australia Crime: ಭಾರತ ಮೂಲದ ಯುವತಿಯನ್ನು ಜೀವಂತ ಸಮಾಧಿ ಮಾಡಿದ್ದ ಮಾಜಿ ಪ್ರಿಯಕರ

|

Updated on: Jul 07, 2023 | 8:05 AM

ಭಾರತ ಮೂಲದ ಯುವತಿಯನ್ನು ಮಾಜಿ ಪ್ರಿಯಕರನೊಬ್ಬ ಜೀವಂತ ಸಮಾಧಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

Australia Crime: ಭಾರತ ಮೂಲದ ಯುವತಿಯನ್ನು ಜೀವಂತ ಸಮಾಧಿ ಮಾಡಿದ್ದ ಮಾಜಿ ಪ್ರಿಯಕರ
ಜಾಸ್ಮಿನ್ ಕೌರ್
Follow us on

ಭಾರತ ಮೂಲದ ಯುವತಿಯನ್ನು ಮಾಜಿ ಪ್ರಿಯಕರನೊಬ್ಬ ಜೀವಂತ ಸಮಾಧಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆಕೆ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಳು, 2021ರ ಮಾರ್ಚ್​ನಲ್ಲಿ ಈ ಘಟನೆ ನಡೆದಿದೆ, ಆತ 21 ವರ್ಷದ ಜಾಸ್ಮಿನ್ ಕೌರ್ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ತಾರಿಕ್​ಜೋತ್ ಸಿಂಗ್ ಎಂಬಾತ ಜಾಸ್ಮಿನ್​ಳನ್ನು ಪ್ರೀತಿಸುತ್ತಿದ್ದ ಆದರೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಜಾಸ್ಮಿನ್ ಕೌರ್ ಕೆಲಸ ಮಾಡುತ್ತಿದ್ದ ಸ್ಥಳದಿಂದ ಆಕೆಯನ್ನು ಅಪಹರಿಸಿದ್ದರು, ಅಲ್ಲಿಂದ 644 ಕಿ.ಮೀ ದೂರ ಕರೆದೊಯ್ದು ಜೀವಂತ ಸಮಾಧಿ ಮಾಡಿದ್ದರು.

ಕೋರ್ಟ್​ನಲ್ಲಿ ಶಿಕ್ಷೆ ಪ್ರಕಟವಾಗುವ ಸಮಯದಲ್ಲಿ ಈ ಮಾಹಿತಿಯನ್ನು ಎಲ್ಲರಿಗೂ ನೀಡಲಾಯಿತು, ಜಾಸ್ಮಿನ್ ಅವರ ಕೊಲೆಗೆ ತಾರಿಕ್​ಜೋತ್ ಸಂಚು ರೂಪಿಸಿದ್ದ, ಕೌರ್ ಅವರ ಹತ್ಯೆ ನಿಜಕ್ಕೂ ಕ್ರೂರವಾಗಿತ್ತು.

ಮತ್ತಷ್ಟು ಓದಿ: Madikeri News: 2 ವರ್ಷದ ಮಗು, ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪತಿ: ಬಂಧನ

ನ್ಯಾಯಾಲಯದಲ್ಲಿ ತನ್ನ ಮಗಳು ಹೇಗೆ ಮೃತಪಟ್ಟಳು ಎಂಬುದನ್ನು ಕೇಳಿ ತಾಯಿ ಕಣ್ಣೀರು ಹಾಕಿದ್ದಾರೆ. ತನ್ನ ಮಗಳನ್ನು ಜೀವಂತ ಸಮಾಧಿ ಮಾಡುವಾಗ ಆಕೆಯ ಬಾಯಿಗೆಲ್ಲಾ ಮಣ್ಣು ಹೋಗಿರಬಹುದಲ್ಲವೇ, ಉಸಿರು ಕಟ್ಟಿರಬಹುದಲ್ಲವೇ ಎಂದು ತಾಯಿ ಹೇಳುತ್ತಿರುವಾಗ ಅಲ್ಲಿದ್ದವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು.

ತಾರಿಕ್​ಜೋತ್ ಈ ಮೊದಲು ತಾನು ಕೊಲೆ ಮಾಡಿಲ್ಲ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದ, ಬಳಿಕ ತಪ್ಪೊಪ್ಪಿಕೊಂಡು ಆಕೆಯನ್ನು ಹೂತು ಹಾಕಿರುವುದಾಗಿ ತಿಳಿಸಿದ್ದ, ಬಳಿಕ ಸಮಾಧಿ ಸ್ಥಳಕ್ಕೆ ತೆರಳಿದಾಗ ಜಾಸ್ಮಿನ್​ಳ ಶೂಗಳು, ಕನ್ನಡಕ, ಬ್ಯಾಡ್ಜ್​ ಎಲ್ಲವೂ ಸಿಕ್ಕಿತ್ತು. ಆಕೆಯ ಕೈಕಾಲು ಕಟ್ಟಿ, ಕತ್ತು ಸೀಳಿ, ಆಕೆಯನ್ನು ಹೂತು ಹಾಕಲಾಗಿತ್ತು. ಜಾಸ್ಮಿನ್ ತಂದೆ-ತಾಯಿಗಾದ ನೋವು ಜೀವನ ಪರ್ಯಂತ ಹಾಗೆಯೇ ಉಳಿಯುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ