ಮೂರು ದಶಕಗಳ ಬಳಿಕ ಗಾಬಾದಲ್ಲಿ ಗಾಬರಿಗೊಂಡ ಕಾಂಗರೂ ಪಡೆ.. ಗಾಬಾ ಹೆಸರು ಎಲ್ಲಿಂದ ಬಂತು?

ಅಥ್ಲೆಟಿಕ್ಸ್​, ಆಸ್ಟ್ರೇಲಿಯನ್​ ರೂಲ್ಸ್​ ಫುಟ್​ಬಾಲ್​, ಬೇಸ್​ಬಾಲ್​, ಸೈಕ್ಲಿಂಗ್​, ರಗ್ಬಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸಾಕ್ಷಿಯಾಗಿರುವ ಈ ಮೈದಾನ ಪ್ರಸ್ತುತ ಅಲ್ಲಿನ ಕ್ವೀನ್ಸ್​ಲ್ಯಾಂಡ್​ ಬುಲ್ಸ್​ ಕ್ರಿಕೆಟ್​ ತಂಡಕ್ಕೆ ತವರು ನೆಲವೆನಿಸಿಕೊಂಡಿದೆ.

ಮೂರು ದಶಕಗಳ ಬಳಿಕ ಗಾಬಾದಲ್ಲಿ ಗಾಬರಿಗೊಂಡ ಕಾಂಗರೂ ಪಡೆ.. ಗಾಬಾ ಹೆಸರು ಎಲ್ಲಿಂದ ಬಂತು?
ಗಾಬಾ ಮೈದಾನದ ಒಂದು ದೃಶ್ಯ
Follow us
Skanda
|

Updated on:Jan 20, 2021 | 11:23 AM

ಭಾರತೀಯ ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಇಂದು ಅತ್ಯಂತ ಸಂಭ್ರಮದ ದಿನ. ಐತಿಹಾಸಿಕ ಬಾರ್ಡರ್​-ಗಾವಸ್ಕರ್​ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಭಾರತ ಆಸೀಸ್​ ನೆಲದಲ್ಲೇ ನಿಂತು ಸಂಚಲನ ಮೂಡಿಸಿದೆ. ಅನುಭವಿ ಆಟಗಾರರ ಕೊರತೆಯ ನಡುವೆಯೂ, ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿರುವ ‘ಗಾಬಾ’ ಮೈದಾನದಲ್ಲಿ ಬರೋಬ್ಬರಿ 32 ವರ್ಷಗಳ ನಂತರ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿರುವ ಭಾರತೀಯ ಪಡೆ ಎಲ್ಲರ ಹೃದಯ ಗೆದ್ದಿದೆ.

ಈ ಸಂಭ್ರಮದ ಕ್ಷಣದಲ್ಲಿ ಭಾರತೀಯ ತಂಡ ರೋಚಕ ಗೆಲುವು ದಾಖಲಿಸಿರುವ ಮತ್ತು ಮೂರು ದಶಕಗಳ ನಂತರ ಆಸೀಸ್​ ಆಟಗಾರರ ಸೋಲಿಗೆ ಸಾಕ್ಷಿಯಾಗಿರುವ ಗಾಬಾ ಮೈದಾನದ ಕಿರು ಪರಿಚಯ ನಿಮಗಾಗಿ..

ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ ಪ್ರಾಂತ್ಯದ ಬ್ರಿಸ್ಬೇನ್​ನಲ್ಲಿರುವ ಗಾಬಾ ಕ್ರೀಡಾಂಗಣ ಅತ್ಯಂತ ಪ್ರಮುಖ ಮೈದಾನವೆಂದು ಗುರುತಿಸಿಕೊಂಡಿದೆ. ಗಾಬಾ ಎಂಬ ಹೆಸರು ವೂಲೂನ್​ಗಾಬಾ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು 1895ರಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ.

ಅಥ್ಲೆಟಿಕ್ಸ್​, ಆಸ್ಟ್ರೇಲಿಯನ್​ ರೂಲ್ಸ್​ ಫುಟ್​ಬಾಲ್​, ಬೇಸ್​ಬಾಲ್​, ಸೈಕ್ಲಿಂಗ್​, ರಗ್ಬಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸಾಕ್ಷಿಯಾಗಿರುವ ಈ ಮೈದಾನ ಪ್ರಸ್ತುತ ಅಲ್ಲಿನ ಕ್ವೀನ್ಸ್​ಲ್ಯಾಂಡ್​ ಬುಲ್ಸ್​ ಕ್ರಿಕೆಟ್​ ತಂಡಕ್ಕೆ ತವರು ನೆಲವೆನಿಸಿಕೊಂಡಿದೆ.

1993ರಿಂದ 2005ರ ಅವಧಿಯಲ್ಲಿ ಪುನರ್​ ಅಭಿವೃದ್ಧಿಗೆ ಸಾಕ್ಷಿಯಾಗಿರುವ ಈ ಕ್ರೀಡಾಂಗಣ ಪೂರ್ವದಿಂದ ಪಶ್ಚಿಮಕ್ಕೆ 170.6 ಮೀಟರ್ ಹಾಗೂ ಉತ್ತರದಿಂದ ದಕ್ಷಿಣಕ್ಕೆ 149.9 ಮೀಟರ್​ ವಿಸ್ತೀರ್ಣ ಹೊಂದಿದೆ. ಆಸ್ಟ್ರೇಲಿಯನ್​ ರೂಲ್ಸ್​ ಫುಟ್​ಬಾಲ್​ ವೀಕ್ಷಕರಿಗಾಗಿ ಬೃಹತ್​ ಆಸನ ವ್ಯವಸ್ಥೆ ಹೊಂದಿದ್ದ ಗಾಬಾದಲ್ಲಿ ಈ ಮೊದಲು 42,000 ಜನ ಏಕಕಾಲಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಆದರೆ, 2010ರಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆದು, ನೂತನ ತಂತ್ರಜ್ಞಾನಗಳನ್ನು ಅಳವಡಿಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾವಳಿಗಳಿದ್ದಾಗ36 ಸಾವಿರ ಜನ ಕೂತು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಆಸ್ಟ್ರೇಲಿಯಾ ಫುಟ್​ಬಾಲ್​ ಲೀಗ್​ ಇದ್ದಾಗ 37,478 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಬಹುದಾಗಿದೆ.

ಕ್ರಿಕೆಟ್​ನಲ್ಲಿ ವೇಗದ ಬೌಲಿಂಗ್​ ಮತ್ತು ಬೌನ್ಸಿಂಗ್​ಗೆ ಸಹಕಾರಿಯಾಗಿರುವ ಗಾಬಾವನ್ನು ಮಾರ್ಚ್​ನಿಂದ ಅಕ್ಟೋಬರ್​ ತನಕ ಕ್ರಿಕೆಟ್​ ಪಂದ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ಮೈದಾನದಲ್ಲಿ ಆಸ್ಟ್ರೇಲಿಯಾ ಆಡಿರುವ 55 ಟೆಸ್ಟ್​ ಮ್ಯಾಚ್​ಗಳ ಪೈಕಿ 33ರಲ್ಲಿ ವಿಜೇತವಾಗಿದೆ. 13 ಪಂದ್ಯ ಡ್ರಾ ಮತ್ತು 1 ಪಂದ್ಯ ಟೈ ಆಗಿದ್ದು, 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಪೈಕಿ ಇಂದು ಭಾರತ ನೀಡಿರುವ ಸೋಲಿನ ಆಘಾತ ಕಾಂಗರೂಗಳಿಗೆ 32 ವರ್ಷಗಳ ಬಳಿಕ ನೀಡಿದ್ದಾಗಿದೆ.

ಕುತೂಹಲಕಾರಿ ವಿವರಗಳಿಗಾಗಿ: https://en.wikipedia.org/wiki/The_Gabba#Cricket

ಟೇಸ್ಟಿ ಟೆಸ್ಟ್ | ಕ್ರಿಕೆಟ್​ನ ನಿಜವಾದ ಗಮ್ಮತ್ತು ಇರುವುದೇ ಟೆಸ್ಟ್​ನಲ್ಲಿ ಎಂದು ಮತ್ತೊಮ್ಮೆ ಸಾಬೀತಾಯ್ತು

Published On - 8:08 pm, Tue, 19 January 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು