ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?

| Updated By: KUSHAL V

Updated on: Sep 06, 2020 | 6:25 PM

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ. ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು […]

ತುಂಡು ಉಡುಗೆಯಲ್ಲಿ 2.5 ಗಂಟೆಗಳ ಕಾಲ ಐಸ್ box ಒಳಗೆ ಕೂತ ಹಿಮವಂತ, ಯಾಕೆ?
Follow us on

ಆಸ್ಟ್ರಿಯಾದ ವ್ಯಕ್ತಿಯೊಬ್ಬ ಕಳೆದ ಶನಿವಾರ ಐಸ್ ಕ್ಯೂಬ್ ತುಂಬಿಸಲಾಗಿದ್ದ ಗಾಜಿನ ಪೆಟ್ಟಿಗೆಯೊಳಗೆ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ತಮ್ಮ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಜೋಸೆಫ್ ಕೋಬೆರ್ಲ್ ಎಂಬ ವ್ಯಕ್ತಿ ಈ ಸಾಹಸ ಮಾಡಿದ್ದು, ಐಸ್ ಕ್ಯೂಬ್‌ಗಳಿಂದ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ತಮ್ಮ ಭುಜದವರೆಗೆ ಮುಳುಗಿ 2 ಗಂಟೆ, 30 ನಿಮಿಷ 57 ಸೆಕೆಂಡ್​ಗಳ ಕಾಲ ಕೂತು ನೂತನ ದಾಖಲೆ ನಿರ್ಮಿಸಿದ್ದಾರೆ.

ಪೆಟ್ಟಿಗೆಯನ್ನು ತುಂಬಲು ಸುಮಾರು 200 ಕೆ.ಜಿ ಅಷ್ಟು ಐಸ್ ಕ್ಯೂಬ್‌ಗಳನ್ನು ಬಳಸಲಾಯಿತು. ಮಂಜಿನಗಡ್ಡೆಯ ಸಂಪರ್ಕದಿಂದ ತಮ್ಮ ದೇಹದಲ್ಲಾಗುವ ವ್ಯತ್ಯಯವನ್ನು ನಿಯಂತ್ರಿಸಲು ಸಕಾರಾತ್ಮಕ ಭಾವನೆಗಳ ಕಡೆಗೆ ಗಮನ ಹರಿಸುತ್ತೇನೆ ಎಂದು ಜೋಸೆಫ್​ ತಿಳಿಸಿದ್ದಾರೆ.

ಜೋಸೆಫ್​ ತನ್ನ 2019 ರಲ್ಲಿ ಮಾಡಿದ್ದ ದಾಖಲೆಯನ್ನು 30 ನಿಮಿಷಗಳ ಅಂತರದಿಂದ ಮುರಿದಿದ್ದಾರೆ. ಮುಂದಿನ ವರ್ಷ ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಕೋಬರ್ಲ್ ತನ್ನ 2020ರ ದಾಖಲೆಯನ್ನು ಮುರಿಯಲು ಆಗಲೇ ಪ್ಲಾನ್​ ಹಾಕಿದ್ದಾನೆ. ವಿಶೇಷವೆಂದರೆ ಈ ಸಾಹಸ ಮಾಡುವಾಗ ಜೋಸೆಫ್​ ದರಿಸಿದ್ದು ಕೇವಲ ಒಂದು ತುಂಡು ಉಡುಗೆಯನ್ನಷ್ಟೆ.

Published On - 6:25 pm, Sun, 6 September 20