ಒಂದು ಕೈಗೆ ಇಲ್ಲ ಬಲ, ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ

75ರ ಹರೆಯದ ರಶ್ದಿ ಅವರ ಗಾಯಗಳು ತೀವ್ರವಾಗಿದೆ. ಅವರು "ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ" ಎಂದು ರಶ್ದಿಯವರ ಸಾಹಿತ್ಯಿಕ ಏಜೆಂಟ್ ಆಂಡ್ರ್ಯೂ ವೈಲ್ ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್‌ಗೆ...

ಒಂದು ಕೈಗೆ ಇಲ್ಲ ಬಲ, ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ
ಸಲ್ಮಾನ್ ರಶ್ದಿ
Edited By:

Updated on: Oct 23, 2022 | 9:18 PM

ಆಗಸ್ಟ್ ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್ ನಗರದಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ಲೇಖಕ ಸಲ್ಮಾನ್ ರಶ್ದಿ (Salman Rushdie) ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ದುಷ್ಕರ್ಮಿಯೊಬ್ಬ ವೇದಿಕೆ ಮೇಲಿದ್ದ ರಶ್ದಿ ಕುತ್ತಿಗೆ ಮತ್ತು ತಲೆ ಮತ್ತು ದೇಹದ ಇತರ ಭಾಗಗಳಿಗೆ ಹಲವು ಬಾರಿ ಇರಿದಿದ್ದ. ಗಂಭೀರ ಗಾಯಗೊಂಡ ರಶ್ದಿ ಚೇತರಿಸಿಕೊಂಡಿದ್ದರೂ ಅವರು ಕಣ್ಣಿನ ದೃಷ್ಟಿ ಮತ್ತು ಕೈಯಲ್ಲಿನ ಬಲ ಕಳೆದುಕೊಂಡಿದ್ದಾರೆ ಎಂದು ಅವರ ಏಜೆಂಟ್ ಹೇಳಿದ್ದಾರೆ. ತನ್ನ ಕಾದಂಬರಿ ದಿ ಸೈಟಾನಿಕ್ ವರ್ಸಸ್‌ಗಾಗಿ ಮರಣದಂಡನೆಯನ್ನು ಎದುರಿಸಿದ ಭಾರತೀಯ ಸಂಜಾತ ಬ್ರಿಟಿಷ್ ಬರಹಗಾರ ರಶ್ದಿಗೆ ದುರ್ಷರ್ಮಿ ಸುಮಾರು 12 ಬಾರಿ ಇರಿದಿದ್ದಾನೆ. ಆದರೆ ಎಷ್ಟು ಗಾಯಗಳಾಗಿತ್ತು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

75ರ ಹರೆಯದ ರಶ್ದಿ ಅವರ ಗಾಯಗಳು ತೀವ್ರವಾಗಿದೆ. ಅವರು “ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ” ಎಂದು ರಶ್ದಿಯವರ ಸಾಹಿತ್ಯಿಕ ಏಜೆಂಟ್ ಆಂಡ್ರ್ಯೂ ವೈಲ್ ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್‌ಗೆ ಹೇಳಿದ್ದಾರೆ.
ರಶ್ಮಿ ಕುತ್ತಿಗೆಯಲ್ಲಿ ಮೂರು ಗಂಭೀರ ಗಾಯಗಳಿದ್ದವು ಎಂದು ವೈಲಿ ಹೇಳಿದರು.

ಕೈಯಲ್ಲಿ ನರಗಳು ಕತ್ತರಿಸಿದ ಕಾರಣ ಒಂದು ಕೈ ನಿಷ್ಕ್ರಿಯವಾಗಿದೆ. ಅವರ ಎದೆ ಮತ್ತು ತಲೆಯಲ್ಲಿ ಸುಮಾರು 15 ಗಾಯಗಳಿವೆ. ಆದ್ದರಿಂದ, ಇದು ಮಾರಣಾಂತಿಕ ದಾಳಿ ಎಂದ ವೈಲಿ, ರಶ್ದಿ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲಿಲ್ಲ. ಹದಿ ಮತರ್ ಎಂಬ 24 ವರ್ಷದ ಯುವಕನನ್ನು ದಾಳಿಕೋರ ಎಂದು ಗುರುತಿಸಲಾಗಿದೆ. ದಾಳಿಯ ನಂತರ, ಇರಾನ್ ದಾಳಿಕೋರನೊಂದಿಗೆ ನಮಗೆ ಯಾವುದೇ ಸಂಬಂಧ ಇಲ್ಲ ಎಂದಿತ್ತು.