AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಮರು ಆಯ್ಕೆಯಾದ ಷಿ ಜಿನ್​ಪಿಂಗ್ ಮೊದಲ ಮಾತಿನಲ್ಲಿ ತುಂಬಿತ್ತು ಮಹತ್ವಾಕಾಂಕ್ಷೆ

Xi Jinping: ಚೀನಾದ ಸಶಸ್ತ್ರ ಪಡೆಗಳನ್ನು ನಿರ್ವಹಿಸುವ ಅಧಿಕಾರ ಹೊಂದಿರುವ ‘ಸೆಂಟ್ರಲ್ ಮಿಲಿಟರಿ ಕಮಿಷನ್’ ಮುಖ್ಯಸ್ಥರಾಗಿಯೂ ಷಿ ಜಿನ್​ಪಿಂಗ್ ಮರುನೇಮಕವಾಗಿದ್ದಾರೆ.

3ನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಮರು ಆಯ್ಕೆಯಾದ ಷಿ ಜಿನ್​ಪಿಂಗ್ ಮೊದಲ ಮಾತಿನಲ್ಲಿ ತುಂಬಿತ್ತು ಮಹತ್ವಾಕಾಂಕ್ಷೆ
ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್
TV9 Web
| Edited By: |

Updated on:Oct 23, 2022 | 12:16 PM

Share

ಬೀಚಿಂಗ್: ಚೀನಾ ಅಧ್ಯಕ್ಷರಾಗಿ ಷಿ ಜಿನ್​ಪಿಂಗ್ (Xi Jinping) ಸತತ 3ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಭಾನುವಾರ (ಅ 23) ನಡೆದ ಈ ಐತಿಹಾಸಿಕ ಬೆಳವಣಿಗೆಯ ನಂತರ ಮಾತನಾಡಿದ ಅವರು, ‘ಜಗತ್ತಿಗೆ ಈಗ ಚೀನಾದ ಅಗತ್ಯವಿದೆ’ ಎಂದು ಘೋಷಿಸಿದರು. ಇದು ಒಬ್ಬ ವ್ಯಕ್ತಿಯಾಗಿ ಅವರ ಮತ್ತು ಒಂದು ದೇಶವಾದ ಚೀನಾ ವಿಶ್ವದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಹಾತೊರೆಯುತ್ತಿರುವುದರ ಪ್ರತೀಕ ಎಂದೇ ವಿಶ್ಲೇಷಿಸಲಾಗುತ್ತಿದೆ. ತಮ್ಮ ಹಲವು ವಿಶ್ವಾಸಪಾತ್ರರನ್ನೂ ಷಿ ಜಿನ್​ಪಿಂಗ್ ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ತಂದಿದ್ದಾರೆ. ಆಧುನಿಕ ಚೀನಾದ ಇತಿಹಾಸದಲ್ಲಿ ಮಾವೋ ತ್ಸೆ ತುಂಗ್ ಅವರ ನಂತರ ಅತ್ಯಂತ ಪ್ರಭಾವಿ ಮತ್ತು ಸುದೀರ್ಘ ಅವಧಿಗೆ ಚೀನಾದ ಅಧ್ಯಕ್ಷರಾದ ಶ್ರೇಯಕ್ಕೂ ಷಿ ಜಿನ್​ಪಿಂಗ್ ಪಾತ್ರರಾಗಿದ್ದಾರೆ. ಇದೀಗ ಅವರಿಗೆ 69ರ ಹರೆಯ.

‘ಜಗತ್ತು ಇಲ್ಲದೇ ಚೀನಾ ಪ್ರಗತಿ ಸಾಧಿಸುವುದಿಲ್ಲ, ಮತ್ತು ಜಗತ್ತಿಗೂ ಚೀನಾ ಬೇಕಿದೆ. ಸತತ 40 ವರ್ಷಗಳ ಸುಧಾರಣೆ ಮತ್ತು ಮುಕ್ತ ಆರ್ಥಿಕತೆಯ ಪರಿಶ್ರಮದಿಂದ ಚೀನಾ ಎರಡು ಅದ್ಭುತಗಳನ್ನು ಸಾಧಿಸಿದೆ. ಕ್ಷಿಪ್ರ ಆರ್ಥಿಕ ಪ್ರಗತಿ ಮತ್ತು ದೀರ್ಘಾವಧಿ ಸಾಮಾಜಿಕ ಸ್ಥಿರತೆಗೆ ಚೀನಾ ಮಾದರಿ ಎನಿಸಿದೆ’ ಎಂದು ಅವರು ಹೇಳಿದರು,.

‘ನಮ್ಮ ಪಕ್ಷ ಮತ್ತು ನಮ್ಮ ಜನರ ವಿಶ್ವಾಸ ಕಾಪಾಡಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಚೀನಾದ ಸಶಸ್ತ್ರ ಪಡೆಗಳನ್ನು ನಿರ್ವಹಿಸುವ ಅಧಿಕಾರ ಹೊಂದಿರುವ ‘ಸೆಂಟ್ರಲ್ ಮಿಲಿಟರಿ ಕಮಿಷನ್’ ಮುಖ್ಯಸ್ಥರಾಗಿಯೂ ಷಿ ಜಿನ್​ಪಿಂಗ್ ಮರುನೇಮಕವಾದ ಘೋಷಣೆಯನ್ನೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ಷಿ ಜಿನ್​ಪಿಂಗ್ ಮತ್ತೊಮ್ಮೆ ಅಧ್ಯಕ್ಷರಾಗಿರುವುದನ್ನು ಮುಂದಿನ ಮಾರ್ಚ್​ನಲ್ಲಿ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಸರ್ಕಾರವು ಘೋಷಿಸಲಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ 2,300 ಪ್ರತಿನಿಧಿಗಳು ಒಂದು ವಾರದ ಕಾಲ ನಡೆಸಿದ ಸಭೆಯ ನಂತರ ಷಿ ಜಿನ್​ಪಿಂಗ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಲಾಯಿತು. ಇದೇ ವೇಳೆ ಸರ್ಕಾರದ ಉನ್ನತ ನಾಯಕತ್ವದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನೂ ಅನುಮೋದಿಸಲಾಯಿತು.

10 ವರ್ಷಗಳ ಹಿಂದೆ ಚೀನಾ ಅಧ್ಯಕ್ಷರಾಗಿ ಆಯ್ಕೆಯಾದ ಷಿ ಜಿನ್​ಪಿಂಗ್ ಎಲ್ಲ ಅಧಿಕಾರವನ್ನು ತಮ್ಮ ಸುತ್ತಲೂ ಕೇಂದ್ರೀಕೃತಗೊಳ್ಳುವಂತೆ ನೋಡಿಕೊಂಡರು. ಅಧ್ಯಕ್ಷ ಗಾದಿಗೆ ಇದ್ದ 2 ಅವಧಿಗಳ ಮಿತಿಯನ್ನು 2018ರಲ್ಲಿ ತೆಗೆದುಹಾಕುವಲ್ಲಿ ಯಶಸ್ವಿಯಾದರು. ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಿ ಚೀನಾ ಅವರ ನಾಯಕತ್ವದಲ್ಲಿ ಹೊರಹೊಮ್ಮಿತು. ಸೇನೆಗೆ ಬಲ ತುಂಬಲೆಂದು ರಕ್ಷಣಾ ವೆಚ್ಚವನ್ನೂ ಅಗಾಧವಾಗಿ ಹೆಚ್ಚಿಸಲಾಯಿತು. ಜಾಗತಿಕ ಮಟ್ಟದಲ್ಲಿ ಚೀನಾ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸಿತು.

ದೇಶೀಯವಾಗಿ ಅವರಿಗೆ ಯಾವುದೇ ರಾಜಕೀಯ ಎದುರಾಳಿಯಿಲ್ಲ. ಆದರೆ ಆರ್ಥಿಕ ಕ್ಷೇತ್ರದಲ್ಲಿ ಅವರ ಎದುರು ಹತ್ತಾರು ಸವಾಲುಗಳಿವೆ. ಸಾಲದಿಂಧ ಜರ್ಝರಿತವಾಗಿರುವ ಚೀನಾದ ಆರ್ಥಿತಕೆ ಕುಸಿಯುತ್ತಿದೆ. ಠೇವಣಿ ಹಿಂಪಡೆಯುವ ಹಾಗೂ ಸಾಲ ಮರುಪಾವತಿಗೆ ನಿರಾಕರಿಸುವ ಗ್ರಾಹಕರ ಒತ್ತಡದಿಂದ ಬ್ಯಾಂಕ್​ಗಳು ಹೈರಾಣಾಗಿವೆ. ಈ ಸವಾಲುಗಳನ್ನು ಚೀನಾ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Published On - 11:30 am, Sun, 23 October 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ