ರಾಯಚೂರು: ಮೊಹಮ್ಮದ್ ಅಜರುದ್ದೀನ್ ಬರೋದು ತಡವಾಯ್ತು, ಕೈಯಲ್ಲಿ ಬ್ಯಾಟು-ಬಾಲು ಹಿಡಿದ ಪೊಲೀಸರು
ಇಲ್ಲಿ ಬ್ಯಾಟ್ ಮಾಡುತ್ತಿರುವವರು ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಕಾಂಬ್ಳೆ ಅಂತೆ. ಕಾಲೇಜು ದಿನಗಳಲ್ಲಿ ಅವರಿಗೆ ಕ್ರಿಕೆಟ್ ಆಡಿದ ಅನುಭವ ಇರುವಂತಿದೆ. ಅವರು ಬ್ಯಾಟ್ ಬೀಸುವ ಶೈಲಿಯನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ. ಕ್ರಿಕೆಟ್ ಟೂರ್ನಿಗಳನ್ನು ಉದ್ಘಾಟಿಸುವ ನಮ್ಮ ರಾಜಕಾರಣಿಗಳು ಬ್ಯಾಟ್ ಬೀಸುವುದನ್ನು ನೋಡಿದ್ದೀರಲ್ಲ? ಸೌದೆ ಸೀಳುವವನು ಕೈಯಲ್ಲಿ ಕೊಡಲಿ ಹಿಡಿದಂತೆ ಇವರು ಬ್ಯಾಟ್ ಹಿಡಿದಿರುತ್ತಾರೆ! ಬಾಲ್ ಕಂಡಾಗ ಕಣ್ಣುಮುಚ್ಚಿ ಬ್ಯಾಟ್ ಬೀಸುತ್ತಾರೆ!!
ರಾಯಚೂರು, ಜೂನ್ 14: ಇದೇನು, ಕ್ರಿಕೆಟ್ ಆಟಗಾರರ ಯೂನಿಫಾರ್ಮ್ ಬದಲಾಯಿತೇ ಅಂತ ಅಂದ್ಕೋಬೇಡಿ ಮಾರಾಯ್ರೇ, ಇಲ್ಲಿ ಕ್ರಿಕೆಟ್ ಆಡ್ತಿರೋರು ಪೊಲೀಸರೇ ಹೊರತು ಆಟಗಾರರಲ್ಲ. ಅಸಲಿಗೆ ಇವರು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಬಂದೋಬಸ್ತ್ಗಾಗಿ ನಿಯೋಜನೆಗೊಂಡಿರುವ ಪೊಲೀಸರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಕ್ರಿಕೆಟ್ ಟೂರ್ನಮೆಂಟ್ವೊಂದರ ಪ್ರಶಸ್ತಿ ವಿತರಣೆಯನ್ನು ಮಾಜಿ ಅಕರ್ಷಕ ಬ್ಯಾಟರ್ ಮಾಡಬೇಕಿತ್ತು. ಅದರೆ ಅವರು ಬರೋದು ತಡವಾಗಿದ್ದರಿಂದ ಮತ್ತೇನು ಮಾಡೋದು ಅಂತ ಪೊಲೀಸರು ಟೈಂ ಪಾಸ್ಗಾಗಿ ಕ್ರಿಕೆಟ್ ಆಡಿದರು.
ಇದನ್ನೂ ಓದಿ: Virat Kohli: ಕೊಹ್ಲಿ ಬಗ್ಗೆ ಬಹುದೊಡ್ಡ ಹೇಳಿಕೆ ನೀಡಿದ ಮೊಹಮ್ಮದ್ ಅಜರುದ್ದೀನ್: ಏನಂದ್ರು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos