Ballistic Missile: ದಕ್ಷಿಣ ಕೊರಿಯಾದಲ್ಲಿ ನೆಲಕ್ಕೆ ಅಪ್ಪಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ, ಕೊರಿಯಾ ಜನರಲ್ಲಿ ಭೀತಿ

ಸಿಯೋಲ್​ನಲ್ಲಿ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯು ವಿಫಲವಾಗಿದ್ದು ಅದು ನೆಲಕ್ಕೆ ಅಪ್ಪಳಿಸಿದೆ. ಇದೀಗ ಇದು ದಕ್ಷಿಣ ಕೊರಿಯಾದ ನಗರದಲ್ಲಿ ಭೀತಿಯನ್ನು ಹುಟ್ಟುಹಾಕಿದೆ.

Ballistic Missile: ದಕ್ಷಿಣ ಕೊರಿಯಾದಲ್ಲಿ ನೆಲಕ್ಕೆ ಅಪ್ಪಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ,  ಕೊರಿಯಾ ಜನರಲ್ಲಿ ಭೀತಿ
Ballistic missile
Edited By:

Updated on: Oct 05, 2022 | 3:03 PM

ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯು ವಿಫಲವಾಗಿದ್ದು ಅದು ನೆಲಕ್ಕೆ ಅಪ್ಪಳಿಸಿದೆ. ಇದೀಗ ಇದು ದಕ್ಷಿಣ ಕೊರಿಯಾದ ನಗರದಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಇದರಿಂದ ಆ ಪ್ರದೇಶದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಉತ್ತರ ಕೊರಿಯಾ ಮಂಗಳವಾರ ಜಪಾನ್‌ನ ಮೇಲೆ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (IRBM) ಅನ್ನು ಹಾರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಭದ್ರತಾ ಮಿತ್ರರಾಷ್ಟ್ರಗಳಾದ ಸಿಯೋಲ್ ಮತ್ತು ವಾಷಿಂಗ್ಟನ್ ಕ್ಷಿಪಣಿ ಉಡಾವಣೆ ಸೇರಿದಂತೆ ಅನೇಕ ಜಂಟಿ ಅಭ್ಯಾಸಗಳನ್ನು ನಡೆಸಿವೆ.

ದಕ್ಷಿಣ ಕೊರಿಯಾದ ಸೇನೆಯು ಮಂಗಳವಾರ ತಡರಾತ್ರಿ ಹ್ಯುನ್‌ಮೂ-2 ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿತು ಆದರೆ ಅದು ಅಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಮತ್ತು ಉಡಾವಣೆಯಾದ ಸ್ವಲ್ಪ ಸಮಯದಲ್ಲೇ ಪತನಗೊಂಡಿತು. ಕ್ಷಿಪಣಿಯ ಪ್ರೊಪೆಲೆಂಟ್‌ಗೆ ಬೆಂಕಿ ತಗುಲಿತು ಆದರೆ ಅದರ ಮುಖ್ಯ ಭಾಗ ಇಂಜಿನ್ (ಸಿಡಿತಲೆ) ಸ್ಫೋಟಗೊಳ್ಳಲಿಲ್ಲ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಅಧಿಕಾರಿಯೊಬ್ಬರು ಯೋನ್‌ಹಾಪ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ಪೂರ್ವ ಕರಾವಳಿಯಲ್ಲಿ ಗ್ಯಾಂಗ್‌ನ್ಯೂಂಗ್‌ಗೆ ಸಮೀಪವಿರುವ ವಾಯುಪಡೆಯ ನೆಲೆಯ ಸಮೀಪದಲ್ಲಿದೆ ಎಂದು ಬಳಕೆದಾರರು ಹೇಳಿದ ಪ್ರದೇಶದಲ್ಲಿ ಜ್ವಾಲೆಯ ಚೆಂಡನ್ನು ತರಹದ ಒಂದು ಚೆಂಡು ಪತ್ತೆಯಾಗಿದೆ.

ಇದನ್ನು ಓದಿ: ಯುದ್ಧವೊಂದೇ ಪರಿಹಾರವಲ್ಲ, ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಿ; ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ

ಮೊದಲಿಗೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ ಏಕೆಂದರೆ ಅಂತಹ ತರಬೇತಿಯ ಬಗ್ಗೆ ನಾವು ಮಿಲಿಟರಿಯಿಂದ ಯಾವುದೇ ಸೂಚನೆಯನ್ನು ಸ್ವೀಕರಿಸಲಿಲ್ಲ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಯುದ್ಧ ನಡೆಯುತ್ತದೆ ಎಂದು ನಾನು ಭಾವಿಸಿದೆವು ಆದರೆ ಅದು ಮಿಲಿಟರಿ ತರಬೇತಿಯಾಗಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಟ್ವಿಟರ್‌ನಲ್ಲಿ ಒಬ್ಬ ಬಳಕೆದಾರರು ಹೇಳಿದ್ದಾರೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಮತ್ತು ಅಪಘಾತದ ಕಾರಣವನ್ನು ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.

Published On - 3:03 pm, Wed, 5 October 22