Ukraine War: ಯುದ್ಧವೊಂದೇ ಪರಿಹಾರವಲ್ಲ, ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಿ; ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ. ಸಂಘರ್ಷಕ್ಕೆ ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೂರವಾಣಿಯಲ್ಲಿ ಮಾತನಾಡಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು (Russia War) ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸುವ ಅಗತ್ಯವನ್ನು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ವೈಷಮ್ಯವನ್ನು ಆದಷ್ಟು ಬೇಗ ಅಂತ್ಯಗೊಳಿಸಲು ಉಭಯ ದೇಶಗಳು ಪರಸ್ಪರ ಶಾಂತಿಯುತವಾಗಿ ಮಾತುಕತೆ ನಡೆಸಬೇಕು, ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸಬೇಕು. ಸಂಘರ್ಷಕ್ಕೆ ಮಿಲಿಟರಿ ಯುದ್ಧವೇ ಪರಿಹಾರವಲ್ಲ ಎಂದು ಮೋದಿ ಸಲಹೆ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು, ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಎರಡೂ ದೇಶಗಳು ಗೌರವಿಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Russia Ukraine War: ರಷ್ಯಾ ವಿರುದ್ಧ ಮತ್ತೊಮ್ಮೆ ಉಕ್ರೇನ್ಗೆ ಮುನ್ನಡೆ, ಉಪವಾಸ ಬೀಳಲಿದೆ ದಾಳಿಗೆ ಬಂದ ರಷ್ಯನ್ ಸೇನೆ
ಪರಮಾಣು ದಾಳಿಯಿಂದ ಜನರ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗುತ್ತದೆ. ಹೀಗಾಗಿ, ಅದಕ್ಕೆ ಅವಕಾಶ ನೀಡಬೇಡಿ. ನ್ಯೂಕ್ಲಿಯರ್ ದಾಳಿ ಮುಂದೆ ದುರಂತದ ಪರಿಣಾಮಗಳನ್ನು ಉಂಟುಮಾಡಬಹುದು. ಸಂಘರ್ಷಕ್ಕೆ ಯಾವುದೇ ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
PM Modi held a telephonic conversation today with Ukrainian President Volodymyr Zelenskyy, discussed the ongoing conflict in Ukraine.
PM Modi reiterated his call for early cessation of hostilities and the need to pursue the path of dialogue and diplomacy: PMO
(file pics) pic.twitter.com/VZY4hfJ3SU
— ANI (@ANI) October 4, 2022
ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ದೇಶ ಅಂತಿಮ ಕ್ಷಣದವರೆಗೂ ರಷ್ಯಾದ ವಿರುದ್ಧ ಹೋರಾಡಲಿದೆ. ಆದರೆ, ಮಾತುಕತೆಯ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ನಮ್ಮ ದೇಶ ಬದ್ಧವಾಗಿದೆ. ರಷ್ಯಾ ನಮ್ಮ ಜೊತೆಗೆ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ukraine war ಉಕ್ರೇನ್‌ನ 4 ಪ್ರದೇಶ ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ
ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತ ನೀಡಿದ ಬೆಂಬಲಕ್ಕಾಗಿ ವೊಲೊಡಿಮಿರ್ ಝೆಲೆನ್ಸ್ಕಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗಲೂ ಇದು ಯುದ್ಧದ ಸಮಯವಲ್ಲ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ವೊಲೊಡಿಮಿರ್ ಝೆಲೆನ್ಸ್ಕಿ ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದರು.