ಬ್ರಿಟನ್ನಿನ ಖ್ಯಾತ ಸಸ್ಯಶಾಸ್ತ್ರಜ್ಞ ದಂಪತಿಯನ್ನು ಭೀಕರವಾಗಿ ಕೊಂದು ದೇಹಗಳನ್ನು ಮೊಸಳೆಗಳಿಗೆ ಆಹಾರವಾಗಿ ಎಸೆಯಲಾಗಿತ್ತು!
ಹಾಗೊಮ್ಮೆ ಕಾಡನ್ನು ಅಲೆಯುತ್ತಿದ್ದಾಗಲೇ ಅವರು ತಮ್ಮ ಬದುಕಿನ ದಾರುಣ ಅಂತ್ಯ ಕಂಡರೆಂದು ಹೇಳಲಾಗುತ್ತಿದೆ. ಅವರನ್ನು ಟಾರ್ಗೆಟ್ ಮಾಡಿ ಅಪಹರಿಸಿ, ಜೀವ ಹೋಗುವವರೆಗೆ ಅವರನ್ನು ಹೊಡೆದು-ಬಡಿದು ಸಾಯಿಸಿದ ನಂತರ ದೇಹಗಳನ್ನು ನರಭಕ್ಷಕ ಮೊಸಳೆಗಳ ಗುಂಪಿಗೆ ಆಹಾರವಾಗಿ ಎಸೆಯಲಾಗಿತ್ತು.
ವೃದ್ಧ ಬ್ರಿಟಿಷ್ ದಂಪತಿಯೊಂದು 2018ರಲ್ಲಿ ದಕ್ಷಿಣ ಆಫ್ರಿಕದ ಕಾದಿಟ್ಟ ಪ್ರದೇಶವೊಂದರಲ್ಲಿ ಅಪೂರ್ವವಾದ ಬೀಜಗಳ (ಸೀಡ್ಸ್) ಹುಡುಕಾಟದಲ್ಲಿದ್ದಾಗ ನಿರ್ದಯಿ ಕಟುಕರ ಒಂದು ಗುಂಪು ಅವರನ್ನು ಭೀಕರವಾಗಿ ಹತ್ಯೆಗೈದು ದೇಹದ ಭಾಗಗಳನ್ನು ಮೊಸಳೆಗಳಿಗೆ ಆಹಾರವಾಗಿ ಎಸೆದಿತ್ತು ಅಂತ ದಕ್ಷಿಣ ಆಫ್ರಿಕದ ಕೋರ್ಟ್ ವೊಂದಕ್ಕೆ ತಿಳಿಸಲಾಗಿದೆ. ಗೌರವಾನ್ವಿತ ಸಸ್ಯಶಾಸ್ತ್ರಜ್ಞರಾಗಿದ್ದ ರಾಡ್ ಸಾಂಡರ್ಸ್ (Rod Saunders) (74) ಮತ್ತು ಅವರ ಪತ್ನಿ, 63-ವರ್ಷ-ವಯಸ್ಸಿನವರಾಗಿದ್ದ ರಾಚೆಲ್ ಸಾಂಡರ್ಸ್ (Rachel Saunders) ಭರ್ಜರಿಯಾಗಿ ಪ್ರಗತಿ ಹೊಂದುತ್ತಿದ್ದ ತಮ್ಮ ಮೇಲ್-ಆರ್ಡರ್ ಬಿಸಿನೆಸ್ ಗಾಗಿ (mail-order business) ವರ್ಷದ 6 ತಿಂಗಳುಗಳನ್ನು ಅರಣ್ಯ ಪ್ರದೇಶಗಳಲ್ಲಿನ ಗುಡ್ಡಗಾಡು ಪ್ರದೇಶಗಳು ಮತ್ತು ಕಾಡುಮೇಡುಗಳಲ್ಲಿ ಅಲೆಯುತ್ತಾ ಕಳೆಯುತ್ತಿದ್ದರು.
ಹಾಗೊಮ್ಮೆ ಕಾಡನ್ನು ಅಲೆಯುತ್ತಿದ್ದಾಗಲೇ ಅವರು ತಮ್ಮ ಬದುಕಿನ ದಾರುಣ ಅಂತ್ಯ ಕಂಡರೆಂದು ಹೇಳಲಾಗುತ್ತಿದೆ. ಅವರನ್ನು ಟಾರ್ಗೆಟ್ ಮಾಡಿ ಅಪಹರಿಸಿ, ಜೀವ ಹೋಗುವವರೆಗೆ ಅವರನ್ನು ಹೊಡೆದು-ಬಡಿದು ಸಾಯಿಸಿದ ನಂತರ ಅವರ ದೇಹಗಳನ್ನು ನರಭಕ್ಷಕ ಮೊಸಳೆಗಳ ಗುಂಪಿಗೆ ಆಹಾರವಾಗಿ ಎಸೆಯಲಾಗಿತ್ತು.
ಆದರೆ ಪ್ರಾಯಶಃ ಅವರ ದೇಹಗಳು ಕೊಳೆತು ನಾರುತ್ತಿದ್ದ ಕಾರಣ ಮೊಸಳೆಗಳು ಅರೆಬರೆಯಾಗಿ ತಿಂದಿದ್ದವು. ನೀರಿನಲ್ಲಿ ಮತ್ತಷ್ಟು ಕೊಳೆತ ಅವರ ದೇಹಗಳನ್ನು ಮೀನುಗಾರರ ಸಹಾಯದಿಂದ ನೀರಿನಿಂದ ಹೊರಗೆತ್ತಲಾಗಿತ್ತು. ಗುರುತಿಸಲು ದುಸ್ಸಾಧ್ಯವಾದ ದೇಹದ ಅವಶೇಷಗಳನ್ನು ಶವಾಗಾರದಲ್ಲಿ ಇಡಲಾಗಿತ್ತು. ದಂಪತಿ ಕಾಣೆಯಾದ ಬಗ್ಗೆ ದೂರು ದಾಖಲಾದ ಬಳಿಕ ಹಲವಾರು ತಿಂಗಳುವರೆಗೆ ಅವರ ಹುಡುಕಾಟ ನಡೆಸಿದ ಪೊಲೀಸರು ತಮ್ಮ ಎಲ್ಲ ಪ್ರಯತ್ನಗಳು ವಿಫಲವಾದಾಗ ಗುರುತು ಸಿಗದೆ ಶವಾಗಾರಗಳಲ್ಲಿ ಉಳಿಯುವ ದೇಹಗಳ ಡಿಎನ್ ಎ ಟೆಸ್ಟ್ ನಡೆಸಲು ನಿರ್ಧರಿಸಿದರು. ಆಗಲೇ ರಾಡ್ ಮತ್ತು ರಾಚೆಲ್ ಅವರು ಗುರುತು ಸಿಕ್ಕಿದ್ದು.
ಬೀಜಗಳ ಬೇಟೆಗಾಗಿ ಕಾಡುಗಳನ್ನು ಸುತ್ತುತ್ತಿದ್ದ ಬೊಟ್ಯಾನಿಸ್ಟ್ ಗಳ ಹತ್ಯೆಗೆ ಸಂಬಂಧಿಸಿದಂತೆ ಪೊಲೀರು ನಾಲ್ವರನ್ನು ಬಂಧಿಸಿದ್ದು ಮೂವರ ವಿರುದ್ಧ ಹತ್ಯೆ, ಅಪಹರಣ, ದರೋಡೆ ಮತ್ತು ಕಳುವು ಆರೋಪಗಳನ್ನು ಹೊರಿಸಲಾಗಿದೆ.
ಸಯೀಫುನ್ದೀನ್ ಅಸ್ಲಂ ಡೆಲ್ ವೆಚ್ಚಿಯೊ (39) ಅವನ ಹೆಂಡತಿ 28-ವರ್ಷ-ವಯಸ್ಸಿನ ಬೀಬಿ ಫಾತಿಮಾ ಮತ್ತು ಇವರಿಬ್ಬರಿಗೆ ತಂಗಲು ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ 35-ವರ್ಷ-ವಯಸ್ಸಿನ ಮುಸ್ಸಾ ಅಹ್ಮದ್ ಜಾಕ್ಸನ್ ಅವರ ವಿರುದ್ಧ ಆರೋಪಗಳನ್ನು ಹೊರೆಸಲಾಗಿದೆ, ಆದರೆ ಈ ಮೂವರೂ ಡರ್ಬನ್ ಹೈಕೋರ್ಟ್ ನಲ್ಲಿ ತಾವು ನಿರ್ದೋಷಿಗಳು ಅಂತ ಹೇಳಿದ್ದಾರೆ.
ನಾಲ್ಕನೇ ಆರೋಪಿ ಹತ್ಯೆ, ಅಪಹರಣ ಮೊದಲಾದ ಯಾವುದೇ ಅಪರಾಧದಲ್ಲಿ ಭಾಗಿಯಾಗಿರದೆ ಸಾಂಡರ್ಸ್ ದಂಪತಿಯ ಫೋನ್ ಗಳನ್ನು ಖರೀಸಿದಿಸಿದ್ದರಿಂದ ಬಂಧಿಸಲಾಗಿತ್ತಾದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನು ನಿರ್ಣಾಯಕ ಸಾಕ್ಷ್ಯ ನುಡಿದಿದ್ದರಿಂದ ಅವನ ಶಿಕ್ಷೆಯನ್ನು ಸಸ್ಪೆಂಡ್ ಮಾಡಲಾಗಿತ್ತು.
ದಾರುಣ ಹತ್ಯೆಗೊಳಗಾದ ಸಾಂಡರ್ಸ್ ದಂಪತಿ ಸಾಹಸಪ್ರಿಯರಾಗಿದ್ದರು ಮತ್ತು ಕೇಪ್ ಟೌನ್ ನಗರದಲ್ಲಿ ತಾವು ಕಾಡು-ಮೇಡು, ಪರ್ವತ ಪ್ರದೇಶಗಳಲ್ಲಿ ಅಲೆದು ಸಂಗ್ರಹಿಸಿಕೊಂಡು ಬರುತ್ತಿದ್ದ ಸೀಡ್ ಗಳ ವ್ಯಾಪಾರ ಜೋರಾಗಿ ನಡೆಸುತ್ತಿದ್ದರು. ಅವರ ಕೊನೆಯ ಸಾಹಸಯಾತ್ರೆಯನ್ನು ಡರ್ಬನ್ ಹೈಕೋರ್ಟ್ ಗಮನಕ್ಕೆ ತರಲಾಗಿದೆ. ಅವರು ಕೇಪ್ ಟೌನಲ್ಲಿರುವ ಮನೆಯಿಂದ ಟೊಯೊಟಾ ಲ್ಯಾಂಡ್ ಕ್ರೂಸರ್ ನಲ್ಲಿ ಫೆಬ್ರುವರಿ 5, 2018 ರಂದು ಹೊರಟಿದ್ದರು. ಕೇಪ್ ಟೌನಿಂದ ಸುಮಾರು 900 ಮೈಲಿ ದೂರದಲ್ಲಿರುವ ಕ್ವಾ-ಜುಲು ನತಾಲ್ ನಲ್ಲಿ ಬಿಬಿಸಿ ಡಾಕ್ಯುಮೆಂಟರಿ ಚಿತ್ರ ತಯಾರಿಸುವ ತಂಡವೊಂದನ್ನು ಅವರು ಭೇಟಿಯಾಗಬೇಕಿತ್ತು.
ಡ್ರ್ಯಾಕ್ಸನ್ ಬರ್ಗ್ ಪರ್ವತ ಶ್ರೇಣಿಯಲ್ಲಿ ಅಪರೂಪದ ಗ್ಲಾಡಿಯೋಲಿ ಹೂವಿನ ಬೀಜಗಳನ್ನು ಪತ್ತೆಮಾಡಿದ ಬಳಿಕ ಈ ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞರ ಸಂದರ್ಶನವನ್ನು ಟಿವಿ ಪ್ರಸೆಂಟರ್ ನಿಕ್ ಬೇಲಿ ಅವರು ಗಾರ್ಡನರ್ಸ್ ವರ್ಲ್ಡ್ ಕಾರ್ಯಕ್ರಮಕ್ಕಾಗಿ ನಡೆಸಿದ್ದರು.
ಡರ್ಬನ್ ಹೈಕೋರ್ಟ್ ನಲ್ಲಿ ದಂಪತಿಯ ಭೀಕರ, ಅಮಾನವೀಯ ಪ್ರಕರಣದ ವಿಚಾರಣೆ ಜಾರಿಯಲ್ಲಿದೆ.