78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದ್ವೆ: 60 ವರ್ಷ ಅಂತರವಿದ್ರೂ ಪ್ರೀತಿಗೆ ವಯಸ್ಸು ಬೇಕಿಲ್ಲ ಎಂದ ಜೋಡಿ
ಹದಿನೈದನೇ ವಯಸ್ಸಿನಲ್ಲಿ ಲವ್ನಲ್ಲಿ ಬಿದ್ದ ಯುವತಿಹಯೊಬ್ಬಳು ಅಂತಿಮವಾಗಿ 78 ವರ್ಷದ ಅಜ್ಜನ ಜೊತೆ ಅಧಿಕೃತವಾಗಿ ಸಪ್ತಪದಿ ತುಳಿದಿದ್ದಾಳೆ.
ಪ್ರೀತಿಗೆ ಹೊತ್ತು ಗೊತ್ತಿಲ್ಲ… ..ಪ್ರೀತಿಗೆ ಕಾರಣ ಬೇಕಿಲ್ಲ….ಅಂತ ಕನ್ನಡದ ಜನಪ್ರಿಯ ಹಾಡನ್ನು ನಾವು ಕೇಳಿದ್ದೇವೆ. ಆದ್ರೆ, ಈ ಜೋಡಿ ಪ್ರೀತಿಗೆ ವಯಸ್ಸು ಬೇಕಿಲ್ಲ ಅಂದಿದೆ.
ಹೌದು.. 78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದುವೆ (Marriage). ಇಬ್ಬರ ನಡುವೆ ಬರೋಬ್ಬರಿ 60 ವರ್ಷ ಅಂತರವಿದ್ದರೂ ಇವರ ಪ್ರೀತಿಗೆ ವಯಸ್ಸು ಅಡ್ಡಿಯಾಗದೇ ನಿರಂತರವಾಗಿ ಸಾಗಿ ಈಗ ಮದುವೆ ಹಂತಕ್ಕೂ ಬಂದಿದೆ. ಅಚ್ಚರಿ ಅನ್ನಿಸಿದರು ಸತ್ಯ.. 78 ವರ್ಷದ ನಿವೃತ್ತ ರೈತ ಅಜ್ಜನನ್ನು 3 ವರ್ಷ ಪ್ರೀತಿಸಿ(Love) 18 ತುಂಬಿದ ಬಳಿಕ ಮದುವೆಯಾಗಿದ್ದಾಳೆ. ಮದುವೆಗೂ ಮುಂಚೆ ಮೂರು ವರುಷ ಪ್ರೀತಿಸಿದ್ದಾಳೆ. ಅಂದ್ರೆ ಈಕೆಗೆ ಆಗ ಇನ್ನೂ 15 ವಯಸ್ಸು. ಹದಿನೈದು ವರ್ಷದಿಂದಲೇ ಅಜ್ಜನ ಲವ್ನಲ್ಲಿ ಬಿದ್ದಿದ್ದ ಯುವತಿ ಇದೀಗ ಅಧಿಕೃತವಾಗಿ ಹಸೆಮಣೆ ಏರಿದ್ದಾಳೆ.
ಇದನ್ನೂ ಓದಿ: ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ, ಎಕ್ಸ್-ರೇ ನೋಡಿ ಬೆಚ್ಚಿಬಿದ್ದ ವೈದ್ಯರು!
18 ವರ್ಷದ ಹಲೀಮಾ ಅಬ್ದುಲ್ಲಾ ಮತ್ತು ರಶಾದ್ ಮಂಗಾಕೋಪ್ ಪರಸ್ಪರ ಪ್ರೀತಿಸಿ ಇಷ್ಟಪಟ್ಟು ಇಬ್ಬರೂ ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ ಒಪ್ಪಿಕೊಂಡಿವೆ. ಸಧ್ಯ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಚ್ಚರಿಗೊಂಡಿದ್ದಾರೆ.
ಫಿಲಿಪೈನ್ಸ್ ನಿವಾಸಿಯಾಗಿರುವ ರಶಾದ್ ಮತ್ತು ಹಲೀಮಾ ಜೋಡಿ ಮೊದಲು ಭೇಟಿಯಾದದ್ದು ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದ ಒಂದು ಡಿನ್ನರ್ ಪಾರ್ಟಿಯಲ್ಲಿ. ಅಲ್ಲಿಂದ ಪರಿಚಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಾರೆ. 3 ವರ್ಷಗಳ ಕಾಲ ಲವ್ ಬರ್ಡ್ಸ್ ಆಗಿ ಎಲ್ಲೊಂದರಲ್ಲಿ ಸುತ್ತಾಡಿ ಬಳಿಕ ಒಬ್ಬರನ್ನೊಬ್ಬರು ಮದುವೆಯಾಗಲು ತೀರ್ಮಾನಿಸಿದ್ದಾರೆ. 18ವರ್ಷ ಆಗುವುದನ್ನೇ ಕಾಯ್ತಾ ಇದ್ರು ಅಂತ ಕಾಣ್ಸುತ್ತೆ. 18 ವರ್ಷ ತುಂಬಿದ ಕೂಡಲೇ ಇಬ್ಬರು ಸತಿಪತಿಗಳಾಗಿದ್ದಾರೆ. ಈ ಮೂಲಕ ಇವರ ಮೂರು ವರ್ಷದ ಪ್ರೀತಿ ನಿರಂತರವಾದಂತಾಗಿದೆ.
ಈತನಿಗೆ 78 ವಯಸ್ಸು ಆಗಿದೆ ಅಂದ್ರೆ, ಹೆಂಡ್ತಿ, ಮೊಮ್ಮಕ್ಕಳು ಇರ್ತಾರೆ ಎನ್ನುವುದು ಸಹಜ. ಆದ್ರೆ, ರಶೀದ್ ಬಹುಪತ್ನಿ ವಲ್ಲಭನಲ್ಲ. ಈಗನಿಗೂ ಇದು ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್ ಲವ್ ಮತ್ತು ಫಸ್ಟ್ ಹೆಂಡತಿ ಎನ್ನುವುದು ವಿಶೇಷ.
ಫಿಲಿಪೈನ್ಸ್ ಕಾನೂನು ಏನು ಹೇಳುತ್ತೆ? ಫಿಲಿಪೈನ್ಸ್‌ನ ಕಾನೂನಿನ ಪ್ರಕಾರ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಪೋಷಕರಿಂದ ಒಪ್ಪಿಗೆ ಪಡೆಯಬೇಕು. ಅದರಂತೆ ಈ ಜೋಡಿಯ ಕುಟುಂಬದವರು ಪರಸ್ಪರ ಒಪ್ಪಿಗೆ ಸೂಚಿಸಿದ್ದರಿಂದ ಇವರಿಬ್ಬರ ಮದ್ವೆಗೆ ಯಾವುದೇ ಕಾನೂನು ಅಡ್ಡಿಯಾಗಿಲ್ಲ.ಈಗ ಈ ದಂಪತಿ ಪ್ರಸ್ತು ಕಾರ್ಮೆನ್ ಪಟ್ಟಣದಲ್ಲಿರುವ ತಮ್ಮ ಹೊಸ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏನೇ ಆಗಲಿ ಹೊಸ ಜೀವನ ಆರಂಭಿಸಿದ ಈ ಜೋಡಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Wed, 5 October 22