ಭಾಂಗ್ರಾ ನೃತ್ಯ ಮಾಡಿದ ರಾವಣ ನೆಟ್ಟಿಗರ ಅಚ್ಚರಿ, ವಿಡಿಯೋ ವೈರಲ್

Bhangra Dance : ಪ್ರೇಕ್ಷಕರನ್ನು ರಂಜಿಸಲು ರಾವಣ ಪಾತ್ರಧಾರಿ ಭಾಂಗ್ರಾ ನೃತ್ಯ ಮಾಡಿದ ವಿಡಿಯೋ ವೈರಲ್ ಮತ್ತೆ ವೈರಲ್ ಆಗುತ್ತಿದೆ. ನೀವು ನೋಡಿ ಆನಂದಿಸಿ.

ಭಾಂಗ್ರಾ ನೃತ್ಯ ಮಾಡಿದ ರಾವಣ ನೆಟ್ಟಿಗರ ಅಚ್ಚರಿ, ವಿಡಿಯೋ ವೈರಲ್
ರಾವಣನ ಭಾಂಗ್ರಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 06, 2022 | 2:37 PM

Viral Video : ಹತ್ತುದಿನಗಳ ಕಾಲ ದೇಶಾದ್ಯಂತ ವಿಜಯದಶಮಿಯ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಎಲ್ಲೆಡೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನೋರಂಜಾ ಕಾರ್ಯಕ್ರಮಗಳು ಏರ್ಪಾಡಾಗಿದ್ದವು. ಈ ಪೈಕಿ  ಪ್ರೇಕ್ಷಕರನ್ನು ರಂಜಿಸಲು ರಾವಣ ಪಾತ್ರಧಾರಿಯು ಭಾಂಗ್ರಾ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. 30 ಸೆಕೆಂಡುಗಳ ವಿಡಿಯೋ ಹಳೆಯದೇ ಆಗಿದ್ದರೂ ಈಗ ಮತ್ತೆ ಎಲ್ಲರನ್ನೂ ಹಿಡಿದಿಡುತ್ತಿದೆ. ರಾಮಲೀಲಾದ ಪಾತ್ರಗಳು ವೇಷಭೂಷಣ ಧರಿಸಿ ನರ್ತಿಸಿರುವುದು ಆಕರ್ಷಕವಾಗಿದೆ. ‘ಮಿತ್ರ ದ ನಾ ಚಲ್ದಾ’ ಪಂಜಾಬಿ ಹಾಡಿಗೆ ರಾವಣ ಭಾಂಗ್ರಾ ನರ್ತಿಸುವುದಂತೂ ಬಹಳ ಸುಂದರವಾಗಿದೆ.

ಈ ನೃತ್ಯಕ್ಕೆ ರಾವಣನನ್ನು ಪ್ರೇಕ್ಷಕರು ಹುರಿದುಂಬಿಸುತ್ತಿರುವುದನ್ನು ನೋಡಬಹುದು. ಜೊತೆಗಿರುವ ಪಾತ್ರಧಾರಿಗಳು ಅವನ ಹೆಜ್ಜೆಗೆ ಹೆಜ್ಜೆ ಸೇರಿಸುವುದನ್ನು ಕಾಣಬಹುದು. ಈ ವಿಡಿಯೋ ಈಗಾಗಲೇ 23,000ಕ್ಕೂ ಹೆಚ್ಚು ವೀಕ್ಷಕರನ್ನು ತಲುಪಿದೆ. ಸುಮಾರು 300 ರೀಟ್ವೀಟ್​ ಹೊಂದಿದೆ.

ಸೂಪರ್​ ಆಗಿದೆ ಪಂಜಾಬಿ ನೃತ್ಯ ಎಂದಿದ್ದಾರೆ ಒಬ್ಬ ಖಾತೆದಾರರು. ಹಿಂದೆ ಎಂದೂ ನೋಡದಂಥ ಅತ್ಯಂತ ಉಲ್ಲಾಸದ ವಿಡಿಯೋ ಇದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿ ನನ್ನ ಈ ದಿನ ಸಾರ್ಥಕವಾಯಿತು ಎಂದಿದ್ದಾರೆ ಮಗದೊಬ್ಬರು.

ನಿಮಗೇನೆನ್ನಿಸುತ್ತಿದೆ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:16 am, Thu, 6 October 22