ಕುರಿಗಳನ್ನು ತಳ್ಳಿದಂತೆ ತಳ್ಳಿ ಮೆಟ್ರೋ ಬಾಗಿಲು ಹಾಕಿದ ದೆಹಲಿ ಪೊಲೀಸರು
Metro Train : ಈ ವಿಡಿಯೋ ನೋಡುವುದಕ್ಕಿಂತ ಇದರಲ್ಲಿ ರೆಕಾರ್ಡ್ ಆದ ಆ ಇಬ್ಬರು ಪುರುಷರ ಜಗಳದ ಧ್ವನಿ ಕೇಳುವುದೇ ಆಸಕ್ತಿಕರವಾಗಿದೆ. ಕೇಳಿ ಎಂಥ ಲಯಬದ್ಧವಾಗಿದೆ! ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.
Viral Video : ಮೆಟ್ರೋ ರೈಲಿನೊಳಗೆ ಮಹಿಳೆಯರ ಸೀಟಿಗಾಗಿ ಜಗಳಾಡುತ್ತಿರುವುದು, ಡ್ಯಾನ್ಸ್ ಮಾಡುವುದು, ಅನೇಕ ಪ್ರತಿಭಾ ಪ್ರದರ್ಶನಗಳ ರೀಲ್ಸ್… ಹೀಗೆ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಆದರೆ ಈ ವಿಡಿಯೋ ಮಾತ್ರ ವಿಭಿನ್ನವಾಗಿದೆ. ದೆಹಲಿಯ ಮೆಟ್ರೋ ರೈಲಿನ ಕೋಚ್ನಲ್ಲಿ ಇಬ್ಬರು ಪುರುಷರ ಜಗಳದಿಂದಾಗಿ ರೈಲಿನ ಬಾಗಿಲು ಮುಚ್ಚುವುದು ದುಸ್ಸಾಹಸವಾಗಿದೆ. ಮೊದಲೇ ತುಂಬಿತುಳುಕುತ್ತಿರುವ ರೈಲು, ಅದರಲ್ಲಿ ಇವರಿಬ್ಬರ ಜಗಳ. ಕೊನೆಗೂ ಪೊಲೀಸರು ಅಲ್ಲಿದ್ದ ಜನರನ್ನು ತಳ್ಳಿ ತಳ್ಳಿ ಬಾಗಿಲು ಮುಚ್ಚಿ ರೈಲು ಚಲಿಸಲು ಅನುಕೂಲವಾಗುವಂತೆ ಸಹಕರಿಸಿದ್ದಾರೆ. ಇದೀಗ ಆನ್ಲೈನ್ನಲ್ಲಿ ವೈರಲ್ ಆದ ಈ ವಿಡಿಯೋ ನೋಡಿ ನೆಟ್ಟಿಗರಿಗಂತೂ ಪುಕ್ಕಟೆ ಮನರಂಜನೆ ಪಡೆಯುತ್ತಿದ್ದಾರೆ.
ಕಚೇರಿಯ ಸಮಯದಲ್ಲಿ ಮೆಟ್ರೋ ಪ್ರಯಾಣವೆಂದರೆ ದೊಡ್ಡ ದುಸ್ತರ. ಈ ವಿಡಿಯೋದಲ್ಲಿ ಕೇಳಿಬಂದಿರುವ ಧ್ವನಿಗಳನ್ನು ಆಲಿಸಿ. ಇಬ್ಬರು ಪುರುಷರು ಜಗಳಾಡುತ್ತಿದ್ದಾರೆ. ಒಬ್ಬ ನಹೀಂ ಜಾಗಾ ಹೈ ಎನ್ನುತ್ತಿದ್ದಾನೆ ಇನ್ನೊಬ್ಬ ಬಹೂತ್ ಜಾಗಾ ಹೈ ಎನ್ನುತ್ತಿದ್ದಾನೆ. ಎಷ್ಟು ಲಯಬದ್ಧವಾಗಿದೆ ನೋಡಿ ಈ ಜಗಳ!
View this post on Instagram
ಈ ವಿಡಿಯೋ ಅನ್ನು 4,00,000 ಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 49,000 ಜನರು ಇಷ್ಟಪಟ್ಟಿದ್ದಾರೆ. ಈ ಇಬ್ಬರ ಜಗಳದಲ್ಲಿ ಪ್ರಯಾಣಿಕರು ಬಾಗಿಲುಗಳಿಗೆ ಅಂಟಿಕೊಂಡಿರುವುದರಿಂದ ಬಾಗಿಲುಗಳು ಮುಚ್ಚಿಕೊಳ್ಳುತ್ತಿಲ್ಲ. ಆಗ ಪೊಲೀಸರು ಆ ಜನರನ್ನೆಲ್ಲ ತಳ್ಳಿ ಕೊನೆಗೂ ಬಾಗಿಲುಗಳನ್ನು ಯಶಸ್ವಿಯಾಗಿ ಮುಚ್ಚಿದ್ಧಾರೆ.
ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ ಈ ವಿಡಿಯೋದ ಆಡಿಯೋ ಕೇಳಿ ಕೇಳಿ. ಪರ್ಫೆಕ್ಟ್ ಆಡಿಯೋ ಈ ವಿಡಿಯೋಗೆ ಎಂದಿದ್ದಾರೆ ಒಬ್ಬ ಖಾತೆದಾರರು. ಜಪಾನ್ನಲ್ಲಿರುವ ಬುಲೆಟ್ ಟ್ರೇನ್ ಇಂಡಿಯಾಗೆ ಬಂದಿದೆ ಎನ್ನಿಸುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತುಂಬಾ ಜಾಗ ಇದೆಯಲ್ಲ ಟ್ರೇನಿನಲ್ಲಿ. ಹೌದಾ, ಅಲ್ಲವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:37 pm, Thu, 6 October 22